ಕಲ್ಕಾ-ಶಿಮ್ಲಾ ರೈಲು ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಯಶಸ್ವಿ
Recommended Video

ನವದೆಹಲಿ, ನವೆಂಬರ್ 12 : 115 ವರ್ಷದ ಹಳೆಯ ಕಲ್ಕಾ-ಶಿಮ್ಲಾ ರೈಲು ಮಾರ್ಗದಲ್ಲಿ ವಿಸ್ತಡೋಮ್ ಗಾಜು ಲೇಪಿತ ರೈಲು ಪ್ರಾಯೋಗಿಕ ಸಂಚಾರ ನಡೆಸಿದೆ. 96 ಕಿ.ಮೀ. ಉದ್ದದ ನ್ಯಾರೊಗೇಜ್ ಮಾರ್ಗವಿದಾಗಿದೆ.
ಸೋಮವಾರ ಕಲ್ಕಾ-ಶಿಮ್ಲಾ ರೈಲು ಮಾರ್ಗದಲ್ಲಿ ವಿಸ್ತಡೋಮ್ ಲೇಪಿತ ರೈಲು ಬೋಗಿಗಳು ಪ್ರಾಯೋಗಿಕ ಸಂಚಾರ ನಡೆಸಿವೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಟ್ವೀಟ್ ಮಾಡಿದ್ದಾರೆ.
ಗಾಜಿನ ಮೇಲ್ಛಾವಣಿ ಹೊಂದಿರುವ ರೈಲಿನ ಬೋಗಿಯಿಂದಾಗಿ ಪ್ರಯಾಣಿಕರು ಬೆಟ್ಟ-ಗುಡ್ಡಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ನ್ಯಾರೊಗೇಜ್ ಮಾರ್ಗದಲ್ಲಿ ವಿಸ್ತಡೋಮ್ ಗಾಜು ಲೇಪಿತ ರೈಲು ಸಂಚಾರ ಆರಂಭವಾಗಲಿದೆ ಎಂಬ ನಿರೀಕ್ಷೆ ಹಲವು ದಿನಗಳಿಂದ ಇತ್ತು.

ಕಲ್ಕಾ-ಶಿಮ್ಲಾ ರೈಲು ಮಾರ್ಗ ದೇಶದ ಉತ್ತರ ಭಾಗದ ಪರ್ವತ ಪ್ರಾಂತ್ಯದಲ್ಲಿನ ನ್ಯಾರೊಗೇಜ್ ಮಾರ್ಗವಾಗಿದೆ. ಹರ್ಯಾಣಾದ ಕಾಲ್ಕಾದಿಂದ ಹಿಮಾಚಲ ಪ್ರದೇಶದ ಶಿಮ್ಲಾ ವರೆಗಿನ 96 ಕಿ.ಮೀ. ಉದ್ದದ ಮಾರ್ಗವಿದು.

ಯುರೋಪಿಯನ್ನು ಶಿಮ್ಲಾಕ್ಕೆ ಬರಲು ಮತ್ತು ತೆರಳಲು ಶತಮಾನದ ಹಿಂದೆಯೇ ಕಲ್ಕಾ-ಶಿಮ್ಲಾ ರೈಲು ಮಾರ್ಗವನ್ನು ನಿರ್ಮಿಸಲಾಗಿತ್ತು. ಆಗ ದೇಶದಲ್ಲಿದ್ದ ಬ್ರಿಟಿಷರಿಗೆ ಶಿಮ್ಲಾ ಬೇಸಿಗೆ ಕಾಲದ ರಾಜಧಾನಿಯಾಗಿತ್ತು.
The Kalka - Shimla Rail, equipped with a Vistadome Coach, ran its first trial trip today. Passengers can now soak in the aesthetic landscape with better vision through the glass top ceiling of the newly converted coach. pic.twitter.com/qzFRzwczNq
— Piyush Goyal (@PiyushGoyal) November 10, 2018











Click it and Unblock the Notifications