Vande Bharat Train: ಪ್ಲಾಟ್‌ಫಾರ್ಮ್ ಎತ್ತರದ ವ್ಯತ್ಯಾಸ, ವಂದೇ ಭಾರತ್ ರೈಲು ಹತ್ತಲು ಸಮಸ್ಯೆ
ಕೊಚ್ಚಿ: ಭಾರತೀಯ ರೈಲ್ವೆ ವ್ಯಾಪ್ತಿಯಲ್ಲಿ ಕ್ರಾಂತಿ ತಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Train) ತನ್ನ ಆಧುನಿಕ ಸೌಕರ್ಯ, ಆರಾಮದಾಯಕ ಸೇವೆ, ಉತ್ತಮ ಪ್ರಯಾಣದ ಅನುಭವದಿಂದಲೇ ಖ್ಯಾತಿ ಪಡೆದಿದೆ. ಆದರೆ ಈ ರೈಲು ಏರುವ ವೃದ್ಧರು, ಹಿರಿಯ ನಾಗರಿಕರು ಒಂದಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಆ ಸಮಸ್ಯೆಗಳ ತುರ್ತು ನಿರ್ವಹಣೆ ಅಗತ್ಯವಿದೆ ಎಂಬ ಒತ್ತಾಯವು ಕೇಳಿ ಬಂದಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಅತ್ಯುತ್ತಮ ವಿನ್ಯಾಸಕ್ಕೆ, ಪ್ರಯಾಣಿಕ ಸ್ನೇಹಿ ಮೂಲಸೌಕರ್ಯಕ್ಕೆ ಹೆಸರುವಾಸಿಯಾಗಿದೆ. ಪ್ರೀಮಿಯಂ ಮೂಲ ಸೌಲಭ್ಯಗಳನ್ನು ಒಳಗೊಂಡಿದೆ. ಆದಾಗಿಯೂ ಚಲನಶೀಲತೆ ಸಮಸ್ಯೆಗಳನ್ನು ಪ್ರಯಾಣಿಕರು ಎದುರಿಸುತ್ತಿದ್ದಾರೆ. ರೈಲು ನಿಲ್ದಾಣಗಳಲ್ಲಿನ ಪ್ಲಾಟ್‌ಫಾರ್ಮ್ ನೆಲದ ಎತ್ತರ ಹಾಗೂ ರೈಲಿನ ಮೇಲೆ ಕಾಲಿಡುವ ಸ್ಥಳಕ್ಕೂ ವ್ಯತ್ಯಾಸ ಇದೆ. ಅಂದರೆ ಸಾಮಾನ್ಯ ರೈಲುಗಳಂತೆ ಆಗದೇ ಹತ್ತಲು ಎತ್ತರವಾಗುತ್ತಿದೆ.

ಈ ನಿಲ್ದಾಣದಲ್ಲಿ ರೈಲು ಹತ್ತಲು ಸಮಸ್ಯೆ
ವಂದೇ ಭಾರತ್ ಆಧುನಿಕ ಬೋಗಿಗಳು ಚಾಲಿತ ಸ್ವಯಂಚಾಲಿತ ತೆರೆಯುವ ಮತ್ತು ಮುಚ್ಚುವ ಬಾಗಿಲುಗಳನ್ನು ಹೊಂದಿದೆ. ಅನೇಕ ನಿಲ್ದಾಣಗಳಲ್ಲಿನ ಎತ್ತರ ವ್ಯತ್ಯಾಸವು ಅನಾನುಕೂಲತೆ ಉಂಟು ಮಾಡುತ್ತಿದೆ. ಎರ್ನಾಕುಲಂ ದಕ್ಷಿಣದಲ್ಲಿ, ಪ್ಲಾಟ್‌ಫಾರ್ಮ್ ಎತ್ತರಗಳು ಬದಲಾಗುತ್ತವೆ. ರೈಲು ಹತ್ತುವುದು ಮತ್ತು ಇಳಿಯುವುದು ಕಷ್ಟಕರವಾಗಿರುತ್ತದೆ ಎಂಬ ದೂರುಗಳು ಕೇಳಿ ಬಂದಿವೆ.
ರೈಲು ಮತ್ತು ಪ್ಲಾಟ್‌ಫಾರ್ಮ್ ನೆಲದ ಎತ್ತರದ ವ್ಯತ್ಯಾಸದಿಂದ ಹಿರಿಯ ನಾಗರಿಕರು, ಅಂಗವಿಕಲರು ಮತ್ತು ಭಾರವಾದ ಸಾಮಾನು ಸಾಗಿಸುವವರಿಗೆ ಹೆಚ್ಚಿನ ಸಮಸ್ಯೆ ತಂದೊಡ್ಡುತ್ತಿದೆ ಎಂದು ತಿರುವನಂತಪುರಂನಿಂದ ಎರ್ನಾಕುಲಂಗೆ ತೆರಳುತ್ತಿದ್ದ ಹಿರಿಯ ಮಹಿಳಾ ಪ್ರಮಾಣಿಕರೊಬ್ಬರು ವಿಷಾದಿಸಿದರು. ಗಮನಿಸಬೇಕಾದ ಅಂಶವೆಂದರೆ ರೈಲು ಕೆಲವೇ ನಿಮಿಷಗಳ ಕಾಲ ನಿಲ್ಲುತ್ತದೆ. ಆ ಅಲ್ಪಸಮಯದಲ್ಲಿ ಹತ್ತುವವರು ಮತ್ತು ಇಳಿಯುವವರು ಅನೇಕರಿರುತ್ತಾರೆ. ಹಿರಿಯ ನಾಗರಿಕರಿಗೆ ಬೇಗ ಬೇಗನೇ ಹತ್ತುವುದು, ಇಳಿಯುವುದು ಸಮಸ್ಯೆ ಆಗುತ್ತಿದೆ ಎಂದು ಅವರು ವಿವರಿಸಿದರು.
ವಂದೇ ಭಾರತ್ ರೈಲಿಗೆ ಅನಾನುಕೂಲಕರ ಪ್ಲಾಟ್‌ಫಾರ್ಮ್
"ಎರ್ನಾಕುಲಂ ಜಂಕ್ಷನ್ ರೈಲ್ವೆ ನಿಲ್ದಾಣ (ದಕ್ಷಿಣ)ದಲ್ಲಿ ಈ ಸಮಸ್ಯೆ ಕಂಡು ಬಂದಿದೆ. ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಎತ್ತರವು ಒಂದು ಸಮಸ್ಯೆಯಾಗಿದೆ. ಎರ್ನಾಕುಲಂ ಎರಡು ಪ್ಲಾಟ್‌ಫಾರ್ಮ್‌ಗಳು 22 ಎಲ್‌ಬಿಎಚ್ ಅಥವಾ 24 ಐಸಿಎಫ್ ಕೋಚ್ ರೈಲುಗಳಿಗೆ ಹೊಂದಿಕೆಯಾಗುವಂತಿವೆ. ಆದರೆ ವಂದೇ ಭಾರತ್ ರೈಲಿನ ಬೋಗಿಗಳಿಗೆ ಹೊಂದಿಕೆ ಆಗುವಂತೆ ಇಲ್ಲದಿರುವುದು ಸಮಸ್ಯೆ ಉಂಟು ಮಾಡಿದೆ. ಆದಷ್ಟು ಶೀಘ್ರವೇ ಈ ಸಮಸ್ಯೆಗಳನ್ನು ವಿಭಾಗೀಯ ರೈಲ್ವೆ ಅಧಿಕಾರಿಗಳು ಪರಿಹರಿಸುವಂತೆ ರೈಲು ಬಳಕೆದಾರರು ಆಗ್ರಹಿಸಿದ್ದಾರೆ.
ರೈಲ್ವೆ ಅಧಿಕಾರಿಯೊಬ್ಬರು, ಪ್ಲಾಟ್‌ಫಾರ್ಮ್ ಎತ್ತರವನ್ನು ಹೆಚ್ಚಿಸಲು ದಕ್ಷಿಣ ರೈಲ್ವೆ 'ಹಂತ ಹಂತವಾಗಿ' ಕ್ರಮಗಳನ್ನು ತೆಗೆದುಕೊಳ್ಳಲಿದೆ. ಕಾಮಗಾರಿಗೆ ಒಪ್ಪಿಗೆ ನೀಡಲಾಗಿದೆ. ಶೀಘ್ರವೇ ಸಮಸ್ಯೆಗೆ ಮುಕ್ತಿ ನೀಡುವುದಾಗಿ ತಿಳಿಸಿದ್ದಾರೆ.













Click it and Unblock the Notifications