ಭಾರತದ ಮೇಲೆ ಕಣ್ಗಾವಲಿಗೆ ಚೀನಾದಿಂದ ಪಾಕ್ ನ ಎರಡು ಉಪಗ್ರಹ ಉಡಾವಣೆ

ನವದೆಹಲಿ, ಜುಲೈ 9: ಭಾರತದ ಮೇಲೆ ಕಣ್ಗಾವಲು ಇಡುವುದಕ್ಕೆ ಪಾಕಿಸ್ತಾನಕ್ಕೆ ಸಹಾಯ ಆಗುವಂಥ ಎರಡು ಉಪಗ್ರಹಗಳನ್ನು ಸೋಮವಾರ ಚೀನಾ ಉಡಾವಣೆ ಮಾಡಿದೆ.PRSS- 1 ಇದು ರಿಮೋಟ್ ಸೆನ್ಸಿಂಗ್ ಉಪಗ್ರಹವಾಗಿದ್ದು, ಚೀನಾ ನಿರ್ಮಿಸಿದೆ. ಇನ್ನು PakTES- 1A- ಪಾಕಿಸ್ತಾನದ ಸ್ವದೇಶಿ ನಿರ್ಮಿತವಾಗಿದ್ದು, ವೈಜ್ಞಾನಿಕ ಸಂಶೋಧನೆಗೆ ರೂಪಿಸಲಾಗಿದೆ.

ವಾಯವ್ಯ ಚೀನಾದ ಜಿಯುಕ್ವಾನ್ ಉಪಗ್ರಹ ಕೇಂದ್ರದಿಂದ ಸೋಮವಾರ ಉಡಾವಣೆ ಮಾಡಲಾಗಿದೆ. PRSS- 1 ಉಪಗ್ರಹವು ಹಗಲು- ರಾತ್ರಿ ನಿಗಾ ಮಾಡುವ ಸಾಮರ್ಥ್ಯ ಹೊಂದಿದೆ. ಮೋಡ ಕವಿದ ವಾತಾವರಣದಲ್ಲೂ ಸ್ಪಷ್ಟವಾಗಿ ವೀಕ್ಷಣೆ ಮಾಡಬಲ್ಲಂಥದ್ದಾಗಿದೆ. ಭೂ ಹಾಗೂ ಗಣಿ ಸರ್ವೇ, ಪ್ರಕೃತಿ ವಿಕೋಪ ನಿರ್ವಹಣೆ, ಚೀನಾದ ರಸ್ತೆ ನಿರ್ಮಾಣ ಕಾಮಗಾರಿ ನಿಗಾಗೆ ಇದರಿಂದ ಸಹಾಯ ಆಗಲಿದೆ.

China

ಜತೆಗೆ ಭಾರತದ ಮೇಲೆ ಕಣ್ಗಾವಲು ಇಡಲು ಪಾಕಿಸ್ತಾನಕ್ಕೆ ಇದರಿಂದ ಅನುಕೂಲ ಆಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಹಾಗೆ ನೋಡಿದರೆ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ಪಾಕಿಸ್ತಾನಕ್ಕಿಂತ ಅದೆಷ್ಟೋ ಹೆಜ್ಜೆ ಮುಂದಿದೆ. ಬಾಹ್ಯಾಕಾಶದಲ್ಲಿ ಭಾರತದ ನಲವತ್ಮೂರು ಕಾರ್ಯನಿರತ ಉಪಗ್ರಹಗಳಿವೆ.

ಉಪಗ್ರಹದ ಚಿತ್ರಗಳನ್ನು ಬಳಸಿಯೇ ಎರಡು ವರ್ಷದ ಹಿಂದೆ ಭಾರತವು ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+