ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಡಾಖ್‌ ಅಪ್ರಚೋದಿತ ದಾಳಿ, ಜಗತ್ತಿನ ಬದಲಾವಣೆ ತೋರಿಸುತ್ತದೆ: ರಾಜನಾಥ್ ಸಿಂಗ್

|
Google Oneindia Kannada News

ನವದೆಹಲಿ, ಡಿಸೆಂಬರ್ 14: ಲಡಾಖ್‌ನಲ್ಲಿ ನಡೆದ ಅಪ್ರಚೋದಿತ ದಾಳಿಯು ಜಗತ್ತಿನ ಬದಲಾವಣೆಯನ್ನು ತೋರಿಸುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಪೂರ್ವ ಲಡಾಖ್‌ ನ ಗಡಿ ವಾಸ್ತವ ರೇಖೆಯಲ್ಲಿ ಸೇನಾ ಪಡೆಗಳ ನಿಯೋಜನೆಯನ್ನು ಹೆಚ್ಚಿಸಲಾಗಿದೆ. ನಮ್ಮ ಸೇನೆಗೆ ಈಗ ಪರೀಕ್ಷೆಯ ಕಾಲ, ಗಡಿಯಲ್ಲಿ ನಿಂತು ಹೋರಾಟ ಮಾಡುವಾಗ ನಮ್ಮ ಸೈನ್ಯ ಅತ್ಯಂತ ಹೆಚ್ಚಿನ ಅನುಕರಣೀಯ ಧೈರ್ಯ, ಸಾಹಸವನ್ನು ತೋರಿಸಿದ್ದಾರೆ.

ರೈತರ ಮನವೊಲಿಸಲು ರಾಜನಾಥ್ ಸಿಂಗ್ ಮುಂದಾಳತ್ವರೈತರ ಮನವೊಲಿಸಲು ರಾಜನಾಥ್ ಸಿಂಗ್ ಮುಂದಾಳತ್ವ

ಚೀನಾ ಸೇನಾಪಡೆಯ ಎದುರು ಭಾರತೀಯ ಸೇನೆ ಧೈರ್ಯದಿಂದ ಹೋರಾಟ ಮಾಡಿದ್ದು ಹಿಂದೆ ಹೋಗುವಂತೆ ಮಾಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

Unprovoked Aggression On Himalayan Frontiers Reminder Of How Power Is Being Asserted

ಹಿಮಾಲಯ ಕಣಿವೆಯಲ್ಲಿ ಅಪ್ರಚೋದಿತ ದಾಳಿ ನಡೆಯುತ್ತಿರುವುದು ವಿಶ್ವ ಹೇಗೆ ಬದಲಾಗುತ್ತಿದೆ ಎಂಬುದನ್ನು ನಮಗೆ ತಿಳಿಸಿಕೊಡುತ್ತದೆ. ಗಡಿ ದೇಶದೊಂದಿಗಿನ ಈಗಿನ ಒಪ್ಪಂದಗಳು ಹೇಗೆ ಸವಾಲಾಗಿವೆ, ಹಿಮಾಲಯ ಕಣಿವೆಯಲ್ಲಿ ಮಾತ್ರವಲ್ಲದೆ ಇಂಡೊ-ಫೆಸಿಫಿಕ್ ತೀರದುದ್ದಕ್ಕೂ ಅಧಿಕಾರ ಹೊಂದಲು ಗಡಿ ರಾಷ್ಟ್ರ ಹೇಗೆ ನೋಡುತ್ತಿದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದರು.

ಈ ವರ್ಷ ಚೀನಾ ಗಡಿಭಾಗದಲ್ಲಿ ನಮ್ಮ ಸೈನ್ಯ ಮೆರೆದ ಸಾಹಸವನ್ನು ಮುಂದಿನ ಜನಾಂಗ ನೋಡಿ ಖುಷಿ ಪಡುತ್ತದೆ. ಗಡಿ ವಾಸ್ತವ ರೇಖೆಯಲ್ಲಿ ಉದ್ವಿಗ್ನ ಸ್ಥಿತಿ ಉಂಟಾದಾಗಲೆಲ್ಲ ಭಾರತ ಮತ್ತು ಚೀನಾದ ಮಿಲಿಟರಿ ಶಕ್ತಿಯನ್ನು ಹೋಲಿಕೆ ಮಾಡಲಾಗುತ್ತದೆ ಎಂದರು.

ಗಡಿ ರೇಖೆ ಉಲ್ಲಂಘಿಸಿ ಬಂದು ಭಯೋತ್ಪಾದಕ ಕೃತ್ಯವೆಸಗುವ ಪರಿಸ್ಥಿತಿಗಳಿಗೆ ನಾವು ಭಾರತೀಯರು ಬಲಿಯಾಗಿದ್ದೇವೆ. ಆದರೂ ಯಾರ ಬೆಂಬಲವೂ ಇಲ್ಲದೆ ಏಕಾಂಗಿಯಾಗಿ ಹೋರಾಡಿ ಭಯೋತ್ಪಾದಕರನ್ನು ಮಟ್ಟ ಹಾಕುತ್ತಿದ್ದೇವೆ, ಭಯೋತ್ಪಾದನೆಯನ್ನು ಪೋಷಿಸಿ, ಬೆಳೆಸುತ್ತಿರುವುದು ಪಾಕಿಸ್ತಾನ ಎಂದು ಇಂದು ಇಡೀ ಜಗತ್ತಿಗೆ ಅರ್ಥವಾಗಿದೆ ಎಂದರು.

ಹಾಗೆಯೇ ಯಾವುದೇ ವೈರಸ್ ನಮ್ಮ ಸೈನಿಕರನ್ನು ಅವರ ದೇಶಸೇವೆ, ಕರ್ತವ್ಯಗಳಿಂದ ವಿಚಲಿತರನ್ನಾಗಿ ಮಾಡಲು ಸಾಧ್ಯವಿಲ್ಲ. ಇಡೀ ವಿಶ್ವ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದರೆ ನಮ್ಮ ಸೈನಿಕರು ಗಡಿಯನ್ನು ಸಮರ್ಥವಾಗಿ ಕಾಪಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

Recommended Video

ಪ್ರತಿಭಟನಾ ಸ್ಥಳದಲ್ಲಿಯೇ ತನ್ನ ಮಗಳ ಜನ್ಮದಿನ ಆಚರಿಸಿದ ರೈತ | Oneindia Kannada

English summary
Addressing FICCI's 93rd Annual General Meeting on Monday, 14 December, Union Defence Minister Rajnath Singh spoke about the standoff at the Line of Actual Control (LAC) in Ladakh and said that “unprovoked aggression” is a reminder of how world is changing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X