ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಜಿಸಿ ಶಾಕ್: ಕೆಎಸ್ಒಯು ಮಾನ್ಯತೆ ರದ್ದು?

|
Google Oneindia Kannada News

ಬೆಂಗಳೂರು, ಜೂ. 18: ನೀವು ಕರ್ನಾಟಕ ಮುಕ್ತ ವಿಶ್ವದ್ಯಾಲಯದಲ್ಲಿ 2012-13ರ ನಂತರ ಡಿಗ್ರಿ ಪಡೆದುಕೊಂಡಿದ್ದೀರಾ? ಹಾಗಾದರೆ ಈ ಸುದ್ದಿಯನ್ನು ಗಮನವಿಟ್ಟು ಓದಿ. ಕೆಎಸ್ ಒಯು ಕೆಲ ನಿಯಮಗಳನ್ನು ಗಾಳಿಗೆ ತೂರಿದೆ ಎಂದು ಹೇಳಿರುವ ಯುಜಿಸಿ ವಿಶ್ವವಿದ್ಯಾಲಯ ನೀಡಿದ್ದ ಪದವಿಗಳ ಮಾನ್ಯತೆಯನ್ನು ರದ್ದು ಮಾಡಿದೆ.

ದೂರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಯುಜಿಸಿಯ ನಿಯಮಗಳನ್ನು ಕೆಎಸ್ಒಯು ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ 2012 -2013 ರ ನಂತರದ ಮುಕ್ತ ವಿಶ್ವವಿದ್ಯಾನಿಲಯದ ಎಲ್ಲಾ ಕೋರ್ಸ್ ಗಳ ಮಾನ್ಯತೆ ರದ್ದುಗೊಳಿಸಲಾಗಿದೆ ಎಂದು ಯುಜಿಸಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.[ಮಾನಸ ಗಂಗೋತ್ರಿ ವಿವಿ ಘಟಿಕೋತ್ಸವದ ಚಿತ್ರಗಳು]

mysuru

ವಿದ್ಯಾರ್ಥಿಗಳು ಕೆಎಸ್ಒಯು ವಿವಿಯಲ್ಲಿ 2012 -13 ನಂತರದ ಯಾವುದೇ ವೃತ್ತಿಪರ/ ತಾಂತ್ರಿಕ ಕೋರ್ಸ್ ಗಳಿಗೂ ನೋಂದಣಿ ಮಾಡದಂತೆ ಯುಜಿಸಿ ಎಚ್ಚರಿಕೆ ನೀಡಿದೆ. ವಿಶ್ವವಿದ್ಯಾನಿಲಯ ಮಾನ್ಯತೆ ರದ್ದು ಬಗ್ಗೆ ಸ್ಪಷ್ಟನೆ ನೀಡಿರುವ ಕುಲಪತಿ ಪ್ರೊ. ಎಂ.ಜಿ ಕೃಷ್ಣನ್, ಮಾನ್ಯತೆ ರದ್ದುಗೊಡಿರುವುದರಿಂದ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ, ಯುಜಿಸಿ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಾಗುವುದು. ಯಾವುದೇ ನಿಯಮಾವಳಿಗಳನ್ನು ಮೀರಿರುವುದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.

ಸದ್ಯ ಕೋರ್ಸ್ ಮುಂದುವರಿಸುತ್ತಿರುವ ಮತ್ತು ಕಳೆದ ವರ್ಷಗಳಲ್ಲಿ ಪದವಿ ಪಡೆದುಕೊಂಡವರು ಆತಂಕಕ್ಕೆ ಸಿಲುಕಿದ್ದಾರೆ. ಯುಜಿಸಿ ಮತ್ತು ವಿವಿಯ ತಿಕ್ಕಾಟದಲ್ಲಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಮಸುಕಾಗಲಿದ್ದು ಶೀಘ್ರ ಪರಿಹಾರ ಕಂಡುಕೊಳ್ಳಬೇಕಾಗಿದೆ.

English summary
The Karnataka State Open University (KSOU), Mysuru has been de-recognized by the University Grants Commission (UGC). In the report submitted on June 18, 2015, UGC has said that, KSOU has violated many rules and regulations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X