ಕರ್ನಾಟಕದ ಒಂದು ವಿವಿ ಸೇರಿ ನಕಲಿ ವಿವಿಗಳ ಪಟ್ಟಿ ಪ್ರಕಟ
ಬೆಂಗಳೂರು, ಜು.01: ಯೂನಿವರ್ಸಿಟಿ ಗ್ರ್ಯಾಂಟ್ ಕಮಿಷನ್ ಬುಧವಾರದಂದು ನಕಲಿ ವಿಶ್ವ ವಿದ್ಯಾಲಯಗಳ ಪಟ್ಟಿಯನ್ನು ಪ್ರಕಟಿಸಿದೆ. ಬೆಳಗಾವಿಯಲ್ಲಿರುವ ಒಂದು ವಿವಿ ಸೇರಿದಂತೆ 21 ವಿವಿಗಳು ಮಾನ್ಯತೆ ಪಡೆದಿಲ್ಲ.
ಒಟ್ಟಾರೆ ಪ್ರಕಟಿತ 21 ವಿವಿಗಳ ಪೈಕಿ 8 ವಿವಿಗಳು ಉತ್ತರಪ್ರದೇಶದಲ್ಲಿವೆ, ನಂತರದ ಸ್ಥಾನದಲ್ಲಿ 6 ನಕಲಿ ವಿವಿ ಹೊಂದಿರುವ ದೆಹಲಿ ಇದೆ. ಮಿಕ್ಕಂತೆ ತಮಿಳುನಾಡು, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಬಿಹಾರ ಹಾಗೂ ಪಶ್ಚಿಮ ಬಂಗಾಳದ ವಿವಿಗಳು ಪಟ್ಟಿಯಲ್ಲಿವೆ. [ಯುಜಿಸಿ ಶಾಕ್: ಕೆಎಸ್ಒಯು ಮಾನ್ಯತೆ ರದ್ದು?]

ಯೂನಿವರ್ಸಿಟಿ ಗ್ರ್ಯಾಂಟ್ ಕಮಿಷನ್ ಕಾಯ್ದೆ 1956 ಪ್ರಕಾರ ಕೇಂದ್ರ/ರಾಜ್ಯ / ಪ್ರಾದೇಶಿಕ ಕಾಯ್ದೆ ಅನುಗುಣವಾಗಿ ಸೆಕ್ಷನ್ 3 ನಿಯಮಗಳಿಗೆ ಬದ್ಧವಾಗಿದ್ದರೆ ಮಾತ್ರ ಡೀಮ್ಡ್ ವಿವಿ ಅಥವಾ ವಿವಿ ಎಂದು ವಿದ್ಯಾಸಂಸ್ಥೆಯನ್ನು ಕರೆಯಬಹುದಾಗಿದೆ.
ಸ್ವಯಂ ಘೋಷಿತ ವಿವಿಗಳ ಬಗ್ಗೆ ಎಚ್ಚರವಹಿಸಿ ಎಂದು ಯುಜಿಸಿ ಪ್ರಕಟಣೆಯಲ್ಲಿ ಹೇಳಿದೆ. 21 ನಕಲಿ ವಿವಿಗಳ ಪಟ್ಟಿ ಇಂತಿದೆ:
1. ಮೈಥಿಲಿ ವಿವಿ, ದರ್ಭಾಂಗ, ಬಿಹಾರ
2. ವರ್ಣಸೇಯ ಸಂಸ್ಕೃತ ವಿಶ್ವವಿದ್ಯಾಲಯ, ದೆಹಲಿ
3. ಕಮರ್ಷಿಯಲ್ ವಿವಿ ಲಿಮಿಟೆಡ್, ದೆಹಲಿ.
4. ಯುನೈಟೆಡ್ ನ್ಯಾಷನಲ್ ವಿಶ್ವವಿದ್ಯಾಲಯ, ದೆಹಲಿ
5. ಪ್ರಾದೇಶಿಕ ವಿಶ್ವವಿದ್ಯಾಲಯ, ದೆಹಲಿ.
6. ಎಡಿಆರ್- ಸೆಂಟ್ರಲ್ ಜ್ಯೂರಿಡಿಕಲ್ ವಿಶ್ವವಿದ್ಯಾಲಯ, ದೆಹಲಿ
7. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ದೆಹಲಿ
8. ಬದಗ್ನಾವಿ ಸರ್ಕಾರ್ ವಿಶ್ವ ಮುಕ್ತ ಶಿಕ್ಷಣ ಸಂಸ್ಥೆ, ಬೆಳಗಾವಿ, ಕರ್ನಾಟಕ.
9. ಸೈಂಟ್ ಜಾನ್ಸ್ ವಿಶ್ವವಿದ್ಯಾಲಯ, ಕೃಷ್ಣಾಟ್ಟಂ, ಕೇರಳ
10. ಕೇಸರ್ವಾಣಿ ವಿದ್ಯಾಪೀಠ, ಜಬಲ್ ಪುರ್, ಮಧ್ಯಪ್ರದೇಶ.
11. ರಾಜಾ ಅರೇಬಿಕ್ ವಿವಿ, ನಾಗಪುರ, ಮಹಾರಾಷ್ಟ್ರ.
12. ಡಿಡಿಬಿ ಸಂಸ್ಕೃತ ವಿವಿ, ತಿರುಚ್ಚಿ, ತಮಿಳುನಾಡು
13. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಲರ್ನೇಟಿವ್ ಮೆಡಿಸನ್, ಕೋಲ್ಕತ್ತಾ, ಪಶ್ಚಿಮ ಬೆಂಗಾಳ.
14. ಮಹಿಳಾ ಗ್ರಾಮ ವಿದ್ಯಾಪೀಠ, ಅಲಹಾಬಾದ್, ಉತ್ತರಪ್ರದೇಶ.
15. ಗಾಂಧಿ ಹಿಂದಿ ವಿದ್ಯಾಪೀಠ, ಅಲಹಾಬಾದ್, ಉತ್ತರಪ್ರದೇಶ.
16. ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪೆಕ್ಸ್ ಹೋಮಿಯೋಪತಿ, ಕಾನ್ಪುರ, ಉತ್ತರಪ್ರದೇಶ.
17. ನೇತಾಜಿ ಸುಭಾಷ್ ಚಂದ್ರ ಬೋಸ್ ವಿವಿ, ಆಲಿಘರ್, ಉತ್ತರಪ್ರದೇಶ.
18. ಉತ್ತರಪ್ರದೇಶ್ ವಿಶ್ವವಿದ್ಯಾಲಯ, ಉತ್ತರಪ್ರದೇಶ.
19. ಮಹಾರಾಣ ಪ್ರತಾಪ್ ಶಿಕ್ಷಣ ನಿಕೇತನ್ ವಿದ್ಯಾಲಯ, ಉತ್ತರಪ್ರದೇಶ.
20. ಇಂದ್ರಪ್ರಸ್ಥ ಶಿಕ್ಷಣ ಪರಿಷತ್ ನೋಯ್ಡಾ, ಉತ್ತರಪ್ರದೇಶ.
21. ಗುರುಕುಲ ವಿಶ್ವವಿದ್ಯಾಲಯ, ಮಥುರಾ, ಉತ್ತರಪ್ರದೇಶ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications