ನಟಿ ಸುಶ್ಮಿತಾ ಸೇನ್, ಮೋದಿ ಸಂಬಂಧ: ತಸ್ಲಿಮಾ ನಸ್ರೀನ್ ಪ್ರಶ್ನೆಏನು?
ನವದೆಹಲಿ, ಜುಲೈ 17: ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಮತ್ತು ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಸುಶ್ಮಿತಾ ಸೇನ್ ನಡುವಿನ ಸಂಬಂಧ ಭಾರೀ ಚರ್ಚೆಗೆ ಕಾರಣವಾಗಿದೆ. ಇಬ್ಬರು ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಆದರೂ ಸಾಮಾಜಿಕ ಜಾಲತಾಣ ಮಾತ್ರವಲ್ಲದೇ ಹಲವು ನಟ, ನಟಿಯರು, ಲೇಖಕರೂ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಈಗ ಬಾಂಗ್ಲಾ ಲೇಖಕಿ ತಸ್ಲಿಮಾ ನಸ್ರೀನ್ ಇಬ್ಬರ ಸಂಬಂಧದ ಕುರಿತು ಹಲವು ಪ್ರಶ್ನೆ ಎತ್ತಿದ್ದಾರೆ.
ತಮ್ಮ ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಲೇಖಕಿ ತಸ್ಲಿಮಾ ನಸ್ರೀನ್, ಸುಶ್ಮಿತಾ ಸೇನ್‌ರನ್ನು ಭೇಟಿಯಾದಾಗಿನ ಅನುಭವಗಳನ್ನು ಹಂಚಿಕೊಂಡು, ಲಲಿತ್ ಮೋದಿಯೊಂದಿಗಿನ ಸಂಬಂಧದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಉದ್ಯಮಿ ಲಲಿತ್ ಮೋದಿ ಜುಲೈ 14, ಗುರುವಾರದಂದು ಮಾಜಿ ವಿಶ್ವ ಸುಂದರಿ, ನಟಿ ಸುಶ್ಮಿತಾ ಸೇನ್ ಅವರೊಂದಿಗಿನ ತಮ್ಮ ಸಂಬಂಧದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಹಾಕಿ ಘೋಷಿಸಿದ್ದರು.

ಈ ಜೋಡಿ ಮಾಲ್ಡೀವ್ಸ್ ಮತ್ತು ಸಾರ್ಡಿನಿಯಾದಲ್ಲಿನ ಪ್ರವಾಸದ ಚಿತ್ರಗಳನ್ನು ಹಂಚಿಕೊಂಡಿದ್ದರು. ತಕ್ಷಣ ಸಾಮಾಜಿಕ ಮಾಧ್ಯಮಗಳಲ್ಲಿ ಇದು ವೈರಲ್ ಆಗಿತ್ತು. ಇನ್ನು ಇಬ್ಬರ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಬಿಸಿ-ಬಿಸಿ ಚರ್ಚೆಯ ವಿಷಯವಾಗಿಯೇ ಇದೆ.
ತಸ್ಲೀಮಾ ನಸ್ರೀನ್ ಹೇಳಿದ್ದೇನು?: ಜುಲೈ 16ರ ಶನಿವಾರದಂದು ತನ್ನ ಫೇಸ್‌ಬುಕ್ ಖಾತೆಯಲ್ಲಿ ತಸ್ಲೀಮಾ ಅವರು ಬಂಗಾಳಿ ಭಾಷೆಯಲ್ಲಿ ಹೀಗೆ ಬರೆದಿದ್ದಾರೆ, "ನಾನು ಸುಶ್ಮಿತಾ ಸೇನ್ ಅವರನ್ನು ಒಂದೇ ಒಂದು ಬಾರಿ ಭೇಟಿಯಾಗಿದೆ. ಅವರು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಭೇಟಿಯಾದರು. ಅವರು ನನ್ನನ್ನು ತಬ್ಬಿಕೊಂಡು ಐ ಲವ್ ಯೂ ಎಂದು ಹೇಳಿದ್ದರು. ಅವರ ಮೋಹಕ ಸೌಂದರ್ಯದಿಂದ ನನ್ನ ಕಣ್ಣುಗಳನ್ನು ಸುಲಭವಾಗಿ ತೆಗೆಯಲಾಗಲಿಲ್ಲ" ಎಂದಿದ್ದಾರೆ.
ಮುಂದುವರದು, "ನಾನು ಸುಶ್ಮಿತಾ ಸೇನ್ ಅವರ ವ್ಯಕ್ತಿತ್ವವನ್ನು ಹೆಚ್ಚು ಇಷ್ಟಪಟ್ಟೆ. ಚಿಕ್ಕ ವಯಸ್ಸಿನಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದರು. ಅವರ ಪ್ರಾಮಾಣಿಕತೆ, ಧೈರ್ಯ, ಅರಿವು, ಸ್ವಾವಲಂಬನೆ, ಅವರ ದೃಢತೆ ಇಷ್ಟವಾಯಿತು" ಎಂದು ಹೊಗಳಿದ್ದಾರೆ.

ಬಳಿಕ ಅವರ ಈಗಿನ ನಿರ್ಧಾರವನ್ನು ಪ್ರಶ್ನಿಸುತ್ತಾ, "ಆದರೆ ಸುಶ್ಮಿತಾ ಈಗ, ವಿವಿಧ ಅಪರಾಧಗಳಲ್ಲಿ ತೊಡಗಿರುವ ಅತ್ಯಂತ ಕೆಟ್ಟ ವ್ಯಕ್ತಿಯೊಂದಿಗೆ ಸಮಯ ಕಳೆಯುತ್ತಿದ್ದಾರೆ. ಏಕೆಂದರೆ ಆ ವ್ಯಕ್ತಿ ತುಂಬಾ ಶ್ರೀಮಂತ.? ಹಾಗಾದರೆ ಆಕೆ ಹಣಕ್ಕೆ ಮಾರುಹೋದಳೇ? ಬಹುಶಃ ಅವಳು ಆ ವ್ಯಕ್ತಿಯನ್ನು ಪ್ರೀತಿಸುತ್ತಿರಬಹುದು. ಆದರೆ ಅವಳು ಪ್ರೀತಿಸುತ್ತಿದ್ದಾಳೆಂದು ನಂಬಲು ಸಾಧ್ಯವಿಲ್ಲ. ಹಣದ ಮೋಹದಲ್ಲಿ ಬೀಳುವವರ ಬಗ್ಗೆ ನಾನು ಬೇಗನೆ ಗೌರವವನ್ನು ಕಳೆದುಕೊಳ್ಳುತ್ತೇನೆ" ಎಂದಿದ್ದಾರೆ.
ಇನ್ನು, ಲಲಿತ್ ಮೋದಿ ತಮ್ಮ ಸಂಬಂಧವನ್ನು ಘೋಷಿಸಿದ ಒಂದು ದಿನದ ನಂತರ, ಜುಲೈ 15ರ ಶುಕ್ರವಾರದಂದು ಸುಶ್ಮಿತಾ ಕೂಡ ತಮ್ಮ ಮೌನವನ್ನು ಮುರಿದಿದ್ದರು. ತನ್ನ ಇಬ್ಬರು ಪುತ್ರಿಯರಾದ ರೆನೀ ಮತ್ತು ಅಲಿಸಾ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದ ಅವರು, "ನಾನು ಸಂತೋಷದ ಸ್ಥಳದಲ್ಲಿದ್ದೇನೆ.
ಮದುವೆಯಾಗಿಲ್ಲ...ಉಂಗುರಗಳು ಇಲ್ಲ...ಆದರೆ, ಬೇಷರತ್ತಾಗಿ ಪ್ರೀತಿಯಿಂದ ಸುತ್ತುವರೆದಿದ್ದೇನೆ! ಸ್ಪಷ್ಟೀಕರಣಗಳು ಸಾಕು. ಕೆಲಸಕ್ಕೆ ಹಿಂತಿರುಗಿ! ನನ್ನ ಸಂತೋಷವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಹಂಚಿಕೊಳ್ಳದಿದ್ದರೂ ಒಕೆ...ನಾವು ನಿಮ್ಮನ್ನು ಪ್ರೀತಿಸುತ್ತೇನೆ " ಎಂದಿದ್ದರು.
-
Tejasvi Surya: ಕೆಎಸ್ಸಿಎನಿಂದ ಐಪಿಎಲ್ ಫ್ರೀ ಟಿಕೆಟ್ ಚರ್ಚೆ: ಕಾಂಗ್ರೆಸ್ ಶಾಸಕರಿಗೆ ಸಂಸದ ತೇಜಸ್ವಿ ಸೂರ್ಯ ಕ್ಲಾಸ್ -
ದಾವಣಗೆರೆ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಬೆಂಬಲಕ್ಕೆ ನಿರ್ಧಾರ -
SSLC Hindi Exam: ಮಾರ್ಚ್ 30ರ ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆಗೆ ಹೊಸ ಸಮಸ್ಯೆ: ಪರೀಕ್ಷಾ ಮಂಡಳಿ ಹೇಳಿದ್ದೇನು -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ









Click it and Unblock the Notifications