ಯುಜಿಸಿ ಪಾರಂಪರಿಕ ಪಟ್ಟಿಗೆ ಮಂಗಳೂರು ವಿವಿ ಕಾಲೇಜ್
ನವದೆಹಲಿ, ಜುಲೈ, 06: ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ದೇಶದ 19 ಕಾಲೇಜುಗಳಿಗೆ ಪಾರಂಪರಿಕ ಸ್ಥಾನಮಾನ ನೀಡಿದೆ. ಈ ಪೈಕಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ಸೇರಿದ ಕಾಲೇಜು ಸೇರಿರುವುದು ಹೆಮ್ಮೆಯ ವಿಷಯ. ಯುಜಿಸಿ ಈ ಯೋಜನೆಯಿಂದ ಕಾಲೇಜುಗಳ ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ನಿರಂತರ ಅನುದಾನ ದೊರೆಯಲಿದೆ.
ದೇಶದ 19 ಕಾಲೇಜುಗಳಿಗೆ ಪಾರಂಪರಿಕ ಸ್ಥಾನಮಾನ ಪಡೆಯಲು 60ಕ್ಕೂ ಹೆಚ್ಚು ಕಾಲೇಜುಗಳಿಂದ ಅರ್ಜಿ ಬಂದಿತ್ತು, ಅದರೆ, ಈ ಪೈಕಿ19 ಕಾಲೇಜುಗಳನ್ನು ಪರಿಗಣಿಸಲಾಗಿದೆ. ದೆಹಲಿಯ ಒಂದೇ ಒಂದು ಕಾಲೇಜು ಕೂಡಾ ಈ ಪಟ್ಟಿಗೆ ಸೇರುವಲ್ಲಿ ಸಫಲವಾಗಿಲ್ಲ.

ಆಯ್ಕೆಯಾಗಿರುವ ಕಾಲೇಜುಗಳ ಸಂರಕ್ಷಣೆ ಹಾಗೂ ಹೊಸ ಕೋರ್ಸ್ಗಳ ಪ್ರಾರಂಭಕ್ಕೆ ಧನಸಹಾಯ ಮಾಡಲಾಗುತ್ತದೆ ಎಂದು ಯುಜಿಸಿ ಅಧಿಕಾರಿಗಳು ತಿಳಿಸಿದ್ದಾರೆ. [ಮಾನಸ ಗಂಗೋತ್ರಿ ವಿವಿ ಘಟಿಕೋತ್ಸವದ ಚಿತ್ರಗಳು]
ಮಂಗಳೂರಿನ ಯುನಿವರ್ಸಿಟಿ ಕಾಲೇಜು ಹೊರತುಪಡಿಸಿ, ಮುಂಬೈ ಸೇಂಟ್ ಕ್ಸೇವಿಯರ್ಸ್ ಕಾಲೇಜು, ಕೊಟ್ಟಾಯಂನ ಸಿಎಂಎಸ್ ಕಾಲೇಜು, ಕೇರಳದ ಸರ್ಕಾರಿ ಬ್ರೆನ್ನನ್ ಕಾಲೇಜು ಪಾರಂಪರಿಕ ಸ್ಥಾನಮಾನ ಪಡೆದ ಕೆಲ ಕಾಲೇಜುಗಳಾಗಿವೆ. ಗುವಾಹಟಿಯ ಕಾಟನ್ ಕಾಲೇಜು ಅತೀ ಹೆಚ್ಚು 4.35 ಕೋಟಿ ರೂ. ಧನಸಹಾಯ ಪಡೆದಿದೆ.
1865ರಲ್ಲಿ ಶಾಲೆ ಸ್ಥಾಪನೆಯಾಗಿದ್ದು, 1968ರಲ್ಲಿ ಕಾಲೇಜು ನಂತರ ವಿವಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯ 33ನೇ ವಾರ್ಷಿಕ ಘಟಿಕೋತ್ಸವವನ್ನು ಇತ್ತೀಚೆಗೆ ಆಚರಿಸಿಕೊಂಡಿದೆ. ಪಂಜೆ ಮಂಗೇಶರಾಯ, ಮಂಜೇಶ್ವರ ಗೋವಿಂದ ಪೈ, ಕೋಟ ಶಿವರಾಮ ಕಾರಂತ, ಬೆನಗಲ್ ರಾಮರಾಯ , ಡಾ. ಎಂ. ವೀರಪ್ಪ ಮೊಯಿಲಿ ಸೇರಿದಂತೆ ಅನೇಕ ಹೆಸರಾಂತ ವ್ಯಕ್ತಿಗಳು ಮಂಗಳೂರು ವಿವಿಯಲ್ಲಿ ವ್ಯಾಸಂಗ ಮಾಡಿದ್ದಾರೆ. [ನಕಲಿ ವಿವಿಗಳ ಪಟ್ಟಿ ಪ್ರಕಟ]

ಅನುದಾನ ಪಡೆಯಲಿರುವ ಕಾಲೇಜುಗಳು:
* ಸೈಂಟ್ ಕ್ಸೇವಿಯರ್ ಕಾಲೇಜು, ಮುಂಬೈ
* ಸಿಎಂಎಸ್ ಕಾಲೇಜು, ಕೊಟ್ಟಾಯಂ
* ಸೈಂಟ್ ಜೋಸೆಫ್ ಕಾಲೇಜು, ತಿರುಚ್ಚಿ
* ಖಾಲ್ಸ ಕಾಲೇಜು, ಅಮೃತಸರ್
* ಸೈಂಟ್ ಬೆಡೆಸ್ ಕಾಲೇಜು, ಶಿಮ್ಲಾ
* ಕ್ರೈಸ್ಟ್ ಚರ್ಚ್ ಕಾಲೇಜು, ಕಾನ್ಪುರ
* ಓಲ್ಡ್ ಆಗ್ರಾ ಕಾಲೇಜು, ಆಗ್ರಾ
* ಮೀರತ್ ಕಾಲೇಜು, ಮೀರತ್
* ಲಾಂಗತ್ ಸಿಂಗ್ ಕಾಲೇಜ್, ಮುಜಾಫರ್ ಪುರ
* ಸರ್ಕಾರಿ ಬ್ರೆನ್ನನ್ ಕಾಲೇಜ್, ಕೇರಳ
* ಮಂಗಳೂರು ವಿಶ್ವವಿದ್ಯಾಲಯ ಕಾಲೇಜ್
* ಕಾಟನ್ ಕಾಲೇಜ್, ಗುವಾಹಟಿ
* ಮಿಡ್ನಾಪುರ ಕಾಲೇಜ್, ಪಶ್ಚಿಮ ಬಂಗಾಳ
* ಸರ್ಕಾರಿ ವೈದ್ಯಕೀಯ ವಿಜ್ಞಾನ ಕಾಲೇಜು, ಜಬಲ್ಪುರ
* ಡೆಕ್ಕನ್ ಎಜುಕೇಷನ್ ಸೊಸೈಟಿ ಫರ್ಗುಸನ್ ಕಾಲೇಜ್, ಪುಣೆ
* ಹಿಸ್ಲೋಪ್ ಕಾಲೇಜ್, ನಾಗ್ಪುರ
* ಗಾಂಧಿ ಸ್ಮಾರಕ ವಿಜ್ಞಾನ ಕಾಲೇಜು, ಜಮ್ಮು
* ಕನ್ಯಾ ಮಹಾವಿದ್ಯಾಲಯ, ಜಲಂಧರ್
* ಡಿಎವಿ ಕಾಲೇಜು, ಅಂಬಲಾ ನಗರ, ಹರ್ಯಾಣ
(ಒನ್ ಇಂಡಿಯಾ ಸುದ್ದಿ)












Click it and Unblock the Notifications