ಏನಾದರಾಗಲಿ ಮಂದಿರ ಅಲ್ಲೇ ಕಟ್ಟುವೆವು: ಅಮಿತ್ ಶಾ ಪುನರುಚ್ಛಾರ
ನವದೆಹಲಿ, ಜನವರಿ 12: ಲೋಕಸಭೆ ಚುನಾವಣೆ ಹತ್ತಿರ ಬರುತ್ತಲೆ ಬಿಜೆಪಿ ಮತ್ತೆ ರಾಮ ಮಂದಿರ ವಿಷಯವನ್ನು ಮುನ್ನಲೆಗೆ ತಂದಿದೆ. ಇಂದು ನಡೆದ ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ 'ಮಂದಿರ ಅಲ್ಲೇ ಕಟ್ಟುವೆವು' ಎಂದು ಅಮಿತ್ ಶಾ ಅಬ್ಬರಿಸಿದ್ದಾರೆ.
ಮೋದಿ ಅವರು ಇತ್ತೀಚೆಗಷ್ಟೆ ಅಯೋಧ್ಯೆ ತೀರ್ಪಿಗೆ ಕಾದು ರಾಮ ಮಂದಿರ ನಿರ್ಮಾಣ ಮಾಡುತ್ತೇವೆ ಎಂದಿದ್ದರು. ಇದನ್ನು ಆರ್‌ಎಸ್‌ಎಸ್‌ನ ಅಂಗ ಸಂಸ್ಥೆಗಳು ಸೇರಿದಂತೆ ಬಿಜೆಪಿ ಬೆಂಬಲಿತ ಕೆಲವು ಹಿಂದೂಪರ ಸಂಘಟನೆಗಳು ಒಪ್ಪಿರಲಿಲ್ಲ.
ಆದರೆ ಇಂದು ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ನೇರವಾಗಿ ರಾಮ ಮಂದಿರವನ್ನು ನಿಗದಿತ ಜಾಗದಲ್ಲಿಯೇ ಕಟ್ಟುತ್ತೇವೆ ಎಂದು ಹೇಳುವ ಮೂಲಕ ಮೋದಿ ಹೇಳಿಕೆಯ ವಿರುದ್ಧವಾದ ಹೇಳಿಕೆ ನೀಡಿದ್ದಾರೆ. ಅಮಿತ್ ಶಾ ಹೇಳಿಕೆಯಲ್ಲಿ ಅಯೋಧ್ಯೆ ತೀರ್ಪಿಗೆ ಕಾಯುತ್ತೇವೆ ಎಂಬ ಭಾವ ಇರಲಿಲ್ಲವೆನ್ನುವುದು ಗಮನಿಸಬೇಕಾದ ಅಂಶ.

ರಾಮ ಮಂದಿರ ಕಟ್ಟಲು ಬಿಜೆಪಿ ಸಿದ್ಧವಾಗಿದೆ, ಅಯೋಧ್ಯೆ ಪ್ರಕರಣಕ್ಕೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ. ಆದರದೇನೇ ಆಗಲಿ ರಾಮ ಮಂದಿರವನ್ನು ಅಲ್ಲಿಯೇ ಕಟ್ಟುತ್ತೇವೆ ಎಂದು ಅಮಿತ್ ಶಾ ದೊಡ್ಡ ಗಂಟಲಿನಲ್ಲಿ ಹೇಳಿ ಬಿಜೆಪಿ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದ್ದಾರೆ.











Click it and Unblock the Notifications