ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂತನ ಸಂಸತ್ ಭವನ ಕಟ್ಟಡ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ

|
Google Oneindia Kannada News

ನವದೆಹಲಿ, ಡಿಸೆಂಬರ್ 7: ರಾಜಧಾನಿ ದೆಹಲಿಯಲ್ಲಿನ ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್‌ನ ಮರು ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ವಿಚಾರದ ಬಗ್ಗೆ ಸುಪ್ರೀಂಕೋರ್ಟ್ ಇನ್ನೂ ತೀರ್ಪು ನೀಡುವ ಮುನ್ನವೇ ಕೇಂದ್ರ ಸರ್ಕಾರ ಯೋಜನೆ ಮುಂದುರಿಸುತ್ತಿರುವ ವರದಿಗಳ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಆದರೆ ಈ ಯೋಜನೆಗೆ ಡಿಸೆಂಬರ್ 10ರಂದು ನಡೆಯಬೇಕಿರುವ ಶಂಕು ಸ್ಥಾಪನೆಗೆ ನ್ಯಾಯಾಲಯ ಅನುಮತಿ ನೀಡಿದೆ.

ಕೇಂದ್ರ ದೆಹಲಿಯಲ್ಲಿ ಸೆಂಟ್ರಲ್ ವಿಸ್ಟಾ ಯೋಜನೆಯ ನಿರ್ಮಾಣ ಕಾಮಗಾರಿಗಳು ನಡೆಯದಂತೆ ಸ್ಪಷ್ಟ ಸೂಚನೆಗಳನ್ನು ತೆಗೆದುಕೊಳ್ಳುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ಹೊಸ ಸಂಸತ್ ಭವನಕ್ಕೆ ಡಿ.10ರಂದು ಶಂಕುಸ್ಥಾಪನೆ: ಕಟ್ಟಡದ ವಿಶೇಷತೆಯೇನು?ಹೊಸ ಸಂಸತ್ ಭವನಕ್ಕೆ ಡಿ.10ರಂದು ಶಂಕುಸ್ಥಾಪನೆ: ಕಟ್ಟಡದ ವಿಶೇಷತೆಯೇನು?

ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್ ನಿರ್ಮಾಣಗಳ ಕುರಿತಾಗಿ ಸರ್ಕಾರ ತನ್ನ ಅಭಿಪ್ರಾಯ ತಿಳಿಸುವಂತೆ ಸುಪ್ರೀಂಕೋರ್ಟ್ ವಿಚಾರಣೆ ವೇಳೆ ಕೇಂದ್ರಕ್ಕೆ ಕೇವಲ ಐದು ನಿಮಿಷಗಳ ಕಾಲಾವಕಾಶ ನೀಡಿತು. ಸೆಂಟ್ರಲ್ ವಿಸ್ಟಾ ಯೋಜನೆಯ ನಿರ್ಮಾಣ ಕಾಮಗಾರಿಗಳನ್ನು ನಡೆಸಲು ಕೇಂದ್ರ ಸರ್ಕಾರ ಮುಂದಾಗಿರುವುದಕ್ಕೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಸರ್ಕಾರ ಬೇಕಾದರೆ ಶಂಕುಸ್ಥಾಪನೆ ನಡೆಸಬಹುದು. ಆದರೆ ಕಾಮಗಾರಿ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಸೂಚಿಸಿತು.

ಸೆಂಟ್ರಲ್ ವಿಸ್ಟಾ ಯೋಜನೆಯ ಅಡಿಗಲ್ಲು ಸಮಾರಂಭ ನಡೆಸಲು ಅಡ್ಡಿಯಿಲ್ಲ. ಆದರೆ ಅಲ್ಲಿ ಯಾವುದೇ ನಿರ್ಮಾಣ ಕಾಮಗಾರಿ, ತೆರವು ಕಾರ್ಯಾಚರಣೆ ಅಥವಾ ಮರಗಳ ಕಟಾವಿನಂತಹ ಕಾರ್ಯಗಳು ನಡೆಯುವಂತಿಲ್ಲ ಎಂದು ಹೇಳಿತು. ಮುಂದೆ ಓದಿ.

ಡಿ. 10ರಂದು ಮೋದಿ ಶಂಕುಸ್ಥಾಪನೆ

ಡಿ. 10ರಂದು ಮೋದಿ ಶಂಕುಸ್ಥಾಪನೆ

ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್‌ನ ಭಾಗವಾಗಿ ನೂತನ ಸಂಸತ್ ಭವನದ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 10ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಭವನ ನಿರ್ಮಾಣ ಕಾಮಗಾರಿಯು 971 ಕೋಟಿ ವೆಚ್ಚದ್ದಾಗಿದ್ದು, 2022ಕ್ಕೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಹಳೆಯ ಸಂಸತ್ ಭವನವನ್ನು ದೇಶದ ಪ್ರಾಚ್ಯವಸ್ತು ಸಂಪತ್ತಾಗಿ ಉಳಿಸಿಕೊಳ್ಳುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

ರಾಷ್ಟ್ರಪತಿ ಭವನ ಟು ಇಂಡಿಯಾ ಗೇಟ್

ರಾಷ್ಟ್ರಪತಿ ಭವನ ಟು ಇಂಡಿಯಾ ಗೇಟ್

ಸೆಂಟ್ರಲ್ ವಿಸ್ಟಾ ಯೋಜನೆಯು ಒಟ್ಟು ಸುಮಾರು 20,000 ಕೋಟಿ ರೂ ವೆಚ್ಚದ್ದಾಗಿದೆ. ಇದರಲ್ಲಿ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ ಮೂರು ಕಿಮೀ ಉದ್ದಕ್ಕೂ ಇರುವ ಸರ್ಕಾರಿ ಕಟ್ಟಡಗಳನ್ನು ನವೀಕರಿಸುವುದು ಮತ್ತು ಹೊಸದಾಗಿ ನಿರ್ಮಾಣ ಕಾರ್ಯ ನಡೆಸುವುದು ಒಳಗೊಂಡಿದೆ. ಸುಮಾರು 20.22 ಎಕರೆ ಪ್ರದೇಶದಲ್ಲಿ ಈ ಕಾಮಗಾರಿಗಳು ನಡೆಯಲಿವೆ.

861.9 ಕೋಟಿ ರೂ ವೆಚ್ಚದಲ್ಲಿ ಹೊಸ ಸಂಸತ್ ಭವನ: ಬಿಡ್ ಗೆದ್ದ ಟಾಟಾ ಸಮೂಹ861.9 ಕೋಟಿ ರೂ ವೆಚ್ಚದಲ್ಲಿ ಹೊಸ ಸಂಸತ್ ಭವನ: ಬಿಡ್ ಗೆದ್ದ ಟಾಟಾ ಸಮೂಹ

ಬೊಕ್ಕಸಕ್ಕೆ ಭಾರಿ ಉಳಿತಾಯ

ಬೊಕ್ಕಸಕ್ಕೆ ಭಾರಿ ಉಳಿತಾಯ

ಎಲ್ಲ 51 ಸಚಿವಾಲಯಗಳಿಗೂ 10 ಕಟ್ಟಡಗಳಲ್ಲಿ ಸಾಮಾನ್ಯ ಕಾರ್ಯಾಲಯ ನಿವಾಸಗಳನ್ನು ಈ ಯೋಜನೆ ನಿರ್ಮಿಸಲಿದೆ. ಇದು ಕೇಂದ್ರ ಲೋಕೋಪಯೋಗಿ ಇಲಾಖೆಗೆ ವಾರ್ಷಿಕ 1,000 ಕೋಟಿ ರೂ.ಗಳನ್ನು ಉಳಿತಾಯ ಮಾಡಲಿದೆ ಎಂದು ಇಲಾಖೆಯು ಸುಪ್ರೀಂಕೋರ್ಟ್‌ಗೆ ಜುಲೈನಲ್ಲಿ ಮಾಹಿತಿ ನೀಡಿತ್ತು.

ಸಂಸತ್ ಭವನದ ವಿಶೇಷತೆ

ಸಂಸತ್ ಭವನದ ವಿಶೇಷತೆ

ಈ ಯೋಜನೆಯಡಿ ನಿರ್ಮಾಣವಾಗುತ್ತಿರುವ ತ್ರಿಕೋನಾಕಾರದ ಹೊಸ ಸಂಸತ್ ಕಟ್ಟಡವು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲಿಯೂ 1,224 ಸದಸ್ಯರು ಕೂರಲು ಅವಕಾಶ ನೀಡಲಿದೆ. ಜತೆಗೆ ಎಲ್ಲ ಸಚಿವಾಲಯಗಳಿಗೂ ಆಡಳಿತ ಕಟ್ಟಡಗಳನ್ನು ಇದು ಒಳಗೊಳ್ಳಲಿದೆ. 861.90 ಕೋಟಿ ರೂ ವೆಚ್ಚದಲ್ಲಿ ಸಂಸತ್ ಭವನದ ಕಾಮಗಾರಿ ನಡೆಯಲಿದೆ. ಇದು ಭೂಕಂಪ ನಿರೋಧಕವಾಗಿರಲಿದೆ ಎಂದು ಹೇಳಲಾಗಿದೆ.

English summary
The Supreme Court on Monday Slams Centre for going ahead with Central Vista Project even the issue is in the court and halts all construction works.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X