Punjab Election Results 2022: ಎಎಪಿ ವಿಜಯಪತಾಕೆ, ಕೇಜ್ರಿವಾಲ್‌ ಹೇಳಿದ್ದೇನು?

ಚಂಡೀಗಢ, ಮಾರ್ಚ್ 10: ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷವು ಭರ್ಜರಿಯಾಗಿ ಗೆಲುವು ಸಾಧಿಸಿದೆ. ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, "ಎಎಪಿ ದೇಶದ ರಾಜಕೀಯವನ್ನು ಬದಲಾಯಿಸಿದೆ," ಎಂದು ಹೇಳಿದರು.

ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಉಲ್ಲೇಖವನ್ನು ಮಾಡಿದ್ದಾರೆ. "ಸ್ವಾತಂತ್ರ್ಯದ ನಂತರ ವ್ಯವಸ್ಥೆಯು ಬದಲಾಗದಿದ್ದರೆ ಏನೂ ಬದಲಾಗುವುದಿಲ್ಲ," ಎಂದು ತಿಳಿಸಿದ್ದಾರೆ.

"ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಅವರು ಏನನ್ನೂ ಬದಲಾಯಿಸಲಿಲ್ಲ," ಎಂದು ವಿಪಕ್ಷಗಳ ವಿರುದ್ಧ ಟೀಕೆ ಮಾಡಿದ ಅರವಿಂದ್ ಕೇಜ್ರಿವಾಲ್‌, "ಎಎಪಿ ದೇಶದ ರಾಜಕೀಯವನ್ನು ಬದಲಾಯಿಸಿದೆ," ಎಂದು ಹೇಳಿದರು. "ನಾವು ವ್ಯವಸ್ಥೆಯನ್ನು ಬದಲಾಯಿಸಿದ್ದೇವೆ, ನಾವು ಸರ್ಕಾರಿ ಶಾಲೆ, ಆಸ್ಪತ್ರೆಗಳನ್ನು ನಿರ್ಮಾಣ ಮಾಡಿದ್ದೇವೆ," ಎಂದು ಅರವಿಂದ್ ಕೇಜ್ರಿವಾಲ್ ಉಲ್ಲೇಖ ಮಾಡಿದರು.

We will make an India where no student has to go to Ukraine to study medicine Says Arvind Kejriwal

"ನಾನು ಪಂಜಾಬ್‌ ಮುಖ್ಯಮಂತ್ರಿ ಆಗಲಿರುವ ನನ್ನ ಸಹೋದರ ಭಗವಂತ್‌ ಮಾನ್‌ ಅವರನ್ನು ಅಭಿನಂದಿಸಲು ಬಯಸುತ್ತೇನೆ. ಆಪ್‌ 90ಕ್ಕೂ ಅಧಿಕ ಸ್ಥಾನವನ್ನು ದಾಟಿದೆ. ಫಲಿತಾಂಶಗಳು ಇನ್ನೂ ಕೂಡಾ ಬರುತ್ತಿದೆ. ಜನರು ನಮ್ಮ ಮೇಲೆ ಅಪಾರ ನಂಬಿಕೆಯನ್ನು ಇರಿಸಿದ್ದಾರೆ. ನಾವು ಆ ನಂಬಿಕೆಗೆ ದಕ್ಕೆ ಉಂಟು ಮಾಡುವುದಿಲ್ಲ. ನಾವು ಈ ದೇಶದ ರಾಜಕೀಯವನ್ನು ಬದಲಾವಣೆ ಮಾಡುತ್ತೇವೆ," ಎಂದು ತಿಳಿಸಿದರು.

ಇನ್ನು ಆಮ್ ಆದ್ಮಿ ಪಕ್ಷಕ್ಕೆ ಸೇರುವಂತೆ ಕೇಜ್ರಿವಾಲ್ ಪಂಜಾಬ್ ಜನತೆಗೆ ಮನವಿ ಮಾಡಿದರು. "ನಾನು ಪಂಜಾಬ್‌ನ ಜನರನ್ನು ಎಎಪಿಗೆ ಸೇರಲು ಮನವಿ ಮಾಡಲು ಬಯಸುತ್ತೇನೆ. ಕೆಲವೊಮ್ಮೆ ಜನರು ಏನು ಮಾಡಬಹುದು ಎಂದು ಯೋಚಿಸುತ್ತಾರೆ. ಅವರು ಸಾಮಾನ್ಯ ಜನರು. ಆದರೆ ನಾನು ಜನರನ್ನು ಕೇಳಲು ಬಯಸುತ್ತೇನೆ. ಚನ್ನಿಯನ್ನು ಸೋಲಿಸಿದವರು ಯಾರು?," ಎಂದು ಪ್ರಶ್ನೆ ಮಾಡಿದರು.

ಉಕ್ರೇನ್‌ ವಿದ್ಯಾರ್ಥಿಗಳ ಉಲ್ಲೇಖ ಮಾಡಿದ ಅರವಿಂದ್‌ ಕೇಜ್ರಿವಾಲ್‌

"ವೈದ್ಯಕೀಯ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಉಕ್ರೇನ್‌ಗೆ ಹೋಗುವ ಸ್ಥಿತಿ ನಿರ್ಮಾಣವಾಗದಂತಹ ಭಾರತ ನಾವು ಸೃಷ್ಟಿ ಮಾಡುತ್ತೇವೆ. ಈ ಫಲಿತಾಂಶದ ಮೂಲಕ ಜನರು ಕೇಜ್ರಿವಾಲ್‌ ಭಯೋತ್ಪಾದಕ ಅಲ್ಲ ಎಂಬುವುದನ್ನು ಸಾಬೀತುಪಡಿಸಿದ್ದಾರೆ. ಕೇಜ್ರಿವಾಲ್‌ ದೇಶಭಕ್ತ ಎಂದು ಜನರು ಸಾಬೀತುಪಡಿಸಿದ್ದಾರೆ," ಎಂದು ತಿಳಿಸಿದ್ದಾರೆ.

ಸುಖ್‌ಬೀರ್‌ ಸಿಂಗ್‌ ಬಾದಲ್‌ ಸೋತಿದ್ದಾರೆ, ಕ್ಯಾಪ್ಟನ್‌ ಸಾಹೇಬರು ಸೋಲು ಕಂಡಿದ್ದಾರೆ. ಚನ್ನಿ ಸಾಹೇಬರು ಕೂಡಾ ಸೋತಿದ್ದಾರೆ. ಪ್ರಕಾಶ್‌ ಸಿಂಗ್‌ ಬಾದಲ್‌ ಕೂಡಾ ಸೋಲನ್ನು ಅನುಭವಿಸಿದ್ದಾರೆ. ನವಜೋತ್‌ ಸಿಂಗ್‌ ಸಿಧು, ವಿಕ್ರಮ್‌ ಸಿಂಗ್‌ ಮಜಿಥಿಯಾ ಕೂಡಾ ಸೋತಿದ್ದಾರೆ. ಪಂಜಾಬ್‌ ಅದ್ಬುತ ಕಾರ್ಯವನ್ನು ಮಾಡಿದೆ," ಎಂದು ಅರವಿಂದ್‌ ಕೇಜ್ರಿವಾಲ್‌ ಹಾಡಿ ಹೊಗಳಿದರು. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+