ಭಾರತೀಯ ಕಚೇರಿಗಳಲ್ಲಿನ 5 ಟಾಕ್ಸಿಕ್ ಅಭ್ಯಾಸಗಳನ್ನು ಬಿಚ್ಚಿಟ್ಟ ಬೆಂಗಳೂರಿನ ಸಂಸ್ಥಾಪಕಿ

ಭಾರತೀಯ ಕಾರ್ಪೊರೇಟ್ ವಲಯದಲ್ಲಿ, ವಿಶೇಷವಾಗಿ ಸ್ಟಾರ್ಟ್‌ಅಪ್ ಹಾಗೂ ಐಟಿ ಕಂಪನಿಗಳಲ್ಲಿ ಕೆಲಸದ ಒತ್ತಡ ಮತ್ತು 'ಟಾಕ್ಸಿಕ್' ವಾತಾವರಣದ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ 'ಮೈಂಡ್‌ಬನ್' ಸಹ-ಸಂಸ್ಥಾಪಕಿ ಅಲೂನಾ ಅವರು ಭಾರತೀಯ ಕಚೇರಿಗಳಲ್ಲಿ ಸಾಮಾನ್ಯವೆನಿಸಿರುವ ಐದು ಅತ್ಯಂತ ಕೆಟ್ಟ ಹಾಗೂ 'ಟಾಕ್ಸಿಕ್' ಅಭ್ಯಾಸಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಲಿಂಕ್ಡ್‌ಇನ್‌ನಲ್ಲಿ ಅವರು ಮಾಡಿರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಕಾರ್ಪೊರೇಟ್ ವಲಯದಲ್ಲಿ ಹೊಸದೊಂದು ಚರ್ಚೆ ಹುಟ್ಟುಹಾಕಿದೆ.

"ಭಾರತೀಯ ಕಚೇರಿಗಳಲ್ಲಿ ಈ ಟಾಕ್ಸಿಕ್ ಅಭ್ಯಾಸಗಳು ಸಹಜವಾಗಿಬಿಟ್ಟಿವೆ, ಆದರೆ ಇದು ಖಂಡಿತಾ ಸರಿಯಲ್ಲ" ಎಂದು ಅಲೂನಾ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಅವರು ಪಟ್ಟಿ ಮಾಡಿರುವ ಆ 5 ಕೆಟ್ಟ ಅಭ್ಯಾಸಗಳು ಈ ಕೆಳಗಿನಂತಿವೆ:

Bengaluru Founder

1. ಸಾರ್ವಜನಿಕವಾಗಿ ನಿಂದಿಸುವುದು: ಮಿಟಿಂಗ್‌ಗಳಲ್ಲಿ, ಅದರಲ್ಲೂ ವಿಶೇಷವಾಗಿ ಸ್ಟ್ಯಾಂಡಪ್ ಮತ್ತು ಸೇಲ್ಸ್ ಮೀಟಿಂಗ್‌ಗಳಲ್ಲಿ ಇತರರ ಮುಂದೆ ಉದ್ಯೋಗಿಗಳ ಮೇಲೆ ಕಿರುಚುವುದು, ನಿಂದಿಸುವುದು ಹಾಗೂ ಅವರನ್ನು ಕೀಳಾಗಿ ಕಾಣುವುದು. ಇದು ಅತ್ಯಂತ ಕೆಟ್ಟ ಸಂಸ್ಕೃತಿ.

2. ಮಧ್ಯರಾತ್ರಿಯ ಕರೆಗಳು ಹಾಗೂ ನಾಯಕರ ಏಕಸ್ವಾಮ್ಯ: ಕಂಪನಿಯ ನಾಯಕರೊಬ್ಬರು ಮಧ್ಯಾಹ್ನ 2 ಗಂಟೆಗೆ ಎದ್ದು, ಮಧ್ಯರಾತ್ರಿಯಲ್ಲಿ ಉದ್ಯೋಗಿಗಳಿಗೆ ಕರೆ ಮಾಡುತ್ತಾರೆ. ಆ ನಾಯಕನೊಬ್ಬನ ವೇಳಾಪಟ್ಟಿಗೆ ತಕ್ಕಂತೆ ಇಡೀ ಕಂಪನಿಯು ತನ್ನ ಸಮಯವನ್ನು ಹೊಂದಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುವುದು.

3. ವೈಯಕ್ತಿಕ ಸಮಯಕ್ಕೆ ಬೆಲೆಯಿಲ್ಲದಿರುವುದು: ಉದ್ಯೋಗಿಗಳು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾಗ ಅಥವಾ ಆಪ್ತರನ್ನು ಕಳೆದುಕೊಂಡು ದುಃಖದಲ್ಲಿರುವಾಗಲೂ ಕೆಲಸದ ಕರೆಗಳು ಬರುವುದು. "ನೀವು ನನ್ನ ಗುಲಾಮರು, ನಿಮ್ಮ ಸಂಪೂರ್ಣ ಸಮಯ ನನ್ನದೇ" ಎಂಬ ಮನಸ್ಥಿತಿಯನ್ನು ಮೇಲಧಿಕಾರಿಗಳು ಹೊಂದಿರುವುದು.

4. ವಾರಾಂತ್ಯದ ಮೀಟಿಂಗ್‌ಗಳು: ಉದ್ಯೋಗಕ್ಕೆ ಸೇರುವಾಗ ನೀಡುವ ಆಫರ್ ಲೆಟರ್‌ನಲ್ಲಿ ವಾರಕ್ಕೆ 5 ದಿನಗಳ ಕೆಲಸ ಎಂದು ಅಧಿಕೃತವಾಗಿ ಹೇಳಲಾಗಿರುತ್ತದೆ. ಆದರೆ, ಯಾವುದೇ ತುರ್ತು ವಿಚಾರಗಳಿಲ್ಲದಿದ್ದರೂ ವಾರಾಂತ್ಯದಲ್ಲಿ ನಿಯಮಿತವಾಗಿ ಸ್ಟ್ಯಾಂಡಪ್ ಮೀಟಿಂಗ್‌ಗಳನ್ನು ಆಯೋಜಿಸುವುದು.

5. ಶುಕ್ರವಾರ ಸಂಜೆಯ ತುರ್ತು: ವಾರವಿಡೀ ಮೇಲಧಿಕಾರಿಗಳು ಆರಾಮಾಗಿರುತ್ತಾರೆ ಮತ್ತು ನಿರಂತರವಾಗಿ ಸ್ಮೋಕ್ ಬ್ರೇಕ್‌ಗಳನ್ನು ತೆಗೆದುಕೊಳ್ಳುತ್ತಾ ಕಾಲಹರಣ ಮಾಡುತ್ತಾರೆ. ಆದರೆ, ಶುಕ್ರವಾರ ಸಂಜೆ 5 ಗಂಟೆಯಾಗುತ್ತಿದ್ದಂತೆ ಅವರಿಗೆ ಎಲ್ಲವೂ 'ತುರ್ತು' ಎಂದು ನೆನಪಾಗುತ್ತದೆ. ಆ ಸಮಯದಲ್ಲಿ ಉದ್ಯೋಗಿಗಳ ಮೇಲೆ ವಿಪರೀತ ಕೆಲಸದ ಒತ್ತಡ ಹೇರುವುದು.

Bengaluru Founder

ಈ ಎಲ್ಲಾ ಅಭ್ಯಾಸಗಳನ್ನು ಕಟುವಾಗಿ ಟೀಕಿಸಿರುವ ಅಲೂನಾ, "ಇದೆಲ್ಲವೂ ಸರಿಯಲ್ಲ, ಯಾವುದನ್ನೂ ಸಹಿಸಿಕೊಳ್ಳಬಾರದು" ಎಂದಿದ್ದಾರೆ. ಅಲ್ಲದೆ ಉದ್ಯೋಗಿಗಳಿಗೆ ಪ್ರಮುಖ ಸಲಹೆಯೊಂದನ್ನು ನೀಡಿದ್ದು, "ನೀವು ಇಂತಹ ವಾತಾವರಣದಲ್ಲಿ ಬೆಳೆಯಬೇಕು, ಇದೆಲ್ಲವನ್ನೂ ದಪ್ಪ ಚರ್ಮ ಬೆಳೆಸಿಕೊಂಡು ಸಹಿಸಿಕೊಳ್ಳಬೇಕು ಎಂದು ಯಾರಾದರೂ ಹೇಳಿದರೆ, ನೆನಪಿರಲಿ, ಅವರೇ ಸಮಸ್ಯೆಯೇ ಹೊರತು ನೀವಲ್ಲ!" ಎಂದು ಎಚ್ಚರಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ

ಅಲೂನಾ ಅವರ ಈ ಪೋಸ್ಟ್‌ಗೆ ಉದ್ಯೋಗಿಗಳು ಹಾಗೂ ತಜ್ಞರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಕಮೆಂಟ್ ಮಾಡಿರುವ ಥೆರಪಿಸ್ಟ್ ಒಬ್ಬರು, "ಟಾಕ್ಸಿಕ್ ವಾತಾವರಣವು ಮಾನಸಿಕ ಆರೋಗ್ಯ ಮತ್ತು ನರಮಂಡಲದ ಮೇಲೆ ಎಷ್ಟು ಆಳವಾದ ಪ್ರಭಾವ ಬೀರುತ್ತದೆ ಎಂಬುದನ್ನು ಹಲವರು ಕಡಿಮೆ ಅಂದಾಜು ಮಾಡುತ್ತಾರೆ. ನಿರಂತರ ಅವಮಾನ, ಎಲ್ಲೆ ಮೀರಿದ ವರ್ತನೆ ಮತ್ತು ಭಾವನಾತ್ಮಕ ಒತ್ತಡಗಳು ವೃತ್ತಿಪರತೆಯಲ್ಲ, ಅವು ದೀರ್ಘಕಾಲದ ಒತ್ತಡಗಳು" ಎಂದಿದ್ದಾರೆ.

ಬ್ರ್ಯಾಂಡ್ ಕಮ್ಯುನಿಕೇಷನ್ ತಜ್ಞರೊಬ್ಬರು ಪ್ರತಿಕ್ರಿಯಿಸಿ, "ವೃತ್ತಿಪರತೆ ಎಂದರೆ ನಿರಂತರವಾಗಿ ಲಭ್ಯವಿರುವುದು ಅಥವಾ ವೈಯಕ್ತಿಕ ಯೋಗಕ್ಷೇಮವನ್ನು ತ್ಯಾಗ ಮಾಡುವುದಲ್ಲ. ಕಚೇರಿಗಳಲ್ಲಿ ಗೌರವ ಸಿಗುವುದು ಮೂಲಭೂತ ಹಕ್ಕಾಗಬೇಕು" ಎಂದು ಬರೆದಿದ್ದಾರೆ. ಮತ್ತೊಬ್ಬ ಸಂಸ್ಥಾಪಕರು ಕಮೆಂಟ್ ಮಾಡಿ, "ಇದೆಲ್ಲವೂ ನಡೆಯುತ್ತಿದೆ ಎನ್ನುವುದಕ್ಕಿಂತ, ಈ ಎಲ್ಲಾ ಟಾಕ್ಸಿಕ್ ಗುಣಗಳನ್ನು ನಾವು 'ಬದ್ಧತೆ' ಹಾಗೂ 'ಕಠಿಣ ಶ್ರಮ' ಎಂದು ಕರೆಯುತ್ತಿರುವುದು ಅತ್ಯಂತ ಬೇಸರದ ಸಂಗತಿ" ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+