ಸೆಪ್ಟೆಂಬರ್ 8 ರಿಂದ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ ವಾಟ್ಸಾಪ್

ಭಾರತದಲ್ಲಿ ವಾಟ್ಸಾಪ್ ಅತ್ಯಂತ ಜನಪ್ರಿಯ ಮತ್ತು ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ಆಗಿದೆ. ಇದೀಗ ಈ ಆಪ್ಲಿಕೇಶನ್‌ಗೆ ಸಂಬಂಧಿಸಿದಂತೆ ಕಂಪನಿ ಒಂದು ಘೋಷಣೆ ಮಾಡಿದೆ. ಇದರ ಪ್ರಕಾರ ವಾಟ್ಸಾಪ್ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬಹುದು ಎಂದು ಘೋಷಿಸಿದೆ.

ವರದಿಗಳ ಪ್ರಕಾರ, ಕಂಪನಿಯು 2026 ರಲ್ಲಿ ತನ್ನ ಸಿಸ್ಟಮ್‌ ಅನ್ನು ಅಪ್‌ಗ್ರೇಡ್‌ ಮಾಡುತ್ತಿದೆ. ಈ ನಿಟ್ಟಿನಲ್ಲಿ ಅನೇಕ ಹಳೆಯ ಆಂಡ್ರಾಯ್ಡ್ ಫೋನ್‌ಗಳು ವಾಟ್ಸಾಪ್ ಅನ್ನು ಸಪೋರ್ಟ್‌ ಮಾಡುವುದಿಲ್ಲ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಸೆಪ್ಟೆಂಬರ್ 8, 2026 ರಿಂದ ಆಂಡ್ರಾಯ್ಡ್ 6.0 ಗಿಂತ ಹಳೆಯ ಆವೃತ್ತಿಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ . ಇದರರ್ಥ ಆಂಡ್ರಾಯ್ಡ್ 5.0 ಅಥವಾ 5.1 ಆವೃತ್ತಿಯ ಫೋನ್‌ಗಳು ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳುತ್ತವೆ.

WhatsApp

ಅಂದ ಹಾಗೆ ಈ ನಿರ್ಧಾರವನ್ನು ಕಂಪನಿ ಹಠಾತ್ತನೆ ತೆಗೆದುಕೊಂಡದ್ದಲ್ಲ. ಹೊಸ ವೈಶಿಷ್ಟ್ಯಗಳು ಮತ್ತು ಸುಧಾರಿತ ಭದ್ರತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಕಂಪನಿಯು ಈ ನಿರ್ಧಾರ ತೆಗೆದುಕೊಂಡಿದೆ. ಹಳೆಯ ಫೋನ್‌ಗಳು ಸಾಮಾನ್ಯವಾಗಿ ಹೊಸ ಅಪ್‌ಡೇಟ್‌ಗಳನ್ನು ಬೆಂಬಲಿಸುವುದಿಲ್ಲ. ಇದು ಆಪ್‌ ಸೆಕ್ಯೂರಿಟಿಗೆ ಮಾರಕವಾಗಬಹುದು. ಹಾಗಾಗಿ ಕಂಪನಿ ಇದೀಗ ಈ ನಿರ್ಧಾರಕ್ಕೆ ಮುಂದಾಗಿದೆ.

ಸಾಮಾನ್ಯ ಫೋಟೋಗಳನ್ನು ವೃತ್ತಿಪರ ಭಾವಚಿತ್ರಗಳಾಗಿ ಪರಿವರ್ತಿಸುವ ಜೆಮಿನಿ AI ಪ್ರಾಂಪ್ಟ್‌ಗಳು
ಸಾಮಾನ್ಯ ಫೋಟೋಗಳನ್ನು ವೃತ್ತಿಪರ ಭಾವಚಿತ್ರಗಳಾಗಿ ಪರಿವರ್ತಿಸುವ ಜೆಮಿನಿ AI ಪ್ರಾಂಪ್ಟ್‌ಗಳು

ಯಾವ ಫೋನ್‌ಗಳಲ್ಲಿ WhatsApp ನಿರ್ಬಂಧ:

ಭಾರತವೂ ಸೇರಿದಂತೆ ಹಳೆಯ ಫೋನ್‌ಗಳನ್ನು ದೀರ್ಘಕಾಲದಿಂದ ಬಳಸುತ್ತಿರುವ ದೇಶಗಳಲ್ಲಿ ಈ ಬದಲಾವಣೆಯ ಪರಿಣಾಮವು ವಿಶೇಷವಾಗಿ ಗೋಚರಿಸುತ್ತದೆ. ಅನೇಕ ಬಳಕೆದಾರರು ಇನ್ನೂ 8-10 ವರ್ಷ ಹಳೆಯದಾದ ಸ್ಮಾರ್ಟ್‌ಫೋನ್‌ಗಳನ್ನೇ ಬಳಸುತ್ತಿರುತ್ತಾರೆ. ಈ ಫೋನ್‌ಗಳು ಇತ್ತೀಚಿನ ಅಪ್‌ಡೇಟ್‌ಗಳನ್ನು ಸ್ವೀಕರಿಸುವುದಿಲ್ಲ.

ವರದಿಗಳ ಪ್ರಕಾರ, ಪ್ರಪಂಚದಾದ್ಯಂತ ಲಕ್ಷಾಂತರ ಬಳಕೆದಾರರು ಇನ್ನೂ ಹಳೆಯ ಆಂಡ್ರಾಯ್ಡ್ ಆವೃತ್ತಿಗಳಿರುವ ಫೋನ್‌ಗಳನ್ನೇ ಬಳಸುತ್ತಿದ್ದಾರೆ. ಅವರು ಇನ್ನು ಮುಂದೆ WhatsApp ಬಳಸಲು ಹೊಸ ಫೋನ್ ಖರೀದಿಸಬೇಕಾಗಬಹುದು.

ಯೂಟ್ಯೂಬ್‌ನಲ್ಲೂ AI-ಚಾಲಿತ ಸಂವಾದಾತ್ಮಕ ಸರ್ಚ್‌ ಟೂಲ್‌: ಏನಿದು ತಿಳಿಯಿರಿ
ಯೂಟ್ಯೂಬ್‌ನಲ್ಲೂ AI-ಚಾಲಿತ ಸಂವಾದಾತ್ಮಕ ಸರ್ಚ್‌ ಟೂಲ್‌: ಏನಿದು ತಿಳಿಯಿರಿ "ಆಸ್ಕ್ YouTube" ಫೀಚರ್‌

ವಾಟ್ಸಾಪ್ ತನ್ನ ಪೋರ್ಟಲ್ ಅನ್ನು ಸಹ ನವೀಕರಿಸಿದೆ. ಸೆಪ್ಟೆಂಬರ್ 2026 ರಿಂದ ಈ ಅಪ್ಲಿಕೇಶನ್ ಆಂಡ್ರಾಯ್ಡ್ 6 ಮತ್ತು ನಂತರದ ಆವೃತ್ತಿಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿದೆ.

ಕಂಪನಿಯು ಈ ಬಗ್ಗೆ WhatsApp ಬಳಕೆದಾರರಿಗೆ ಮೆಸೇಜ್‌ಗಳನ್ನು ಕಳುಹಿಸುತ್ತಿದೆ. ಅಪ್ಲಿಕೇಶನ್ ತೆರೆದ ತಕ್ಷಣ, ಸೆಪ್ಟೆಂಬರ್ 8 ರಿಂದ WhatsApp ಈ ನಿರ್ದಿಷ್ಟ ಆವೃತ್ತಿಯ Android ನಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ ಎಂದು ಹೇಳುವ ನೋಟಿಫಿಕೇಶನ್‌ ಕಾಣಿಸಿಕೊಳ್ಳುತ್ತದೆ.

ಈ ನಿರ್ಧಾರದ ಹಿಂದಿನ ಕಾರಣ ?:

ವಾಟ್ಸಾಪ್ ಆಪ್ ಅನ್ನು ಸುರಕ್ಷಿತವಾಗಿ ಮತ್ತು ವೇಗವಾಗಿಡಲು ಇದು ಅಗತ್ಯ ಕ್ರಮ ಎನ್ನುವುದು ಕಂಪನಿಯ ವಾದ. ಹಳೆಯ ಆಪರೇಟಿಂಗ್ ಸಿಸ್ಟಂಗಳು ಹೊಸ ವೈಶಿಷ್ಟ್ಯಗಳೊಂದಿಗೆ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಮತ್ತು ಸೆಕ್ಯೂರಿಟಿ ಅಪ್‌ಡೇಟ್‌ಗಳನ್ನು ಕೂಡಾ ಸ್ವೀಕರಿಸುವುದಿಲ್ಲ. ಇದು ಹ್ಯಾಕಿಂಗ್ ಅಥವಾ ಡೇಟಾ ಕಳ್ಳತನದ ಅಪಾಯವನ್ನು ಹೆಚ್ಚಿಸುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+