• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾಜಪೇಯಿ ಕನಸು ನನಸಾಗಿಸಿ ಇಂದು ಸಂಸ್ಮರಣಾ ದಿನ ಆಚರಣೆ

|

ನವದೆಹಲಿ, ಆಗಸ್ಟ್ 16: ಮಾಜಿ ಪ್ರಧಾನಿ ಹಾಗೂ ಬಿಜೆಪಿ ಸರ್ವೋಚ್ಛ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಮೊದಲ ಸಂಸ್ಮರಣಾ ದಿನ ಇಂದು ನಡೆಯಲಿದೆ.

ಪ್ರಧಾನಿ ಮೋದಿ ಹಾಗೂ ಸಚಿವ ಸಂಪುಟದ ಹಿರಿಯ ಸದಸ್ಯರು ಅಟಲ್ ಸದೈವ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಲಿದ್ದಾರೆ.

'ಭಾರತದ ರಾಜಕೀಯ ಭೀಷ್ಮ'ನ ರಾಜಕಾರಣದ ಮೈಲುಗಲ್ಲುಗಳು

ಸ್ಮಾರಕ ಇರುವ ಜಾಗದಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅಟಲ್ ಬದುಕಿನ ಮಾಹಿತಿಗಳು ಇರಲಿವೆ.

ಬಿಜೆಪಿಯ ಮೊದಲ ಸರ್ಕಾರ ರಚಿಸಿದ್ದ ವಾಜಪೇಯಿ ಅವರು 2018ರ ಆಗಸ್ಟ್ 16ರಂದು ಏಮ್ಸ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವಾಜಪೇಯಿ ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿತ್ತು.

ಅಟಲ್ ಬಿಹಾರಿ ವಾಜಪೇಯಿ ಅವರ 'ಇಷ್ಟದ' ಸಂಗತಿಗಳು...

ದೇಶ ಕಂಡ ಅತ್ಯುತ್ತಮ ಸಂಸದೀಯ ಪಟು, ಅಜಾತಶತೃ, ಕವಿಹೃದಯದ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಅಟಲ್ ಪಾತ್ರರಾಗಿದ್ದರು. ದೇಶದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಬೇಕು. ಸಂವಿಧಾನದ 370ನೇ ವಿಧಿ ರದ್ದುಗೊಳಿಸಬೇಕು ಸೇರಿ ಇತರೆ ವಿಚಾರಗಳ ಬಗ್ಗೆ ವಾಜಪೇಯಿ ಅವರು ಸ್ಪಷ್ಟವಾದ ನಿಲುವು ಹೊಂದಿದ್ದರು.

ಈಗ ವಾಜಪೇಯಿ ಅವರ ಮೊದಲ ಸಂಸ್ಮರಾರ್ಥ ದಿನದ ಅವಧಿಗೆ ಇದು ಸಾಕಾರಗೊಂಡಿದೆ.

English summary
Former Prime Minister Atal Bihari Vajpayee Death Anniversary Today. PM Modi to pray tribute at Atal Sadaiva.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X