ಟೆಸ್ಟ್ ಪಂದ್ಯ ಆಡುತ್ತಿದ್ದಾಗಲೇ ಪಿರಿಯಡ್ಸ್ ಆರಂಭ, ಮೈದಾನ ಬಿಟ್ಟು ಓಡಬೇಕಾಯಿತು: ಹೆಣ್ಮಕ್ಕಳ ಸಂಕಟ ಬಿಚ್ಚಿಟ್ಟ ಸ್ಮೃತಿ ಮಂದಾನ

Smriti Mandhana: ಕೆಲವೇ ದಿನಗಳಲ್ಲಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿ ಆರಂಭವಾಗಲಿದೆ. ಇದಕ್ಕೂ ಮನ್ನ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಮತ್ತು ಉಪನಾಯಕಿ ಸ್ಮೃತಿ ಮಂದಾನ ಅವರು ಮೈದಾನದಲ್ಲಿ ಎದುರಿಸುವ ಕಠಿಣ ಸಲಾವೊಂದರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇದು ಇದೀಗ ಕ್ರಿಕೆಟ್‌ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಹಾಗಾದ್ರೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಮಹಿಳಾ ಐಸಿಸಿ ಟಿ20 ವಿಶ್ವಕಪ್ 2026ರ ಹಿನ್ನೆಲೆಯಲ್ಲಿ ನೀಡಿದ ಸಂದರ್ಶನದರಲ್ಲಿ ಸ್ಮೃತಿ ಮಂದಾನ ಅವರು ಈ ಸೂಕ್ಷ್ಮ ವಿಷಯದ ಬಗ್ಗೆ ಮಾತನಾಡಿದ್ದಾರೆ. ಮಹಿಳಾ ಕ್ರೀಡಾಪಟುಗಳು ಮೈದಾನದಲ್ಲಿ ಎಷ್ಟೊಂದು ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಮೆಟ್ಟಿ ನಿಂತು ಸಾಧನೆ ಮಾಡುತ್ತಾರೆ ಎಂಬುದನ್ನು ಅವರು ತಿಳಿಸಿಕೊಟ್ಟಿದ್ದಾರೆ.

Smriti Mandhana Reveals Periods Started During Test Match Shares Challenging On Field Experience

ಮಹಿಳಾ ಕ್ರೀಡಾಪಟುಗಳು ಎದುರಿಸುವ ಕಠಿಣ ಸವಾಲುಗಳು

'ಮುಟ್ಟಿನ ದಿನಗಳಲ್ಲಿ ತೀವ್ರವಾದ ಹೊಟ್ಟೆನೋವು, ಸುಸ್ತು ಮತ್ತು ದೈಹಿಕ ಅಸ್ವಸ್ಥತೆ ಇದ್ದರೂ ಮೈದಾನಕ್ಕಿಳಿದು ದೇಶಕ್ಕಾಗಿ ಆಡುವುದು ಪ್ರತಿಯೊಬ್ಬ ಮಹಿಳಾ ಕ್ರಿಕೆಟರ್‌ಗೆ ದೊಡ್ಡ ಸವಾಲಾಗಿರುತ್ತದೆ. ಋತುಸ್ರಾವದ ಸಮಯದಲ್ಲಿ ದೇಹವು ಬೇಗನೆ ದಣಿಯುತ್ತದೆ ಮತ್ತು ಅತಿಯಾದ ದೈಹಿಕ ಶ್ರಮದಿಂದಾಗಿ ಸ್ನಾಯುಗಳ ಸೆಳೆತ ಕಾಣಿಸಿಕೊಳ್ಳುತ್ತದೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವಾಗ ಇಂತಹ ಕಾರಣಗಳನ್ನು ನೀಡಿ ಪಂದ್ಯದಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ನೋವಿದ್ದರೂ ಸಹ ಬ್ಯಾಟಿಂಗ್, ಬೌಲಿಂಗ್ ಅಥವಾ ಫೀಲ್ಡಿಂಗ್‌ನಲ್ಲಿ 100ರಷ್ಟು ಶ್ರಮ ಹಾಕಲೇಬೇಕಾಗುತ್ತದೆ,' ಎಂದು ಸ್ಮೃತಿ ಮಂದಾನ ಅವರು ಹೇಳಿದ್ದಾರೆ.

'ಸಾಮಾನ್ಯ ದಿನಗಳಲ್ಲೇ 50 (ODI) ಓವರ್‌ಗಳ ಪಂದ್ಯ ಅಥವಾ ಟಿ20 ಪಂದ್ಯವನ್ನು ಆಡುವುದು ದೈಹಿಕವಾಗಿ ತುಂಬಾ ಕಷ್ಟಕೆ ಕೆಲಸ. ಇನ್ನು ಮುಟ್ಟಿನ ಸಮಯದಲ್ಲಿ ಪಂದ್ಯ ಆಡುವುದು ಮತ್ತಷ್ಟು ಕಷ್ಟಕರ ಆಗಿರುತ್ತದೆ. ತೀವ್ರವಾದ ಹೊಟ್ಟೆನೋವು ಮತ್ತು ಸುಸ್ತು ಹೊರತಾಗಿತೂ ಸಾಧನೆಗಾಗಿ, ದೇಶಕ್ಕಾಗಿ ಮೈದಾನದಲ್ಲಿ ಆಡಲೇಬೇಕಾಗುತ್ತದೆ,' ಎಂದು ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್ ವೇಳೆ ಎದುರಿಸುವ ಸವಾಲುಗಳು

'ಟೆಸ್ಟ್ ಕ್ರಿಕೆಟ್ ಆಡುವಾಗ ಬಿಳಿ ಬಣ್ಣದ ಜರ್ಸಿಯನ್ನು ಧರಿಸಬೇಕಾಗುತ್ತದೆ. ಆ ಸಮಯದಲ್ಲಿ ಮುಟ್ಟಾದರೆ, ಬಟ್ಟೆಯ ಮೇಲೆ ಕಲೆಗಳಾಗಬಹುದೇನೋ ಎನ್ನುವ ಮಾನಸಿಕ ಆತಂಕ ಪ್ರತಿಯೊಬ್ಬ ಮಹಿಳಾ ಕ್ರಿಕೆಟರ್‌ನಲ್ಲೂ ಇರುತ್ತದೆ. ಆಟದ ಮೇಲೆ ಗಮನ ಹರಿಸಬೇಕಾ ಅಥವಾ ಜರ್ಸಿ ಕಡೆಯೋ ಎಂಬ ಗೊಂದಲ ಸೃಷ್ಟಿಯಾಗುತ್ತದೆ. ಆದರೆ ವೃತ್ತಿಪರ ಆಟಗಾರರಾಗಿ ಇವೆಲ್ಲವನ್ನೂ ಸಹಿಸಿಕೊಂಡು ಆಡುವುದು ಅನಿವಾರ್ಯವಾಗಿರುತ್ತದೆ,' ಎಂದು ಹೇಳಿದ್ದಾರೆ.

'ಉತ್ತಮ ಪ್ರದರ್ಶನವಷ್ಟೇ ಮುಖ್ಯವಾಗುತ್ತದೆ'

'ನಮಗೆ ಮುಟ್ಟಾಗಿದೆ ಎಂದು ನಾವು ಪಂದ್ಯಗಳನ್ನು ಆಡದೆ ಮನೆಯಲ್ಲಿ ಕೂರಲು ಸಾಧ್ಯವಿಲ್ಲ. ಹಾಗೆಯೇ ಪಂದ್ಯದಲ್ಲಿ ಸೋತಾಗ ಮುಟ್ಟಿನ ಕಾರಣದಿಂದಾಗಿ ಸರಿಯಾಗಿ ಆಡಲು ಸಾಧ್ಯವಾಗಲಿಲ್ಲ ಎಂದು ನೆಪಗಳನ್ನು ಹೇಳಲು ಸಾಧ್ಯವಿಲ್ಲ. ಏಕೆಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವಾಗ ಕೇವಲ ಉತ್ತಮ ಪ್ರದರ್ಶನ ಮಾತ್ರ ಮುಖ್ಯವಾಗುತ್ತದೆ,' ಎಂದು ತಿಳಿಸಿದ್ದಾರೆ.

ತಮ್ಮ ಅನುಭವ ಹಂಚಿಕೊಂಡ ಸ್ಮೃತಿ

'ಟೆಸ್ಟ್ ಕ್ರಿಕೆಟ್ ಆಡುವಾಗ ಒಮ್ಮೆ ನಾನು ಪ್ಯಾಡ್ ಬದಲಾಯಿಸಲು ಓಡಬೇಕಾಯಿತು. ನಾನು ಬಿಳಿ ಜರ್ಸಿ ಧರಿಸಿದ್ದರಿಂದ ಅಂಪೈರ್‌ಗೆ ನನಗೆ ಅನುಮತಿ ನೀಡುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಅವರು ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡರು. ಪ್ರಸ್ತುತ ದಿನಗಳಲ್ಲಿ ಮುಟ್ಟಿನ ವಿಷಯದಲ್ಲಿ ಟೀಮ್ ಮ್ಯಾನೇಜ್‌ಮೆಂಟ್ ಮತ್ತು ಫಿಸಿಯೋಗಳು ತುಂಬಾ ಕಾಳಜಿ ವಹಿಸುತ್ತಿದ್ದಾರೆ. ಮುಟ್ಟಿನ ನೋವನ್ನು ತಡೆದುಕೊಳ್ಳಲು ಸೂಕ್ತವಾದ ಆಹಾರ, ಎನರ್ಜಿ ಡ್ರಿಂಕ್ಸ್ ಮತ್ತು ವೈದ್ಯಕೀಯ ನೆರವು ಲಭ್ಯವಿರುತ್ತದೆ,' ಎಂದು ಸ್ಮೃತಿ ಮಂದಾನ ಹೇಳಿದ್ದಾರೆ.

ಐಸಿಸಿ ನಿಯಮ ಹೇಳೋದೇನು?

ಅತಿಯಾದ ರಕ್ತಸ್ರಾವ ಅಥವಾ ನೋವಿನ ಕಾರಣದಿಂದಾಗಿ ಆಟಗಾರ್ತಿಗೆ ಮೈದಾನದಲ್ಲಿ ಆಟ ಮುಂದುವರೆಸಲು ಸಾಧ್ಯವಾಗದಿದ್ದರೆ, ಐಸಿಸಿ ನಿಯಮಗಳ ಪ್ರಕಾರ ಅಂಪೈರ್‌ಗಳ ಅನುಮತಿ ಪಡೆದು ತಾತ್ಕಾಲಿಕವಾಗಿ ಮೈದಾನದಿಂದ ಹೊರಹೋಗಲು ಅವಕಾಶ ಇರುತ್ತದೆ. ಆ ಸಮಯದಲ್ಲಿ ಅವರ ಬದಲಿಗೆ ಪರ್ಯಾಯ ಫೀಲ್ಡರ್ ಕಣಕ್ಕಿಳಿಸಲಾಗುತ್ತದೆ.

'ಒಂದು ಕಾಲದಲ್ಲಿ ಮಹಿಳಾ ಕ್ರೀಡಾಪಟುಗಳ ಮುಟ್ಟಿನ ದಿನಗಳ ಬಗ್ಗೆ ಮಾತನಾಡುವುದು ಮುಜುಗರ ಎಂಬ ಮನೋಭಾವದಿಂದ ನೋವನುಭವಿಸಿ ಸುಮ್ಮನಾಗಿಬಿಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಈ ವಿಷಯದ ಬಗ್ಗೆ ಕ್ರೀಡಾ ವಲಯದಲ್ಲಿ ಮುಕ್ತವಾಗಿ ಚರ್ಚೆಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ.' ಎಂದು ಸ್ಮೃತಿ ಮಂಧಾನ ಅವರು ಹೇಳಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2026ರ ಗ್ರೂಪ್‌ 'ಎ' ನಲ್ಲಿರುವ ಭಾರತ ತಂಡವು ಜೂನ್ 14ರಂದು ಪಾಕಿಸ್ತಾನದ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಬಳಿಕ ಜೂನ್ 17ರಂದು ನೆದರ್ಲ್ಯಾಂಡ್‌, ಜೂನ್ 21ರಂದು ದಕ್ಷಿಣ ಆಫ್ರಿಕಾ, ಜೂನ್ 25ರಂದು ಬಾಂಗ್ಲಾದೇಶ ಮತ್ತು ಜೂನ್ 28ರಂದು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ಒಟ್ಟಿನಲ್ಲಿ ಮೈದಾನದಲ್ಲಿ ಕಾಣಿಸುವ ಗ್ಲಾಮರ್ ಮತ್ತು ಯಶಸ್ಸಿನ ಹಿಂದೆ ಮಹಿಳಾ ಕ್ರೀಡಾಪಟುಗಳ ಇಂತಹ ಹತ್ತಾರು ಹೋರಾಟಗಳು ಮತ್ತು ತ್ಯಾಗಗಳು ಅಡಗಿರುತ್ತವೆ. ಕೇವಲ ದೈಹಿಕ ಸಾಮರ್ಥ್ಯ ಅಷ್ಟೇ ಅಲ್ಲದೆ ಪ್ರಕೃತಿ ಸಹಜವಾದ ಇಂತಹ ಸವಾಲುಗಳನ್ನು ಮೀರಿ ನಿಲ್ಲುವ ಮಾನಸಿಕ ಶಕ್ತಿ ಕೂಡ ಮಹಿಳಾ ಕ್ರಿಕೆಟಿಗರಿಗೆ ಅತ್ಯಂತ ಅನಿವಾರ್ಯ ಎಂಬುದನ್ನು ಸ್ಮೃತಿ ಮಂಧಾನ ಅವರ ಮಾತುಗಳು ಅರ್ಥವಾಗಿದೆ. ಒಟ್ಟಿನಲ್ಲಿ ಮಂಧಾನ ಅವರು, ಮಹಿಳಾ ಕ್ರಿಡಾಪಟುಗಳು ಮೈದಾನದಲ್ಲಿ ಎಂತಹ ಕಠಿಣ ಸವಾಲುಗಳನ್ನ ಎದುರಿಸಬೇಕಾಗುತ್ತದೆ ಎಂದು ವಿವರಿಸಿ ಗಮನ ಸೆಳೆದಿದ್ದಾರೆ. ಜೊತೆಗೆ ಈಗಿನ ಈಗಿನ ತಂತ್ರಜ್ಞಾನ ಮತ್ತು ವೈದ್ಯಕೀಯ ಸೌಲಭ್ಯಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+