• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತದೊಂದಿನ ಸಂಬಂಧದ ಸಂಭ್ರಮಾಚರಣೆ ಮಾಡಿದ ಅಮೆರಿಕ

|

ನವದೆಹಲಿ, ಸೆಪ್ಟೆಂಬರ್ 9: ಭಾರತದಲ್ಲಿ ಅಮೆರಿಕದ ಪ್ರತಿನಿಧಿಗಳ ಅಧಿಕೃತ ಅಸ್ತಿತ್ವದ 225ನೇ ವರ್ಷಾಚರಣೆ ಮತ್ತು ಅಮೆರಿಕದ ವಿದೇಶಾಂಗ ಇಲಾಖೆಯ 230ನೇ ಹುಟ್ಟುಹಬ್ಬದ ಪ್ರಯುಕ್ತ ಭಾರತದಲ್ಲಿನ ಅಮೆರಿಕದ ರಾಯಭಾರ ಕಚೇರಿಯಲ್ಲಿ ಸಾಂಸ್ಕೃತಿಕ ರಾಜತಾಂತ್ರಿಕ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಭಾರತದಲ್ಲಿ ಅಮೆರಿಕದ ರಾಯಭಾರಿ ಕೆನ್ನೆತ್ ಐ. ಜಸ್ಟರ್ ಅವರು ಭಾರತದಲ್ಲಿರುವ ಅಮೆರಿಕದ ಮುಖ್ಯ ರಾಯಭಾರಿಯ ನಿವಾಸವಾದ ರೂಸ್‌ವೆಲ್ಟ್ ಹೌಸ್‌ಗೆ ಭಾರತೀಯ ಸಾಂಸ್ಕೃತಿಕ ಉತ್ಸಾಹಿಗಳನ್ನು ಸ್ವಾಗತಿಸಿದರು. ಸೆ. 6ರಂದು ವೈ. ಲಲಿತಾ ಸಿಂಧೂರಿ ಅವರಿಂದ ಕೂಚಿಪುಡಿ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ನಡೆಯಿತು.

   ಯಾವ ನಗರಗಳಲ್ಲಿ 'ಜಿಯೋ ಗಿಗಾ ಫೈಬರ್ ಬ್ರಾಡ್ ಬ್ಯಾಂಡ್' | Oneindia Kannada

   ಈ ವೇಳೆ ಮಾತನಾಡಿದ ಜಸ್ಟರ್, ''ನಮ್ಮ ಉಭಯ ದೇಶಗಳ ನಡುವಿನ ಬಾಂಧವ್ಯಗಳು ಮತ್ತಷ್ಟು ಬಲವಾಗಿ ಬೆಳೆಯುವುದು ಮುಂದುವರಿದಿದೆ. ಇಂದು ನಾವು ಅನೇಕ ವಿಚಾರಗಳಲ್ಲಿ ಸಹಕಾರ ನೀಡುತ್ತಿದ್ದೇವೆ. ಆದರೆ ನಾನು ಹಲವು ಬಾರಿ ಹೇಳಿದಂತೆ, ನಮ್ಮ ಸಹಭಾಗಿತ್ವದ ನೆಲಗಟ್ಟು ನಮ್ಮ ಜನರು-ಜನರ ನಡುವಿನ ಒಪ್ಪಂದಗಳನ್ನು ನಿರಂತವಾಗಿ ಬಲಪಡಿಸುವುದರಿಂದ ಸಾಧ್ಯವಾಗಿದೆ. ಈ ರಾತ್ರಿ ನಾವು ಇದನ್ನೇ ಸಂಭ್ರಮಿಸುತ್ತಿದ್ದೇವೆ'' ಎಂದು ಹೇಳಿದರು.

   ನ್ಯೂಯಾರ್ಕ್‌ನ ಬರ್ನಾರ್ಡ್ ಕಾಲೇಜ್‌ನಲ್ಲಿ 2017-18ರಲ್ಲಿ ಫುಲ್‌ಬ್ರೈಟ್-ನೆಹರೂ ಡಾಕ್ಟರಲ್ ರೀಸರ್ಚ್ ಫೆಲೋ ಆಗಿದ್ದ ಲಲಿತಾ ಅವರು ಮೂರು ನೃತ್ಯಗಳನ್ನು ಪ್ರದರ್ಶಿಸಿದರು. ಅವರಿಗೆ ಸಂಗೀತಗಾರ ದಂಡಿಭೋಟ್ಲಾ ಶ್ರೀನಿವಾಸ್ ವೆಂಕಟ ಶಾಸ್ತ್ರಿ, ವಯೀಲಿನ್ ವಾದಕ ಕೆಎಲ್ಎನ್ ಮೂರ್ತಿ, ಕೊಳಲು ವಾದಕ ವಿಬಿಎಸ್ ಮುರಳಿ, ಮೃದಂಗ ವಾದಕ ಎಂ. ಚಂದ್ರಕಾಂತ್ ಸಾಥ್ ನೀಡಿದರು.

   ಭಾರತದಲ್ಲಿನ ಅಮೆರಿಕದ ಯೋಜನೆಯು ಅಂತರ್ ಸಾಂಸ್ಕೃತಿಕ ವಿನಿಮಯಗಳಿಗೆ ಉತ್ತೇಜನ ನೀಡುತ್ತದೆ ಮತ್ತು ಅಮೆರಿಕ ಹಾಗೂ ಭಾರತದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವೆ ನಂಟುಗಳನ್ನು ಬೆಸೆಯುತ್ತದೆ. ಸುಮಾರು 2,00,000 ಭಾರತೀಯರು ಅಮೆರಿಕದ ಕಾಲೇಜುಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಇಂದು ಶಿಕ್ಷಣ ಪಡೆಯುತ್ತಿದ್ದಾರೆ. ಹಾಗೂ ಭಾರತದಲ್ಲಿ ಅಮೆರಿಕ ಸರ್ಕಾರದ ಪ್ರಾಯೋಜಿತ ವಿನಿಮಯ ಕಾರ್ಯಕ್ರಮಗಳಲ್ಲಿ ಸುಮಾರು 20,000 ಹಳೆಯ ವಿದ್ಯಾರ್ಥಿಗಳಿದ್ದಾರೆ.

   English summary
   US Ambassador In India has celebrated the cultural ties with India on September 6.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X