1971ರ ಯುದ್ಧ ನೆನಪಿಸಿಕೊಳ್ಳಿ, ಪಾಕ್ ಗೆ ವೆಂಕಯ್ಯ ನಾಯ್ಡು ಖಡಕ್ ಎಚ್ಚರಿಕೆ

Posted By:
Subscribe to Oneindia Kannada

ನವದೆಹಲಿ, ಜುಲೈ 23 : ಭಯೋತ್ಪಾದನೆಗೆ ಪ್ರಚೋದಿಸುತ್ತಿರುವ ಪಾಕಿಸ್ತಾನ ವಿರುದ್ಧ ಎನ್ ಡಿಎ ಪಕ್ಷದ ಉಪ ರಾಷ್ಟ್ರಪತಿ ಅಭ್ಯರ್ಥಿ ವೆಂಕಯ್ಯ ನಾಯ್ಡು ಗುಡುಗಿದ್ದಾರೆ.

488 ಸಂಸದರ ಮತಗಳೊಂದಿಗೆ ನಾಯ್ಡು ಮುಂದಿನ ಉಪರಾಷ್ಟ್ರಪತಿ

ಭಾನುವಾರ ಕಾರ್ಗಿಲ್ ಪರಾಕ್ರಮ ಪರೇಡ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, "ಭಯೋತ್ಪಾದನೆಯನ್ನು ಪ್ರಯೋಜಿಸುತ್ತಿರುವ ಪಾಕಿಸ್ತಾನ 1971ರ ಯುದ್ಧವನ್ನು ನೆನಪಿಸಿಕೊಳ್ಳಬೇಕಿದೆ. ಭಯೋತ್ಪಾದನೆಗೆ ನೀಡುತ್ತಿರುವ ನೆರವು ಹಾಗೂ ಕುಮ್ಮಕ್ಕುಗಳು ಅವರಿಗೆ ಎಂದಿಗೂ ಸಹಾಯಕವಾಗುವುದಿಲ್ಲ ಎಂದರು.

Venkaiah Naidu's warning to Pakistan on terror: 'Recall what happened in 1971'

ಭಯೋತ್ಪಾದನೆ ಎಂಬುದು ಮಾನವೀಯತೆಯ ಶತ್ರುವಾಗಿದೆ. ಅದಕ್ಕೆ ಧರ್ಮ ಹಾಗೂ ಜಾತಿಯಿಲ್ಲ. ದುರಾದೃಷ್ಟಕರ ವಿಚಾರವೆಂದರೆ ಇಂತಹ ಭಯೋತ್ಪಾದನೆ ಎಂಬುದು ಪಾಕಿಸ್ತಾನದಲ್ಲಿ ರಾಷ್ಟ್ರನೀತಿಯಾಗಿದೆ.

ಭಯೋತ್ಪಾದನೆ ನೆರವು ನೀಡುವುದು ಹಾಗೂ ಕುಮ್ಮಕ್ಕು ನೀಡುವುದರಿಂದ ತಮಗೆ ಯಾವ ಸಹಾಯವಾಗುವುದಿಲ್ಲ ಎಂಬುದನ್ನು ನೆರೆರಾಷ್ಟ್ರ ಮನಗಾಣಬೇಕಿದೆ. 1971ರಲ್ಲಿ ಏನಾಯಿತು ಎಂಬುದನ್ನು ಅವರು ನೆನೆಯಬೇಕಿದೆ ಎಂದು ಖಡಕ್ ಮಾತಿನಲ್ಲಿ ಗುಡುಗಿದರು.

ಪಾಕ್ ನಿಂದ ವಲಸೆ ಬಂದಿದ್ದ ಹಿಂದೂಗಳಿಗೆ ಭಾರತದ ಪೌರತ್ವ

ಇದೇ ವೇಳೆ ಕಾಶ್ಮೀರ ವಿವಾದ ಕುರಿತಂತೆ ಮಾತನಾಡಿರುವ ಅವರು, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಕಾಶ್ಮೀರದ ಒಂದು ಇಂಚನ್ನು ಬಿಟ್ಟುಕೊಡುವುದಿಲ್ಲ.

ನಾವು ಶಾಂತಿಯನ್ನು ಪ್ರೀತಿಸುವ ಜನ. ಯಾವುದೇ ರಾಷ್ಟ್ರದ ಮೇಲೆ ದಾಳಿ ಮಾಡುವುದಿಲ್ಲ. ಇದು ನಮ್ಮ ವಿಶೇಷತೆ. ನಾವು ಯುದ್ಧವನ್ನು ಬಯಸುವುದಿಲ್ಲ. ಹಿಂಸಾಚಾರಗಳು ನಮಗೆ ಬೇಕಿಲ್ಲ. ನಮಗೆ ಶಾಂತಿ ಬೇಕು.

Venkaiah Naidu says, Farmers loan waiver has become a fashion now | Oneindia Kannada

ನೆರೆರಾಷ್ಟ್ರದೊಂದಿಗೆ ಉತ್ತಮ ಸಂಬಂಧ ಹೊಂದುವುದು ನಮಗೆ ಬೇಕು. ನಮ್ಮಂತೆಯೇ ಅವರೂ ನಡೆದುಕೊಳ್ಳಬೇಕು ಎಂದು ಪಾಕಿಸ್ತಾನಕ್ಕೆ ಸಲಹೆ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Hitting out at Pakistan-sponsored terrorism, National Democratic Alliance (NDA) vice-presidential nominee M Venkaiah Naidu asked Islamabad on Sunday to recall the 1971 war and said aiding and abetting terror will not help them. Addressing Kargil Parakram Parade in New Delhi, Naidu said terrorism is the enemy of humanity, it has no religion and it has unfortunately become Pakistan’s state policy.
Please Wait while comments are loading...