ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್‌ ವೇಳೆ ಪೂರ್ತಿ ವೇತನ: ಮಾಲೀಕರ ವಿರುದ್ಧ ಕ್ರಮ ಇಲ್ಲ- ಸುಪ್ರೀಂಕೋರ್ಟ್

|
Google Oneindia Kannada News

ದೆಹಲಿ, ಜೂನ್ 12: ಕೊರೊನಾ ವೈರಸ್ ಲಾಕ್‌ಡೌನ್‌ ಅವಧಿಯಲ್ಲಿ ಕಾರ್ಮಿಕರಿಗೆ ಪೂರ್ತಿ ವೇತನ ನೀಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ''ಜುಲೈ ಅಂತ್ಯದೊಳಗೆ ವಿಸ್ತೃತ ವರದಿ ಸಲ್ಲಿಸಲು'' ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.

ಈ ವಿಚಾರವಾಗಿ ಅರ್ಜಿ ವಿಚಾರಿಣೆ ಮಾಡಿದ್ದ ನ್ಯಾಯಮೂರ್ತಿ ಅಶೋಕ್ ಭುಷಣ್, ಸಂಜಯ್ ಕಿಶನ್ ಕೌಲ್, ಎಂ ಆರ್ ಶಾ ಅವರ ತ್ರಿ ಸದಸ್ಯ ಪೀಠ, ಉದ್ಯೋಗದಾತರ ವಿರುದ್ಧ ಕ್ರಮ ಕೈಗೊಳ್ಳದಂತೆ ನಿರ್ದೇಶನ ನೀಡಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಪೂರ್ತಿ ಸಂಬಳ ವಿಚಾರ: ಇಂದು ಸುಪ್ರೀಂ ತೀರ್ಪುಲಾಕ್‌ಡೌನ್‌ ಅವಧಿಯಲ್ಲಿ ಪೂರ್ತಿ ಸಂಬಳ ವಿಚಾರ: ಇಂದು ಸುಪ್ರೀಂ ತೀರ್ಪು

''ಉದ್ಯೋಗದಾತರ ವಿರುದ್ಧ ಬಲವಂತವಾಗಿ ಕ್ರಮ ಕೈಗೊಳ್ಳುವಂತಿಲ್ಲ. ಈ ಹಿಂದಿನ ನಿರ್ದೇಶನ ಮುಂದುವರಿಯಲಿದೆ. ಜುಲೈ ಅಂತ್ಯದೊಳಗೆ ಈ ವಿಚಾರವಾಗಿ ಕೇಂದ್ರ ಸರ್ಕಾರ ವಿಸ್ತೃತ ವರದಿ ಸಲ್ಲಿಸಬೇಕು. ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಗಳು ಕಂಪನಿ ಮತ್ತು ಕಾರ್ಮಿಕರ ನಡುವಿನ ಮಾತುಕತೆಗೆ ಅವಕಾಶ ಮಾಡಿಕೊಡಬೇಕು'' ಎಂದು ನ್ಯಾಯಾಲಯ ತಿಳಿಸಿದೆ.

Supreme Court Verdict on MHAs Order to Pay Full Salary to Staff During Lockdown

ಕೊರೊನಾ ವೈರಸ್ ಭೀತಿ ಹಿನ್ನೆಲೆ ಸುಧೀರ್ಘವಾಗಿ ಕಂಪನಿಗಳು ಮುಚ್ಚಿದ್ದವು. ಈ ಅವಧಿಯಲ್ಲಿ ಕಾರ್ಮಿಕರಿಗೆ ಪೂರ್ಣ ಪ್ರಮಾಣದ ವೇತನ ನೀಡಬೇಕು ಎಂದು ಕೇಂದ್ರ ಗೃಹ ಇಲಾಖೆ ಆದೇಶ ಮಾಡಿತ್ತು.

ಕೇಂದ್ರದ ಈ ನಿರ್ಧಾರವನ್ನು ಪ್ರಶ್ನಿಸಿ ಹಲವು ಖಾಸಗಿ ಕಂಪನಿಗಳು ಕೋರ್ಟ್ ಮೊರೆ ಹೋಗಿದ್ದರು. ಜೂನ್ ರಂದು ಅರ್ಜಿ ವಿಚಾರಣೆ ಮಾಡಿದ್ದ ಕೋರ್ಟ್ ''ಉದ್ಯೋಗಿಗಳು ಮತ್ತು ಮಾಲೀಕರ ನಡುವೆ ಮಾತುಕತೆ ನಡೆಯಬೇಕಿದೆ'' ಎಂದು ಹೇಳಿತ್ತು.

English summary
Supreme Court says no coercive action be taken against private firms, which have failed to pay full wages during lockdown period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X