ಪಿ.ಚಿದಂಬರಂ ಜಾಮೀನು ಅರ್ಜಿ: ಸೆಪ್ಟೆಂಬರ್ 5 ಕ್ಕೆ ಸುಪ್ರೀಂ ಆದೇಶ

ನವದೆಹಲಿ, ಆಗಸ್ಟ್ 29: ಸಿಬಿಐ ವಶದಲ್ಲಿರುವ ಪಿ.ಚಿದಂಬರಂ ಅವರು ಸುಪ್ರೀಂಕೋರ್ಟ್‌ನಲ್ಲಿ ಹೂಡಿದ್ದ ಅರ್ಜಿಯ ಆದೇಶವನ್ನು ಸೆಪ್ಟೆಂಬರ್ 5 ರಂದು ನೀಡುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.

ನಿರೀಕ್ಷಣಾ ಜಾಮೀನನ್ನು ರದ್ದು ಮಾಡಿದ ದೆಹಲಿ ಹೈಕೋರ್ಟ್‌ ನ ಕ್ರಮವನ್ನು ಪ್ರಶ್ನಿಸಿ ಚಿದಂಬರಂ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಹೂಡಿದ್ದರು. ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಆದೇಶವನ್ನು ಸೆಪ್ಟೆಂಬರ್ ಐದರಂದು ನೀಡುವುದಾಗಿ ಹೇಳಿದೆ.

ಚಿದಂಬರಂ ಅವರು ಐಎನ್‌ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಶದಲ್ಲಿದ್ದಾರೆ. ಆದರೆ ಇಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ನಿರೀಕ್ಷಣಾ ಜಾಮೀನನ್ನು ರದ್ದು ಮಾಡಲಾಗಿತ್ತು. ಅದನ್ನು ಪ್ರಶ್ನಿಸಿ ಚಿದಂಬರಂ ಅವರು ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದರು.

Supreme Court Reserves Judgement For September 05 In P Chidambaram Case

ಆಗಸ್ಟ್‌ 30 ರ ವರೆಗೂ ಪಿ.ಚಿದಂಬರಂ ಅವರನ್ನು ಸಿಬಿಐಗೆ ವಶಕ್ಕೆ ನೀಡಿ ಸುಪ್ರೀಕೋರ್ಟ್ ಆಗಸ್ಟ್ 26 ರಂದು ಆದೇಶ ನೀಡಿತ್ತು. ನಾಳೆಗೆ ಅವಧಿಗೆ ಮುಕ್ತಾಯವಾಗಲಿದ್ದು, ಅವಧಿ ಮುಂದುವರೆಸಲು ಸಿಬಿಐ ಮನವಿ ಸಲ್ಲಿಸುವ ಸಾಧ್ಯತೆ ಇದೆ.

ಐಎನ್‌ಎಕ್ಸ್ ಮೀಡಿಯಾ ಪ್ರಕರಣದ ವಿಚಾರಣೆಗೆಂದು ಪಿ.ಚಿದಂಬರಂ ಅವರನ್ನು ಆಗಸ್ಟ್‌ 21ರಂದು ಸಿಬಿಐ ತನ್ನ ವಶಕ್ಕೆ ತೆಗೆದುಕೊಂಡಿದೆ. ಪ್ರಸ್ತುತ ಅವರು ಸಿಬಿಐ ವಶದಲ್ಲಿಯೇ ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+