ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಆರ್ಥಿಕ ಹಿಂಜರಿತ ಉಂಟಾಗುವುದಿಲ್ಲ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

|
Google Oneindia Kannada News

ನವದೆಹಲಿ, ಆಗಸ್ಟ್ 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಭಾರತದಲ್ಲಿ ಯಾವುದೇ ಕಾರಣಕ್ಕೂ ಆರ್ಥಿಕ ಹಿಂಜರಿತ ಅಥವಾ ಬಿಕ್ಕಟ್ಟು ಉಂಟಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ, ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್‌ ಸಂಸದರು ಕಲಾಪ ಬಹಿಷ್ಕರಿಸಿ ಹೊರನಡೆಯುವ ನಡುವೆ, ಲೋಕಸಭೆಯಲ್ಲಿ ಬೆಲೆ ಏರಿಕೆ ವಿಷಯದ ಚರ್ಚೆವೇಳೆ ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ ಪ್ರಶ್ನೆಗೆ ಉತ್ತರಿಸಿದ ಸಚಿವೆ ನಿರ್ಮಲಾ ಸೀತಾರಾಮನ್, "ಭಾರತದ ಆರ್ಥಿಕತೆಯು ಸ್ಥಗಿತಗೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಲು ಬಯಸುತ್ತೇನೆ. ಅಮೆರಿಕದಲ್ಲಿ ಅದನ್ನು ತಾಂತ್ರಿಕ ಹಿಂಜರಿತ ಎಂದು ಕರೆಯಲಾಗುತ್ತದೆ. ಭಾರತವು ಆರ್ಥಿಕ ಹಿಂಜರಿತಕ್ಕೆ ಜಾರುವ ಸಂಭವನೀಯತೆ ಶೂನ್ಯವಾಗಿದೆ" ಎಂದು ಉತ್ತರ ನೀಡಿದರು.

ಆದರೆ, ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ನಾಯಕರು ಬೆಲೆ ಏರಿಕೆ ಬಗ್ಗೆ ಭಾರಿ ಪ್ರತಿಭಟನೆ ನಡೆಸಿದರು. ಆಹಾರ ವಸ್ತುಗಳ ಮೇಲೆ ಜಿಎಸ್‌ಟಿ, ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರ ಕೈಗೊಂಡ ಕ್ರಮಗಳ ನಂತರ ಆಹಾರ ಧಾನ್ಯಗಳು, ಅಡುಗೆ ಎಣ್ಣೆ ಬೆಲೆಗಳನ್ನು ಕಡಿಮೆ ಮಾಡಲಾಗಿದೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದರು.

ಸಂಸತ್ತು ರೌಂಡಪ್: ನಾಲ್ವರು ಕಾಂಗ್ರೆಸ್ ಸದಸ್ಯರ ಅಮಾನತು ರದ್ದು, ರಾವುತ್ ಬಂಧನಕ್ಕೆ ಗದ್ದಲಸಂಸತ್ತು ರೌಂಡಪ್: ನಾಲ್ವರು ಕಾಂಗ್ರೆಸ್ ಸದಸ್ಯರ ಅಮಾನತು ರದ್ದು, ರಾವುತ್ ಬಂಧನಕ್ಕೆ ಗದ್ದಲ

 ಸಾಂಕ್ರಾಮಿಕದ ವೇಳೆಯೂ ಉತ್ತಮ ನಿರ್ವಹಣೆ

ಸಾಂಕ್ರಾಮಿಕದ ವೇಳೆಯೂ ಉತ್ತಮ ನಿರ್ವಹಣೆ

ನಿರ್ಮಲಾ ಸೀತಾರಾಮನ್ ಅವರು "ಆರ್ಥಿಕತೆಯ ಮೇಲೆ ಕೋವಿಡ್ ಹೊಡೆತದ ಹೊರತಾಗಿಯೂ, ನಾವು ಹಣದುಬ್ಬರ ದರವನ್ನು ಶೇಕಡಾ 7 ಅಥವಾ ಅದಕ್ಕಿಂತ ಕಡಿಮೆ ಮಟ್ಟದಲ್ಲಿ ನಿರ್ವಹಿಸಿದ್ದೇವೆ" ಎಂದು ಹೇಳಿದರು, ಭಾರತೀಯ ಆರ್ಥಿಕತೆಯು ಉತ್ತಮವಾಗಿ ಚೇತರಿಸಿಕೊಂಡಿದೆ ಎಂದು ಹೇಳಿದರು.
"ಸಾಂಕ್ರಾಮಿಕ, ಕೊರೊನಾ ಎರಡನೇ ಅಲೆ, ಓಮೈಕ್ರಾನ್, ರಷ್ಯಾ-ಉಕ್ರೇನ್ ಯುದ್ಧ, ಇಂದಿಗೂ ಚೀನಾದಲ್ಲಿ ಅತಿದೊಡ್ಡ ಪೂರೈಕೆ ಘಟಕಗಳು ಲಾಕ್‌ಡೌನ್‌ ತೆರವು ಮಾಡಿಲ್ಲ ಎಂದ ಅವರು. ಅದರ ಹೊರತಾಗಿಯೂ, ನಾವು ಹಣದುಬ್ಬರವನ್ನು ಶೇಕಡ 7 ಅಥವಾ ಅದಕ್ಕಿಂತ ಕಡಿಮೆ ಒಳಗೆ ನಿರ್ವಹಿಸಿದ್ದೇವೆ," ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

 ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ

ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ

ಸದನದಲ್ಲಿ ಬೆಲೆ ಏರಿಕೆಯ ವಿಷಯದ ಬಗ್ಗೆ ಸುಮಾರು 30 ಪ್ರತಿಪಕ್ಷ ಸಂಸದರು ಮಾತನಾಡಿದ್ದಾರೆ ಎಂದು ಸೀತಾರಾಮನ್ ಹೇಳಿದರು, ಅದರಲ್ಲಿ ಹೆಚ್ಚಿನವರು ಅಂಕ-ಅಂಶಗಳ ಮೇಲಿನ ಕಾಳಜಿಗಿಂತ ಹೆಚ್ಚಾಗಿ ರಾಜಕೀಯ ದೃಷ್ಟಿಕೋನಗಳಲ್ಲಿ ಪ್ರಶ್ನೆ ಮಾಡಿದ್ದಾರೆ ಹಾಗಾಗಿ, ನಾನು ಕೂಡ ಸ್ವಲ್ಪ ರಾಜಕೀಯವಾಗಿ ಉತ್ತರಿಸಲು ಪ್ರಯತ್ನಿಸುತ್ತೇನೆ ಎಂದು ಸೀತಾರಾಮನ್ ಹೇಳಿದರು.

ಜಾಗತಿಕ ಏಜೆನ್ಸಿಗಳ ಮೌಲ್ಯಮಾಪನದಲ್ಲಿ ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಉಳಿದಿದೆ ಎಂದು ಅವರು ಹೇಳಿದರು. "ಭಾರತದ ಜನರಿಗೆ ನಾನು ಸಂಪೂರ್ಣ ಮನ್ನಣೆ ನೀಡುತ್ತೇನೆ, ಪ್ರತಿಕೂಲತೆಯ ವಿರುದ್ಧವೂ ನಾವು ಎದ್ದು ನಿಲ್ಲಲು ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಗುರುತಿಸಲು ಸಾಧ್ಯವಾಗುತ್ತದೆ" ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

 ಸಮರ್ಥವಾಗಿ ಕೋವಿಡ್ ನಿರ್ವಹಣೆ ಮಾಡಿದ್ದೇವೆ

ಸಮರ್ಥವಾಗಿ ಕೋವಿಡ್ ನಿರ್ವಹಣೆ ಮಾಡಿದ್ದೇವೆ

ಈವರೆಗೆ ಜಗತ್ತು ಇಂತಹ ಸಾಂಕ್ರಾಮಿಕ ರೋಗವನ್ನು ನೋಡಿರಲಿಲ್ಲ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. "ಈ ರೀತಿಯ ಸಾಂಕ್ರಾಮಿಕ ರೋಗವನ್ನು ನಾವು ಎಂದಿಗೂ ನೋಡಿಲ್ಲ. ನಮ್ಮ ದೇಶದ ಜನರಿಗೆ ಸಾಕಷ್ಟು ಸಹಾಯ ಮಾಡಲಾಗಿದೆ ಎಂದು ನಾನು ಖಚಿತಪಡಿಸುತ್ತೇನೆ. ಪ್ರತಿಯೊಬ್ಬ ಸಂಸದರೂ ಮತ್ತು ಎಲ್ಲಾ ರಾಜ್ಯ ಸರ್ಕಾರಗಳು ಕೋವಿಡ್‌ ಸಾಂಕ್ರಾಮಿಕ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಎಂದು ನಾನು ತಿಳಿಸುತ್ತೇನೆ. ಅವರು ಉತ್ತಮವಾಗಿ ಕಾರ್ಯ ನಿರ್ವಹಿಸದಿದ್ದರೆ, ಪ್ರಚಂಚ ನಮ್ಮನ್ನು ಗುರುತಿಸುತ್ತಿರಲಿಲ್ಲ" ಎಂದು ಅವರು ತಿಳಿಸಿದರು.

 ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಗದ್ದಲ

ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಗದ್ದಲ

ಸೋಮವಾರ ಲೋಕಸಭೆಯು ಬೆಲೆ ಏರಿಕೆಯ ಚರ್ಚೆಯನ್ನು ಕೈಗೆತ್ತಿಕೊಂಡಾಗ, ಕಾಂಗ್ರೆಸ್‌ನ ಮನೀಷ್ ತಿವಾರಿ, ಟಿಎಂಸಿಯ ಕಾಕೋಲಿ ಘೋಷ್ ದಸ್ತಿದಾರ್ ಮತ್ತು ಡಿಎಂಕೆಯ ಕನಿಮೋಳಿ ಮತ್ತು ಹಲವು ವಿರೋಧ ಪಕ್ಷದ ನಾಯಕರು ಇಂಧನ ಮತ್ತು ಆಹಾರ ಹಣದುಬ್ಬರ ಮತ್ತು ಜಿಎಸ್‌ಟಿ ಅನುಷ್ಠಾನದ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಲೋಕಸಭೆಯಲ್ಲಿ ಶಿವಸೇನೆ ಸಂಸದ ವಿನಾಯಕ್ ರಾವುತ್ ಮತ್ತು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು ಈ ವಿಷಯದ ಕುರಿತು ಚರ್ಚೆಗೆ ನೋಟಿಸ್ ನೀಡಿದರು. ರಾಜ್ಯಸಭೆಯಲ್ಲಿ ಎನ್‌ಸಿಪಿ ಸಂಸದೆ ಫೌಜಿಯಾ ಖಾನ್ ನೋಟಿಸ್ ಸಲ್ಲಿಸಿದ್ದಾರೆ.

Recommended Video

ಕ್ಯಾಪ್ಟನ್ ಕೂಲ್ ದಾಖಲೆ ಮುರಿದ ಕೌರ್ | OneIndia Kannada

English summary
Amid A walkout By Congress MPs In Lok Sabha Finance Minister Nirmala Sitharaman on Monday said there was zero possibility of India slipping into stagflation or recession. The finance minister said that that prices of edible had been corrected sharply following the steps taken by government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X