• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಫೀಜ್‌-ವೈದಿಕ್‌ ಭೇಟಿ : ಯಾರು,ಏನು ಹೇಳಿದರು?

|
Google Oneindia Kannada News

ನವದೆಹಲಿ, ಜು.15 : ಯೋಗಗುರು ಬಾಬಾ ರಾಮದೇವ್ ಅವರ ನಿಕಟವರ್ತಿ, ಪತ್ರಕರ್ತ ವೇದ್ ಪ್ರತಾಪ್ ವೈದಿಕ್ ಅವರು ಮುಂಬೈ ದಾಳಿಯ ರೂವಾರಿ, ಜಮಾತ್-ಉದ್-ದವಾ ಉಗ್ರ ಸಂಘಟನೆಯ ನಾಯಕ ಹಫೀಜ್ ಮೊಹಮ್ಮದ್ ಸಯೀದ್ ಅವರನ್ನು ಭೇಟಿಯಾಗಿರುವುದು ಭಾರೀ ವಿವಾದ ಸೃಷ್ಟಿಸಿದೆ. ವಿವಿಧ ನಾಯಕರು ಈ ಭೇಟಿಯ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ವೇದ್ ಪ್ರತಾಪ್ ವೈದಿಕ್ ಅವರೇ ತಾವು ಹಫೀಜ್ ಅವರನ್ನು ಜುಲೈ 2ರಂದು ಪಾಕಿಸ್ತಾನದ ಲಾಹೋರ್ ನಲ್ಲಿ ಭೇಟಿಯಾಗಿರುವುದಾಗಿ ಹೇಳಿದ್ದು, ಇಬ್ಬರೂ ಮಾತುಕತೆ ನಡೆಸುತ್ತಿರುವ ಚಿತ್ರವನ್ನು ಬಿಡುಗಡೆ ಮಾಡಿದ್ದರು. ವಿವಾದ ಉಂಟಾದ ಮೇಲೆ ಹೇಳಿಕೆ ನೀಡಿರುವ ಅವರು, '"ಇದು ಯಾರ ಒತ್ತಾಸೆಯಿಂದ ನಡೆದ ಭೇಟಿಯಲ್ಲ. ಒಬ್ಬ ಪತ್ರಕರ್ತನಾಗಿ ಸಮಾಜದಲ್ಲಿ ನನಗೆ ಯಾರೂ ಅಸ್ಪೃಶ್ಯರಲ್ಲ. ನಾನು ಯಾರ ದೂತನೂ ಅಲ್ಲ" ಎಂದು ಹೇಳಿದ್ದಾರೆ. [ವಿವಾದ ಸೃಷ್ಟಿಸಿರುವ ಪ್ರತಾಪ್, ಉಗ್ರ ಹಫೀಜ್ ಭೇಟಿ]

ಈ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಕೇಂದ್ರ ಸಚಿವ ಶಶಿ ತರೂರ್, "ವೈದಿಕ್‌ ಅವರು ಪಾಕಿಸ್ತಾನಕ್ಕೆ ಹೋಗಿದ್ದು ಏಕೆ? ಅವರೇನಾದರೂ ಸರ್ಕಾರದ ಪರವಾಗಿ ಹಿಂಬಾಗಿಲ ಮಾತುಕತೆ ನಡೆಸುತ್ತಿದ್ದಾರಾ? ದೇಶದ ಜನ ಈ ಬಗ್ಗೆ ಸ್ಪಷ್ಟನೆ ಬಯಸುತ್ತಿದ್ದಾರೆ. ಈ ವಿಷಯದಲ್ಲಿ ದೇಶದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು" ಎಂದು ತಿಳಿಸಿದ್ದಾರೆ. ಪ್ರತಾಪ್ ವೈದಿಕ್ ಸಯೀದ್ ಭೇಟಿ ಯಾರು, ಏನು ಹೇಳಿದರು.

ವೇದ್ ಪ್ರತಾಪ್ ವೈದಿಕ್ ಹೇಳುವುದೇನು?

ವೇದ್ ಪ್ರತಾಪ್ ವೈದಿಕ್ ಹೇಳುವುದೇನು?

ತಮ್ಮ ಮತ್ತು ಸಯೀದ್ ಭೇಟಿ ಕುರಿತು ಮಾತನಾಡಿರುವ ವೈದಿಕ್, "ಇದು ಯಾರ ಒತ್ತಾಸೆಯಿಂದ ನಡೆದ ಭೇಟಿಯಲ್ಲ. ಒಬ್ಬ ಪತ್ರಕರ್ತನಾಗಿ ಸಮಾಜದಲ್ಲಿ ನನಗೆ ಯಾರೂ ಅಸ್ಪೃಶ್ಯರಲ್ಲ. ನಾನು ಪ್ರಧಾನಿ ಮೋದಿ ಸೇರಿದಂತೆ ಯಾರ ದೂತನೂ ಅಲ್ಲ". ಎಂದು ಹೇಳಿದ್ದಾರೆ. "ಪ್ರಧಾನಿ ಮೋದಿ ಬಗ್ಗೆ ಲಷ್ಕರೆ ಉಗ್ರನಿಗೆ ತುಂಬಾ ತಪ್ಪು ತಿಳಿವಳಿಕೆ ಇದೆ. ಆತನ ತಪ್ಪು ತಿಳಿವಳಿಕೆಯನ್ನು ನಾನು ನಿವಾರಿಸಿದ್ದೇನೆ. ಮೋದಿ ಪಾಕಿಸ್ತಾನಕ್ಕೆ ಭೇಟಿ ನೀಡಿದರೆ ಸ್ವಾಗತಿಸುವುದಾಗಿ ಆತ ಹೇಳಿದ್ದಾನೆ. ಅಷ್ಟೇ ಅಲ್ಲ, ಆತನಿಗೂ ಭಾರತಕ್ಕೆ ಬರುವ ಹಂಬಲವಿದೆ". ಎಂದು ವೈದಿಕ್ ಪ್ರತಿಕ್ರಿಯೆ ನೀಡಿದ್ದಾರೆ.

ಸಮರ್ಥನೆ ಮಾಡಿಕೊಂಡ ಬಾಬಾ ರಾಮದೇವ್

ಸಮರ್ಥನೆ ಮಾಡಿಕೊಂಡ ಬಾಬಾ ರಾಮದೇವ್

ತಮ್ಮ ಆಪ್ತ ಉಗ್ರನೊಬ್ಬನನ್ನು ಭೇಟಿ ಮಾಡಿರುವುದನ್ನು ಸಮರ್ಥಿಸಿಕೊಂಡಿರುವ ಯೋಗಗುರು ಬಾಬಾ ರಾಮದೇವ್, "ಪತ್ರಕರ್ತನಾಗಿ ವೈದಿಕ್ ಸರಿಯಾದ ಕೆಲಸವನ್ನೇ ಮಾಡಿದ್ದಾರೆ. ವೈದಿಕ್ ಸಾಮರ್ಥ್ಯದ ಬಗ್ಗೆ ನನಗೆ ವಿಶ್ವಾಸವಿದೆ. ಅವರು ಸಯೀದ್ ಮನ ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗಲಿದ್ದಾರೆ". ಎಂದು ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಹೋಗಿದ್ದು ಏಕೆ?

ಪಾಕಿಸ್ತಾನಕ್ಕೆ ಹೋಗಿದ್ದು ಏಕೆ?

ವೈದಿಕ್ ಹಫೀಜ್ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಕೇಂದ್ರ ಸಚಿವ ಶಶಿ ತರೂರ್, "ವೈದಿಕ್‌ ಅವರು ಪಾಕಿಸ್ತಾನಕ್ಕೆ ಹೋಗಿದ್ದು ಏಕೆ? ಅವರೇನಾದರೂ ಸರ್ಕಾರದ ಪರವಾಗಿ ಹಿಂಬಾಗಿಲ ಮಾತುಕತೆ ನಡೆಸುತ್ತಿದ್ದಾರಾ? ದೇಶದ ಜನ ಈ ಬಗ್ಗೆ ಸ್ಪಷ್ಟನೆ ಬಯಸುತ್ತಿದ್ದಾರೆ" ಎಂದು ಹೇಳಿದ್ದಾರೆ.

ಸರ್ಕಾರ ಯಾವುದೇ ಸಂಬಂಧ ಹೊಂದಿಲ್ಲ

ಸರ್ಕಾರ ಯಾವುದೇ ಸಂಬಂಧ ಹೊಂದಿಲ್ಲ

ವೈದಿಕ್ ಹಫೀಜ್ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, "ಈ ಪ್ರಕರಣದೊಂದಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸರ್ಕಾರ ಯಾವುದೇ ಸಂಬಂಧ ಹೊಂದಿಲ್ಲ. ಸಯೀದ್‌ ಭೇಟಿ ಮಾಡುವುದಕ್ಕೆ ಸರ್ಕಾರ ಯಾರನ್ನೂ ಕಳುಹಿಸಿಕೊಟ್ಟಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.

ದಿಗ್ವಿಜಯ್ ಸಿಂಗ್ ಹೇಳಿದ್ದೇನು?

ಹಫೀಜ್‌-ವೈದಿಕ್‌ ಭೇಟಿ ಬಗ್ಗೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಟ್ವಿಟರ್ ನಲ್ಲಿ ಪ್ರಶ್ನಿಸಿದ್ದಾರೆ.

ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪ

ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪ

ಹಫೀಜ್‌-ವೈದಿಕ್‌ ಭೇಟಿ ವಿಷಯವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, "ವೈದಿಕ್‌ಗೆ ಈ ಕಾರ‌್ಯಾಚರಣೆ ಒಪ್ಪಿಸಿದವರಾರು? ಎಂದು ಪ್ರಶ್ನಿಸಿದರು".

ಆನಂದ್ ಶರ್ಮಾ ಹೇಳಿದ್ದೇನು?

ಆನಂದ್ ಶರ್ಮಾ ಹೇಳಿದ್ದೇನು?

ಹಫೀಜ್‌-ವೈದಿಕ್‌ ಭೇಟಿ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ, "ಇದು ಬಹಳ ವಿವಾದಾತ್ಮಕ ವಿಷಯ ವೈದಿಕ್ ಕೇವಲ ಪತ್ರಕರ್ತರಲ್ಲ, ಪಕ್ಷವೊಂದ ಜೊತೆ ಗುರುತಿಸಿಕೊಂಡಿರುವ ನಾಯಕ ಆಪ್ತರು. ಆದ್ದರಿಂದ ಭೇಟಿ ಬಗ್ಗೆ ಸ್ಪಷ್ಟನೆ ನೀಡಬೇಕು" ಎಂದು ಒತ್ತಾಯಿಸಿದ್ದಾರೆ.

ಟ್ವಿಟರ್ ನಲ್ಲಿ ಶಶಿ ತರೂರ್ ಹೇಳಿದ್ದೇನು?

ಹಫೀಜ್‌-ವೈದಿಕ್‌ ಭೇಟಿ ಬಗ್ಗೆ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಟ್ವಿಟ್ ಮಾಡಿದ್ದಾರೆ.

ವೈದಿಕ್ ಭೇಟಿ ಬಗ್ಗೆ ಹಫೀಜ್‌ ಟ್ವಿಟ್

ಪತ್ರಕರ್ತ ವೈದಿಕ್ ಅವರನ್ನು ಭೇಟಿ ಮಾಡಿರುವ ಕುರಿತು ಹಫೀಜ್ ಟ್ವಿಟ್ ಮಾಡಿದ್ದಾರೆ.

ಭೇಟಿ ಬಗ್ಗೆ ಹಫೀಜ್‌ ಹೇಳುವುದೇನು?

ಪತ್ರಕರ್ತ ವೈದಿಕ್ ಅವರನ್ನ ಭೇಟಿಯಾದ ಬಗ್ಗೆ ಹಫೀಜ್‌ ಟ್ವಿಟ್ ಮಾಡಿದ್ದು ಹೀಗೆ

English summary
Political leaders react over Journalist Ved Pratap Vaidik's meeting with 26/11 mastermind Hafiz Saeed.Yoga guru Baba Ramdev's aide, Ved Pratap Vaidik meets terrorist Hafiz and himself released a photo of his meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X