' 7 ದಿನದಲ್ಲಿ ಬಂಗಲೆ ಬಿಡಿ, ಇಲ್ಲ ಅಂದ್ರೆ ನೀರು, ಕರೆಂಟ್ ಕಟ್ ಮಾಡ್ತೀವಿ'

ನವದೆಹಲಿ, ಆಗಸ್ಟ್ 19: ಏಳು ದಿನದಲ್ಲಿ ಬಂಗಲೆ ಬಿಡಿ ಇಲ್ಲ ಅಂದರೆ ಕರೆಂಟು, ನೀರು ಸೇವೆಯನ್ನು ಸ್ಥಗಿತಗೊಳಿಸುತ್ತೇವೆ ಎಂದು ಮಾಜಿ ಸಂಸದರಿಗೆ ಕೇಂದ್ರ ಎಚ್ಚರಿಕೆ ನೀಡಿದೆ.

ಕಳೆದ ಲೋಕಸಭೆಯಲ್ಲಿ ಸೋಲನ್ನು ಅನುಭವಿಸಿರುವ ಇನ್ನೂರಕ್ಕೂ ಹೆಚ್ಚು ಮಂದಿಗೆ ಕೇಂದ್ರ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಏಳು ದಿನಗಳಲ್ಲಿ ಬಂಗಲೆ ಖಾಲಿ ಮಾಡದಿದ್ದರೆ ವಿದ್ಯುತ್, ನೀರು ಸಂಪರ್ಕವನ್ನು ಕಡಿತಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದೆ.

ಸಂದಸರಿಗೆ 2014ರಲ್ಲಿ ಬಂಗಲೆ ಮಂಜೂರು ಮಾಡಲಾಗಿತ್ತು. ಮಾಜಿ ಸಂಸದರು ಹಿಂದಿನ ಲೋಕಸಭೆಯನ್ನು ವಿಸರ್ಜಿಸಿದ ಒಂದು ತಿಂಗಳೊಳಗೆ ತಮಗೆ ಕೊಟ್ಟಿರುವ ಬಂಗಲೆಯನ್ನು ಖಾಲಿ ಮಾಡಬೇಕಾಗಿತ್ತು. ಆದರೆ ಮೂರು ತಿಂಗಳು ಕಳೆದರೂ ಬಂಗಲೆ ಖಾಲಿ ಮಾಡುವಂತೆ ಕಾಣುತ್ತಿಲ್ಲ.

Vacate Bungalow In 7 Days Power And Water To Be Stopped

ಏಳು ದಿನ ಸಮಯ ನೀಡಿದ್ದರೂ ಮೂರು ದಿನ ಮುಗಿಯುತ್ತಿದ್ದಂತೆ ನೀರು, ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಹೇಳಿದೆ. ವಸತಿ ಸಮಿತಿ ಅಧ್ಯಕ್ಷ ಸಿಆರ್ ಪಾಟೀಲ್ ತಿಳಿಸಿದ್ದಾರೆ.

ಈ ಹಿಂದೆ ರಾಹುಲ್ ಗಾಂಧಿಗೂ ಕೂಡ ಬಂಗಲೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿತ್ತು. ಹೊಸದಾಗಿ ಆಯ್ಕೆಯಾಗಿರುವ ಸಂಸದರಿಗೆ ಉಳಿದುಕೊಳ್ಳಲು ಬಂಗಲೆ ಇರದೆ ಪಂಚತಾರಾ ಹೋಟೆಲ್‌ನಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+