• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿಯಂತೆ ದೊಡ್ಡದಾಗಿ ಆಲೋಚಿಸಿದರೆ ಗೆಲುವು ನಮ್ಮದಾಗುತ್ತೆ: ಸಲ್ಮಾನ್ ಖುರ್ಷಿದ್

|
Google Oneindia Kannada News

ನವದೆಹಲಿ, ಮೇ 17: ನಾವು ಕೂಡ ಬಿಜೆಪಿಯಂತೆ ದೊಡ್ಡದಾಗಿ ಆಲೋಚಿಸಿದರೆ ಗೆಲುವು ನಮ್ಮದಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

ನಮ್ಮದು ಸಧ್ಯದ ತಯಾರಿ ಸಣ್ಣದಿದೆ ಹಾಗೂ ದುರ್ಬಲವಾಗಿದೆ ಹೀಗಾಗಿಯೇ ಗೆಲುವು ನಮ್ಮ ಕೈತಪ್ಪಿ ಹೋಗಿದೆ, ಮುಂದಿನ ದಿನಗಳಲ್ಲಿ ದೊಡ್ಡದಾಗಿ ಆಲೋಚಿಸಬೇಕಿದೆ ಎಂದರು.

ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ವಿಧಾನಸಭೆ ಚುನಾವಣೆಗಳಲ್ಲಿ ನಾವು ಕಳೆದುಕೊಂಡಿರುವುದನ್ನು ಮರಳಿ ಪಡೆಯಲು ಎಂದೂ ಸಾಧ್ಯವಿಲ್ಲ, ನಾವು ತುಂಬಾ ಚಿಕ್ಕವರು,, ನಾವು ತುಂಬಾ ದುರ್ಬಲರು ಎಂದು ಎಂದಿಗೂ ಒಪ್ಪಿಕೊಳ್ಳಬಾರದು. ಅಥವಾ ನನ್ನ ಪ್ರಕಾರ ಬಿಜೆಪಿ ಅಸ್ತಿತ್ವದಲ್ಲಿಲ್ಲದ ದೊಡ್ಡ ತಂತ್ರ ಮಾಡಿದೆ.

ಮತ್ತು ಅವರು ಇನ್ನೂ ಯಾವುದೇ ಅಸ್ತಿತ್ವವನ್ನು ಹೊಂದಿರದ ಜಾಗಗಳಲ್ಲಿ ಹಾಗೆ ಮಾಡುವ ಪ್ರಯತ್ನ ಮಾಡಿದ್ದಾರೆ. ಎಂದು ಖುರ್ಷಿದ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಅಗತ್ಯವಿರುವಾಗಲೇ ಪ್ರಧಾನಿ ಮೋದಿ ಕಾಣಿಸುತ್ತಿಲ್ಲ: ರಾಹುಲ್ ಗಾಂಧಿಅಗತ್ಯವಿರುವಾಗಲೇ ಪ್ರಧಾನಿ ಮೋದಿ ಕಾಣಿಸುತ್ತಿಲ್ಲ: ರಾಹುಲ್ ಗಾಂಧಿ

ಮುಂದಿನ ವರ್ಷ ನಡೆಯಲಿರುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ ಜನರ ಮಧ್ಯ ಇರುವ ಪ್ರಣಾಳಿಕೆಯಾಗಿದೆ ಎಂದು ಖುರ್ಷಿದ್ ಹೇಳಿದ್ದಾರೆ.

ಕಾಂಗ್ರೆಸ್ ಹೆಚ್ಚು ಪ್ರದೇಶಗಳನ್ನು ಕಳೆದುಕೊಂಡಿದೆ ಮತ್ತು ಈಗ ಅದನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂಬ ನಿರಾಶಾವಾದಿ ದೃಷ್ಟಿಕೋನವನ್ನು ಒಪ್ಪಿಕೊಳ್ಳಬಾರದು. ನಾನು ದೃಢ ನಿಶ್ವಯ ಮತ್ತು ಆತ್ಮವಿಶ್ವಾಸದಿಂದ ಯೋಚಿಸುತ್ತೇನೆ, ಹಾಗಾದರೆ ನಾವು ಮತ್ತೆ ಮುಂದುವರಿಯಬಹುದು,ಅದನ್ನೇ ನಾವು ಮಾಡಬೇಕು ಎಂದು ಅವರು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಇಂಡಿಯನ್ ಸೆಕ್ಯುಲರ್ ಫ್ರಂಟ್ ಜೊತೆಗಿನ ಒಡನಾಟಕ್ಕೆ ತಕ್ಕ ಬೆಲೆ ತೆರಬೇಕಾಯಿತು. ಅಲ್ಲದೆ ಎಐಯುಡಿಎಫ್ ಜೊತೆಗಿನ ಸಹಭಾಗಿತ್ವವು ಅಸ್ಸಾಂ ನಲ್ಲಿ ಕಾಂಗ್ರೆಸ್ ಗೆ ದೊಡ್ಡ ಆಘಾತವನ್ನು ನೀಡಿತು ಎನ್ನುವ ಬಗ್ಗೆ ಮಾತನಾಡಿದ ಖುರ್ಷಿದ್.

ನೀವು ಯಶಸ್ವಿಯಾಗದಿದ್ದಾಗ, ಇದು ಸಾಮಾನ್ಯವಾಗಿ ನೀಡುವ ವಿವರಣೆಯಾಗಿದೆ. ನೀವು ಯಶಸ್ವಿಯಾದಾಗ ನಿಮಗೆ ಬೇರೆ ಬಗೆಯಲ್ಲಿ ವಿವರಿಸಲಾಗುತ್ತದೆ. ಆದ್ದರಿಂದ, ನಿಮ್ಮ ನಿರ್ಧಾರವನ್ನು ವಿಶ್ಲೇಷಿಸಲು ಸಹಾಯ ಮಾಡಿದರೂ ನಂತರದ ವಿವರಣೆಗಳು ಸಂವೇದನಾಶೀಲವಾಗಿವೆ ಎಂದು ನಾನು ಭಾವಿಸುವುದಿಲ್ಲ.

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯುದ್ಧತಂತ್ರದ ಪರಿಣಾಮವಿದೆ ಎಂದು ಖುರ್ಷಿದ್ ಒಪ್ಪಿಕೊಂಡರು, ಅಲ್ಲಿ ಕಾಂಗ್ರೆಸ್ ಮತ್ತು ಎಡಪಂಥೀಯರನ್ನು ಅಳಿಸಿಹಾಕಲಾಯಿತು.

ಅದು ನಿಜ. ಬಂಗಾಳದಲ್ಲಿ ನಡೆದ ಯುದ್ಧತಂತ್ರ ಅಸ್ಸಾಂನಲ್ಲಿ ಸಂಭವಿಸಿರದೆ ಇರಬಹುದು ಆದರೆ ಸ್ಪಷ್ಟವಾಗಿ ಯುದ್ಧತಂತ್ರ ಎರಡೂ ಸ್ಥಳಗಳಲ್ಲಿ ಯಶಸ್ವಿಯಾಗಿದೆ. ಭವಿಷ್ಯದ ಪಕ್ಷವಾಗಿ ನಾವು ಅದನ್ನು ಹೇಗೆ ಕಾಣುತ್ತೇವೆ ಇದು ನಾವು ಪರಿಗಣಿಸಬೇಕಾದ ವಿಷಯ ಎಂದು ಅವರು ಹೇಳಿದರು.

English summary
Senior Congress leader Salman Khurshid wants his party to think big like the BJP, and refuse to accept “pessimistic view" that the outfit has now become too small, weak and cannot regain its lost ground.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X