• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತದಲ್ಲಿ ಕೊರೊನಾ 'ಅಟ್ಟಹಾಸ': ಕೇರಳ ಟಾಪ್, ಕರ್ನಾಟಕ ಎಷ್ಟು?

|

ನವದೆಹಲಿ, ಮಾರ್ಚ್ 12: ಭಾರತದಲ್ಲಿ ಕೊರೊನಾ ಭೀತಿ ದಿನದಿಂದ ಹೆಚ್ಚಾಗುತ್ತಲೇ ಇದೆ. ಕೊರೊನಾ ಶಂಕಿತರ ಸಂಖ್ಯೆಯೂ ಹೆಚ್ಚುತ್ತಲೆ ಇದೆ. ಜಗತ್ತಿನಾದ್ಯಂತ 1.26 ಲಕ್ಷಕ್ಕೂ ಅಧಿಕ ಕೊರೊನಾ ಕೇಸ್‌ಗಳು ದಾಖಲಾಗಿದೆ. ಅದರಲ್ಲಿ 4635 ಜನರು ಪ್ರಾಣ ಕಳೆದುಕೊಂಡಿದ್ದಾರೆ.

   Here's the total number of confirmed Corona cases in India | Oneindia Kannada

   ಈ ಕಡೆ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಂಟೆ ಗಂಟೆಗೂ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕುರಿತು ಮಾರ್ಚ್ 12 ರಂದು ಬೆಳಿಗ್ಗೆ 11 ಗಂಟೆಗೆ ಕೇಂದ್ರ ಆರೋಗ್ಯ ಇಲಾಖೆ ಅಧಿಕೃತವಾಗಿ ಮಾಹಿತಿ ಪ್ರಕಟಿಸಿದೆ.

   ಕೊರೊನಾ ಪರೀಕ್ಷೆ ಮಾಡಿಸದೆ ಇಟಲಿಯಿಂದ ದೆಹಲಿಗೆ ಬಂದ 80 ಜನ

   ದೇಶದಲ್ಲಿ ಒಟ್ಟು ಎಷ್ಟು ಕೊರೊನಾ ಕೇಸ್ ದಾಖಲಾಗಿದೆ. ಎಷ್ಟು ಜನರಿಗೆ ಸೋಂಕು ಖಚಿತವಾಗಿದೆ. ಅದರಲ್ಲಿ ಭಾರತೀಯರಿಗೆ ಎಷ್ಟು ಹಾಗೂ ವಿದೇಶಿ ಪ್ರವಾಸಿಗರಿಗೆ ಎಷ್ಟು ಎಂಬ ಅಂಕಿ ಅಂಶವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇದುವರೆಗೂ ಭಾರತದಲ್ಲಿ ದಾಖಲಾಗಿರುವ ಕೊರೊನಾ ಕೇಸ್‌ಗಳ ವಿವರ ಗ್ರಾಫಿಕ್ಸ್ ಜೊತೆ ಮುಂದಿದೆ....

   ಭಾರತದಲ್ಲಿ ಒಟ್ಟು 73 ಕೇಸ್

   ಭಾರತದಲ್ಲಿ ಒಟ್ಟು 73 ಕೇಸ್

   ಭಾರತದಲ್ಲಿ ಇದುವರೆಗೂ ಒಟ್ಟು 73 ಕೊರೊನಾ ಕೇಸ್‌ಗಳು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ದೃಢಪಡಿಸಿದೆ. ಅದರಲ್ಲಿ 56 ಜನ ಭಾರತೀಯರಿಗೆ ಹಾಗೂ 17 ಜನ ವಿದೇಶಿಯರು ಒಳಗೊಂಡಿದ್ದಾರೆ. ಆದರೆ, ಇದುವರೆಗೂ ಯಾವುದೇ ಸಾವು ಸಂಭವಿಸಿಲ್ಲ ಎನ್ನುವುದು ಸಮಾಧಾನ ತಂದಿದೆ.

   10 ಲಕ್ಷ ಜನರ ಪರೀಕ್ಷೆ

   10 ಲಕ್ಷ ಜನರ ಪರೀಕ್ಷೆ

   ವಿದೇಶಿದಿಂದ ಬಂದವರಿಂದ ಭಾರತದಲ್ಲಿ ಕೊರೊನಾ ಸೋಂಕು ತಗುಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ, ಏರ್‌ಪೋರ್ಟ್‌ಗಳಲ್ಲಿ ಪ್ರವಾಸಿಗರಿಗೆ ಕೊರೊನಾ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಇದುವರೆಗೂ ಭಾರತದ ಏರ್‌ಪೋರ್ಟ್‌ಗಳಲ್ಲಿ ಒಟ್ಟು 10,57,506 ಜನರಲ್ಲಿ ಕೊರೊನಾ ಪರೀಕ್ಷೆಗ ಒಳಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

   ಕೊರೊನಾಗೆ ಔಷಧ ಸೂಚಿಸಿದ ಮಾಜಿ ಸಚಿವ, ಟಿಕ್‌ಟಾಕ್‌ನಲ್ಲೂ ಟ್ರೆಂಡ್

   ಕೇರಳದಲ್ಲಿ ಅತಿ ಹೆಚ್ಚು ಕೇಸ್

   ಕೇರಳದಲ್ಲಿ ಅತಿ ಹೆಚ್ಚು ಕೇಸ್

   ಭಾರತದಲ್ಲಿ ಮೊದಲ ಕೊರೊನಾ ಕೇಸ್ ಪತ್ತೆಯಾಗಿದ್ದು ಕೇರಳದಲ್ಲಿ. ಜನವರಿ 30ರಂದು ಕೊರೊನಾ ಸೋಂಕು ಭಾರತದಲ್ಲಿ ಕಾಣಿಸಿಕೊಂಡಿತ್ತು. ಆದರೆ, ಆ ವ್ಯಕ್ತಿಯಲ್ಲಿ ಚೇತರಿಕೆ ಕಂಡು ಬಂದ ಕಾರಣ ಹೆಚ್ಚು ಸುದ್ದಿಯಾಗಲಿಲ್ಲ. ಆದರೆ ದಿನ ಕಳೆದಂತೆ ಕೇರಳದಲ್ಲಿ ಮತ್ತಷ್ಟು ಕೊರೊನಾ ಕೇಸ್‌ಗಳ ಬೆಳಕಿಗೆ ಬಂದಿದೆ. ಇದುವರೆಗೂ ಕೇರಳದಲ್ಲಿ 17 ಕೊರೊನಾ ಪ್ರಕರಣಗಳು ದಾಖಲಾಗಿದೆ. 17 ಜನರ ಪೈಕಿ ಎಲ್ಲರೂ ಭಾರತೀಯರೇ. ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಕೇಸ್‌ ಪತ್ತೆಯಾಗಿರುವುದು ಇದೇ ರಾಜ್ಯದಲ್ಲಿ ಎಂದು ಕೇಂದ್ರ ಆರೋಗ್ಯ ಇಲಾಖೆ ಖಚಿತಪಡಿಸಿದೆ.

   ಹರಿಯಾಣದಲ್ಲಿ ಒಟ್ಟು 14 ಕೇಸ್

   ಹರಿಯಾಣದಲ್ಲಿ ಒಟ್ಟು 14 ಕೇಸ್

   ಕೇರಳ ಬಿಟ್ಟರೆ ಅತಿ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿರುವುದು ಹರಿಯಾಣ ರಾಜ್ಯದಲ್ಲಿ. ಆದರೆ, ಹರಿಯಾಣದಲ್ಲಿ ಕಾಣಿಸಿಕೊಂಡಿರುವ ಅಷ್ಟು ಜನರು ವಿದೇಶಿಗರು ಎನ್ನುವುದು ಗಮನಿಸಬೇಕಾದ ವಿಚಾರ. ಭಾರತಕ್ಕೆ ಬಂದಿದ್ದ ವಿದೇಶಿಗರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ, ಅವರೆಲ್ಲರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

   ಭಾರತದಲ್ಲಿ ಕೊರೊನಾ ಪೀಡಿತ ದಂಪತಿ ಮೇಲೆ anti-HIV ಡ್ರಗ್ಸ್ ಪ್ರಯೋಗ

   ಉತ್ತರ ಪ್ರದೇಶ-ಮಹಾರಾಷ್ಟ್ರ ಸಮಬಲ

   ಉತ್ತರ ಪ್ರದೇಶ-ಮಹಾರಾಷ್ಟ್ರ ಸಮಬಲ

   ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 11ಕ್ಕೆ ಏರಿದೆ. ಈ ಹನ್ನೊಂದರ ಪೈಕಿ 10 ಜನ ಭಾರತೀಯರು ಹಾಗೂ ಒಬ್ಬರು ವಿದೇಶಿಗರಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲೂ 11 ಜನರಲ್ಲಿ ಕೊರೊನಾ ಪತ್ತೆಯಾಗಿದೆ ಎಂದು ದೃಢಪಟ್ಟಿದೆ. ಹನ್ನೊಂದು ಜನರು ಭಾರತೀಯರೇ.

   ಕರ್ನಾಟಕದಲ್ಲಿ ನಾಲ್ಕು ಪ್ರಕರಣ

   ಕರ್ನಾಟಕದಲ್ಲಿ ನಾಲ್ಕು ಪ್ರಕರಣ

   ಅಮೆರಿಕ ಮತ್ತು ದುಬೈನಿಂದ ಬೆಂಗಳೂರಿಗೆ ಬಂದ ಟೆಕ್ಕಿಗಳಲ್ಲಿ ಕೊರೊನಾ ಕಾಣಿಸಿಕೊಂಡಿತ್ತು. ಕರ್ನಾಟಕದಲ್ಲಿ ಇದುವರೆಗೂ ನಾಲ್ಕು ಕೊರೊನಾ ಕೇಸ್‌ಗಳು ದೃಢಪಟ್ಟಿದೆ ಎಂದು ಕರ್ನಾಟಕ ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದರು. ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಟ್ಟು 6 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

   ಲಡಾಕ್, ರಾಜಸ್ಥಾನ, ಪಂಜಾಬ್?

   ಲಡಾಕ್, ರಾಜಸ್ಥಾನ, ಪಂಜಾಬ್?

   ಇನ್ನುಳಿದಂತೆ ರಾಜಸ್ಥಾನದಲ್ಲಿ 3 (1 ಭಾರತೀಯ, 2 ವಿದೇಶಿಯರು), ಲಡಾಕ್‌ನಲ್ಲಿ 3, ತೆಲಂಗಾಣದಲ್ಲಿ 1, ತಮಿಳುನಾಡಿನಲ್ಲಿ 1, ಜಮ್ಮು ಮತ್ತು ಕಾಶ್ಮೀರದಲ್ಲಿ 1, ಪಂಜಾಬ್‌ನಲ್ಲಿ 1 ಕೇಸ್ ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ.

   English summary
   Coronavirus crisis: Here's the total number of confirmed cases in India as per Union Health Ministry The total number of confirmed Coronavirus cases have now gone up to 73 in India.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X