ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಸಂಜೆ ಪ್ರಧಾನಿಯಿಂದ ನೂತನ ಸಚಿವರ ಭೇಟಿ

By Kiran B Hegde
|
Google Oneindia Kannada News

ನವದೆಹಲಿ, ನ. 10: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಜೆ ನೂತನ ಸಂಪುಟ ಸಚಿವರನ್ನು ಭೇಟಿ ಮಾಡಲಿದ್ದಾರೆ. ನಂತರ ಸಂಪೂರ್ಣ ಮಂತ್ರಿ ಮಂಡಳದ ಸಭೆ ನಡೆಯಲಿದೆ. ಮೋದಿಯವರ ನೂತನ ತಂಡದಲ್ಲಿ 26 ಸಂಪುಟ ದರ್ಜೆ ಸಚಿವರಿದ್ದು, ಮಂತ್ರಿ ಮಂಡಳದಲ್ಲಿ 65 ಸದಸ್ಯರು ಇದ್ದಾರೆ.

cabinetnew

ರಕ್ಷಣಾ ಸಚಿವರಾಗಿ ಮನೋಹರ ಪರಿಕ್ಕರ್ ಹಾಗೂ ರೈಲ್ವೆ ಸಚಿವರಾಗಿ ಸುರೇಶ ಪ್ರಭು ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಒಟ್ಟು 21 ನೂತನ ಸಚಿವರು ಸೇರ್ಪಡೆಯಾಗಿದ್ದಾರೆ. ಅಲ್ಲದೆ, ಕರ್ನಾಟಕದ ಸದಾನಂದ ಗೌಡ ಹಾಗೂ ಜಿ.ಎಂ. ಸಿದ್ದೇಶ್ವರ್ ಸೇರಿ ಐವರ ಖಾತೆ ಬದಲಾಗಿದೆ. ಈ ಹಿನ್ನೆಲೆಯಲ್ಲಿ ನೂತನ ಮಂತ್ರಿ ಮಂಡಲವನ್ನು ನರೇಂದ್ರ ಮೋದಿ ಭೇಟಿ ಮಾಡುವರು. ನೂಚನ ಸಚಿವರ ಸೇರ್ಪಡೆ ಹಾಗೂ ಖಾತೆ ಬದಲಾವಣೆ ನಂತರ ಸಚಿವರ ಜತೆ ಪ್ರಧಾನ ಮಂತ್ರಿಯವರ ಪ್ರಥಮ ಭೇಟಿ ಇದಾಗಿದೆ.

ಎನ್‌ಡಿಎ ಸರ್ಕಾರದ ಮೇಲೆ ಜನರು ತೀವ್ರ ನಿರೀಕ್ಷೆ ಇಟ್ಟಿರುವ ಹಿನ್ನೆಲೆಯಲ್ಲಿ ಕಾರ್ಯ ಯೋಜನೆಗಳಿಗೆ ವೇಗ ನೀಡಲು ನರೇಂದ್ರ ಮೋದಿ ತೀರ್ಮಾನಿಸಿದ್ದಾರೆ. ಆದ್ದರಿಂದ ಸಚಿವರಿಗೆ ಪ್ರಧಾನ ಮಂತ್ರಿಯವರು ಹಲವು ಸಲಹೆ, ಸೂಚನೆ ನೀಡುವ ಸಂಭವವಿದೆ.

English summary
Narendra Modi likely to meet new cabinet and council of ministers on Monday evening. In new team of Narendra Modi 26 members are in cabinet and 65 members are in council of ministers. This is the first meet to ministers after cabinet expansion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X