ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ನಿಂದ ಸತ್ತವರ ಕುಟುಂಬಗಳಿಗೆ ಪಾವತಿಸಿದ ಪರಿಹಾರದ ಡೇಟಾ ಕೇಳಿದ ಸುಪ್ರೀಂ ಕೋರ್ಟ್

|
Google Oneindia Kannada News

ನವದೆಹಲಿ, ನವೆಂಬರ್ 23: "ಕೋವಿಡ್-19 ಸಂತ್ರಸ್ತರ ಕುಟುಂಬಗಳಿಗೆ 50,000 ರೂ. ಪರಿಹಾರದ ವಿತರಣೆಯಲ್ಲಿ ಆಗಿರುವ ಪ್ರಗತಿಯ ಕುರಿತು ರಾಜ್ಯಗಳಿಂದ ಮಾಹಿತಿ ಸಂಗ್ರಹಿಸಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಅಧಿಸೂಚನೆಯನ್ನು ಹೊರಡಿಸಲು ಗುಜರಾತ್ ಸರ್ಕಾರದ ಉಲ್ಲೇಖಿಸಿ ಅದರ ವಿರುದ್ಧವಾಗಿ ಪರಿಶೀಲನಾ ಸಮಿತಿಯನ್ನು ರಚಿಸಬೇಕೆಂದು," ತಿಳಿಸಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಬಿ.ವಿ. ನಾಗರತ್ನ ಅವರಿದ್ದ ಪೀಠವು, ಎಷ್ಟು ಜನ ಹಣ ಪಡೆದಿದ್ದಾರೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರಿಂದ ಮಾಹಿತಿ ಕೇಳಿದೆ. ಎಲ್ಲಾ ರಾಜ್ಯಗಳಿಂದ ಡೇಟಾವನ್ನು ಸಂಗ್ರಹಿಸಬೇಕು ಮತ್ತು ಮೊದಲು ದೂರು ಪರಿಹಾರ ಸಮಿತಿಯನ್ನು ರಚಿಸಬೇಕು ಎಂದು ಹೇಳಿ, ನವೆಂಬರ್ 29ರಂದು ವಿಚಾರಣೆಯ ದಿನಾಂಕವನ್ನು ಮುಂದೂಡಿದೆ.

ಗುಜರಾತ್ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಕ್ಟೋಬರ್ 29ರಂದು 'ಕೋವಿಡ್- 19 ಸಾವು ನಿರ್ಣಯ ಸಮಿತಿ'ಯನ್ನು ರಚಿಸಿ ಹೊರಡಿಸಿದ ನಿರ್ಣಯವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪೀಠವು ವಿಚಾರಣೆ ನಡೆಸುತ್ತಿದೆ.

Supreme Court Heard Compensation Data Paid to Families of Deceased by Covid-19

ಆರಂಭದಲ್ಲಿ ಗುಜರಾತ್ ಸರ್ಕಾರದ ಪರವಾಗಿ ಹಾಜರಾದ ತುಷಾರ್ ಮೆಹ್ತಾ, ನವೆಂಬರ್ 18ರ ನ್ಯಾಯಾಲಯದ ನಿರ್ದೇಶನದ ಅಡಿಯಲ್ಲಿ ತಿದ್ದುಪಡಿ ಮಾಡಲಾದ ನಿರ್ಣಯವನ್ನು ಹೊರಡಿಸಲಾಗಿದೆ ಆದರೆ ಅದಕ್ಕೆ ಕೆಲವು ಮಾರ್ಪಾಡುಗಳ ಅಗತ್ಯವಿದೆ ಎಂದು ಹೇಳಿದರು.

ಮೊದಲ ಅಧಿಸೂಚನೆಯನ್ನು ಯಾರು ಹೊರಡಿಸಿದ್ದಾರೆ ಎಂದು ತಿಳಿಯಬೇಕಿದೆ ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸಬೇಕಾಗಿದೆ ಎಂದು ಪೀಠ ಹೇಳಿತು. ಇದಕ್ಕೆ ತುಷಾರ್ ಮೆಹ್ತಾ ತಾವು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧ ಎಂದು ಹೇಳಿದರು.

ಸಾಲಿಸಿಟರ್ ಜನರಲ್ ಏಕೆ ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಎಂ.ಆರ್. ಶಾ ಕೇಳಿದರು. ಅಧಿಸೂಚನೆಯನ್ನು ಕರಡು ಸಿದ್ಧಪಡಿಸಿರುವ ಸಂಬಂಧಪಟ್ಟ ಅಧಿಕಾರಿಯೇ ಹೊಣೆ ಹೊರಬೇಕು ಎಂದು ನ್ಯಾಯಾಧೀಶರು ಹೇಳಿದರು.

ಗುಜರಾತ್ ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಮನೋಜ್ ಅಗರ್ವಾಲ್ ವರ್ಚುವಲ್ ವಿಚಾರಣೆಗೆ ಸಂಪರ್ಕ ಹೊಂದಿದ್ದಾರೆ ಮತ್ತು ಅವರು ನ್ಯಾಯಾಲಯಕ್ಕೆ ಸಹಕಾರ ನೀಡಲಿದ್ದಾರೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

ಅಧಿಸೂಚನೆಯನ್ನು ಯಾರು ರಚಿಸಿದ್ದಾರೆ ಮತ್ತು ಯಾರ ಮೆದುಳಿನ ಕೂಸು ಎಂದು ಪೀಠವು ಐಎಎಸ್ ಅಧಿಕಾರಿ ಮನೋಜ್ ಅಗರ್ವಾಲ್‌ರನ್ನು ಕೇಳಿತು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ಮನೋಜ್ ಅಗರ್ವಾಲ್, ಕಡತವು ವಿವಿಧ ಇಲಾಖೆಗಳ ಮೂಲಕ ಹೋಗುತ್ತದೆ ಮತ್ತು ಅಂತಿಮವಾಗಿ ಸಕ್ಷಮ ಪ್ರಾಧಿಕಾರವು ಅನುಮೋದನೆ ನೀಡುತ್ತದೆ ಎಂದು ಹೇಳಿದರು. ಆಗ ಪೀಠವು ಈ ಪ್ರಕರಣದಲ್ಲಿ ಸಕ್ಷಮ ಪ್ರಾಧಿಕಾರ ಯಾವುದು ಎಂದು ಕೇಳಿದಾಗ, ಅದಕ್ಕೆ ಉತ್ತರಿಸಿದ ಅಗರ್ವಾಲ್ ಮುಖ್ಯಮಂತ್ರಿ ಎಂದು ಹೇಳಿದರು.

"ನಿಮ್ಮ ಮುಖ್ಯಮಂತ್ರಿಗೆ ಅನೇಕ ವಿಷಯಗಳು ತಿಳಿದಿಲ್ಲದಿರಬಹುದು? ಮಿಸ್ಟರ್ ಸೆಕ್ರೆಟರಿ, ನೀವು ಯಾವುದಕ್ಕಾಗಿ ಇದ್ದೀರಿ? ಇದು ನಿಮ್ಮ ಮನಸ್ಸಿನ ಅನ್ವಯವಾಗಿದ್ದರೆ, ನಿಮಗೆ ಏನೂ ತಿಳಿದಿಲ್ಲವೇ. ನಮ್ಮ ಆದೇಶವನ್ನು ನೀವು ಅರ್ಥಮಾಡಿಕೊಂಡಿದ್ದೀರಾ? ವಿಳಂಬ ಮಾಡುವ ಅಧಿಕಾರಶಾಹಿ ಪ್ರಯತ್ನದಂತೆ ತೋರುತ್ತಿದೆ ನಿಮ್ಮ ನಡಾವಳಿಗಳು,'' ಎಂದು ಸುಪ್ರೀಂ ಕೋರ್ಟ್ ಪೀಠವು ಪ್ರಶ್ನಿಸಿದೆ.

ನಕಲಿ ಕ್ಲೈಮ್‌ಗಳ ಬಗ್ಗೆ ನಿಜವಾದ ಕಾಳಜಿ ಇದೆ ಮತ್ತು ಅದಕ್ಕಾಗಿಯೇ ಕ್ಲೈಮ್‌ಗಳನ್ನು ಖಚಿತಪಡಿಸಿಕೊಳ್ಳಲು ಪರಿಶೀಲನಾ ಸಮಿತಿಯನ್ನು ರಚಿಸಲಾಗಿದೆ ಎಂದು ತುಷಾರ್ ಮೆಹ್ತಾ ಹೇಳಿದರು.

ಆಗ ಪೀಠವು, "ಈ ನ್ಯಾಯಾಲಯವು ಪರಿಶೀಲನಾ ಸಮಿತಿಯನ್ನು ಸ್ಥಾಪಿಸಲು ಎಂದಿಗೂ ಕೇಳಿಲ್ಲ, ನಿಜವಾದ ಸಂತ್ರಸ್ತರು ತಮ್ಮ ಹಕ್ಕುಗಳನ್ನು ಪಡೆಯಲು ಮತ್ತು ಪರಿಶೀಲನಾ ಸಮಿತಿಯಿಂದ ಪ್ರಮಾಣಪತ್ರವನ್ನು ಪಡೆಯಲು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಸಂತ್ರಸ್ತರ ಸಂಬಂಧಿಕರು ಬರಬೇಕು. ಆಸ್ಪತ್ರೆಗಳಿಂದ ಪ್ರಮಾಣಪತ್ರ ಆದರೆ ಯಾವ ಆಸ್ಪತ್ರೆಯು ಕೋವಿಡ್ ಸಾವುಗಳಿಗೆ ಪ್ರಮಾಣಪತ್ರವನ್ನು ನೀಡುತ್ತಿದೆ," ಎಂದು ಕೇಳಿತು.

"ರಾಜ್ಯದ ಅಂಕಿ-ಅಂಶಗಳ ಪ್ರಕಾರ ಕನಿಷ್ಠ 10,000 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಳ್ಳು ಪ್ರಮಾಣಪತ್ರವನ್ನು ನೀಡಲಾಗುತ್ತಿದೆ ಎಂದ ಮಾತ್ರಕ್ಕೆ ನಿಜವಾದ ವ್ಯಕ್ತಿಗಳು ತೊಂದರೆ ಅನುಭವಿಸಬೇಕಾಗುತ್ತದೆ," ಎಂದು ಪೀಠ ಹೇಳಿತು.

Recommended Video

ರಾಹುಲ್ ದ್ರಾವಿಡ್ ಪಂದ್ಯ ಮುಗಿದಾದ ನಂತರ ಹೇಳಿದ್ದೇನು | Oneindia Kannada

English summary
Rs.50,000 for families of Covid-19 victims The Supreme Court has directed the central government to collect information from the states on the progress in the delivery of relief.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X