ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಅಖಾಡಕ್ಕೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

|
Google Oneindia Kannada News

ನವದೆಹಲಿ, ಜನವರಿ.30: ದೆಹಲಿ ವಿಧಾನಸಭಾ ಚುನಾವಣಾ ಆಖಾಡಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಳಿಯಲಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿಯ ಸ್ಟಾರ್ ಕ್ಯಾಂಪನೇರ್ ಭರ್ಜರಿ ಪ್ರಚಾರ ನಡೆಸಲಿದ್ದಾರೆ.

ಫೆಬ್ರವರಿ.01ರಿಂದ 04ರವರೆಗೂ ನಾಲ್ಕು ದಿನಗಳ ಕಾಲ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಿಜೆಪಿ ಅಭ್ಯರ್ಥಿಗಳ ಪರ ದೆಹಲಿಯಲ್ಲಿ ಅಬ್ಬರ ಪ್ರಚಾರ ನಡೆಸಲಿದ್ದಾರೆ. ಶಾಹಿನ್ ಬಾಗ್ ಸೇರಿದಂತೆ 12 ಕಡೆಗಳಲ್ಲಿ ಯೋಗಿ ಆದಿತ್ಯನಾಥ್ ಪ್ರಚಾರ ನಡೆಸಲಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.

ದೆಹಲಿ ಚುನಾವಣಾ ಅಖಾಡದಲ್ಲಿ ಪ್ರಚಾರ ಮಾಡಂಗಿಲ್ಲ ಈ ಬಿಜೆಪಿಗರು!ದೆಹಲಿ ಚುನಾವಣಾ ಅಖಾಡದಲ್ಲಿ ಪ್ರಚಾರ ಮಾಡಂಗಿಲ್ಲ ಈ ಬಿಜೆಪಿಗರು!

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಕಳೆದ 47 ದಿನಗಳಿಂದ ದೆಹಲಿಯ ಶಾಹಿನ್ ಬಾಗ್ ನಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಪ್ರದೇಶದ ಸುತ್ತಮುತ್ತಲಿನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ.

UP CM Yogi Adityanath Hold 12 Rallies In Delhi

ಯಾವ ಯಾವ ದಿನ ಎಲ್ಲೆಲ್ಲಿ ಯೋಗಿ ಪ್ರಚಾರ?:

ಫೆಬ್ರವರಿ.01: ಕರಾವಲ್ ನಗರ್, ಆದರ್ಶ್ ನಗರ್, ರೋಹಿಣಿ ಮತ್ತು ನರೇಲಾ,

ಫೆಬ್ರವರಿ.02: ಬದರ್ಪುರ್ ಮತ್ತು ತುಘಲಕ್ ಬಾದ್,

ಫೆಬ್ರವರಿ.03: ವಿಕಾಸ್ ಪುರಿ, ಉತ್ತಮ್ ನಗರ್, ದ್ವಾರಕ, ಮೆಹ್ರೌಲಿ,

ಫೆಬ್ರವರಿ.04: ಪತ್ಪರ್ ಗಂಜ್, ಶಾಹ್ದಾರ್,

UP CM Yogi Adityanath Hold 12 Rallies In Delhi

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಜಾರಿಗೊಳಿಸಿದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಶಾಹಿನ್ ಬಾಗ್ ಮತ್ತು ಜಾಮಿಯಾ ನಗರ್ ಸುತ್ತಮುತ್ತಲಿನ ಪ್ರದೇಶದಲ್ಲೇ ಸಿಎಂ ಯೋಗಿ ಆದಿತ್ಯನಾಥ್ ಪ್ರಚಾರ ನಡೆಸಲಿದ್ದಾರೆ.

English summary
Delhi Assembly Elections 2020: BJP Star Campaigner And Uttar Pradesh Chief Minister Yogi Adityanath Hold 12 Rallies Including Shaheen Bagh..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X