• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುನಂದಾ ಸಾವು ಪ್ರಕರಣ: ಆರೋಪವನ್ನು ಕೈಬಿಡಲು ಶಶಿ ತರೂರ್ ಮನವಿ

|

ನವದೆಹಲಿ, ಮಾರ್ಚ್ 24: ಸುನಂದಾ ಪುಷ್ಕರ್ ಅವರ ಸಾವು ಆತ್ಮಹತ್ಯೆಯೂ ಅಲ್ಲ, ಹತ್ಯೆಯೂ ಅಲ್ಲ ಎಂದು ಪುರಾವೆಗಳು ಖಚಿತಪಡಿಸಿವೆ. ಹಾಗಾಗಿ ತಮ್ಮ ವಿರುದ್ಧವಿರುವ ಆರೋಪ ಕೈಬಿಡುವಂತೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಮನವಿ ಮಾಡಿದ್ದಾರೆ.

ಮರಣೋತ್ತರ ಪರೀಕ್ಷೆಯಲ್ಲಿ ಸುನಂದಾ ಪುಷ್ಕರ್ ಅವರ ಸಾವು ಆತ್ಮಹತ್ಯೆಯೂ ಅಲ್ಲ, ಕೊಲೆಯೂ ಅಲ್ಲ ಎಂದು ತಿಳಿದುಬಂದಿದೆ ಎಂದು ತರೂರ್ ಪರ ವಕೀಲ ಪಹ್ವಾ ವಾದಿಸಿದ್ದಾರೆ. ತರೂರ್ ವಿರುದ್ಧ ಐಪಿಸಿ ಸೆಕ್ಷನ್ 498ಎ ಹಾಗೂ ಐಪಿಸಿ 306 ಸಾಬೀತಾಗಲು ಯಾವುದೇ ಸಾಕ್ಷಿಗಳಿಲ್ಲ. ಸುನಂದಾ ಸಾವನ್ನು ಆಕಸ್ಮಿಕವೆಂದು ಪರಿಗಣಿಸಬೇಕು ಎಂದು ವಕೀಲರು ಹೇಳಿದ್ದಾರೆ.

ಶಶಿ ತರೂರ್, ಆರು ಪತ್ರಕರ್ತರ ವಿರುದ್ಧ ದೇಶದ್ರೋಹ ಪ್ರಕರಣ

2014ರ ಜನವರಿ 17 ರಂದು ಸುನಂದಾ ಪುಷ್ಕರ್ ದೆಹಲಿಯ ಐಷಾರಾಮಿ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಶಶಿ ತರೂರ್ ಅವರ ಅಧಿಕೃತ ಬಂಗಲೆ ನವೀಕರಣ ನಡೆಯುತ್ತಿದ್ದುದರಿಂದ ದಂಪತಿ ಹೋಟೆಲ್‌ನಲ್ಲಿ ತಂಗಿದ್ದರು.

ವಿಚಾರಣೆಯನ್ನು ಮಾರ್ಚ್ 26 ರಿಂದ ನ್ಯಾಯಾಲಯ ಪುನರಾರಂಭಿಸಲಿದೆ. ಈ ಪ್ರಕರಣದ ತನಿಖಾಧಿಕಾರಿ ಮುಂದೆ ತಜ್ಞರು ಸಾಕಷ್ಟು ವರದಿಗಳನ್ನು ಸಲ್ಲಿಸಿದ್ದಾರೆ. ಆದರೆ ಸಾವಿಗೆ ಕಾರಣವೇನೆಂದು ಯಾವುದೇ ನಿರ್ದಿಷ್ಟ ಅಭಿಪ್ರಾಯವನ್ನು ತಜ್ಞರು ನೀಡಿಲ್ಲ ಎಂದಿದ್ದಾರೆ.

ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಶಶಿ ತರೂರ್ ಅವರಿಗೆ 2018ರ ಜುಲೈ 5 ರಂದು ಜಾಮೀನು ಸಿಕ್ಕಿತ್ತು.

English summary
Congress leader Shashi Tharoor claimed before a Delhi court on Tuesday that evidence showed the death of his wife Sunanda Pushkar was neither a suicide nor homicide and sought discharge in the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X