ಕೊರೊನಾಗೆ ಆಯುರ್ವೇದ ಸುಳ್ಳು ಔಷಧ: ವೈದ್ಯನಿಗೆ ಸುಪ್ರೀಂ ದಂಡ

ನವದೆಹಲಿ, ಆಗಸ್ಟ್ 21: ಕೊರೊನಾ ಸೋಂಕಿಗೆ ಆಯುರ್ವೇದ ಔಷಧ ಕಂಡು ಹಿಡಿದಿದ್ದೇನೆ ಎಂದು ಹೇಳಿ ಒಪ್ಪಿಗೆ ನೀಡುವಂತೆ ಕೇಳಿದ್ದ ವೈದ್ಯನಿಗೆ ಸುಪ್ರೀಂಕೋರ್ಟ್ 10 ಸಾವಿರ ರೂ ದಂಡ ವಿಧಿಸಿದೆ.

Recommended Video

      ಹಬ್ಬದಂದು ಕಾವೇರಿಗೆ CM ಭಾಗಿಣ ಅರ್ಪಣೆ | Oneindia Kannada

      ಕೊರೊನಾ ಸೋಂಕು ಹೆಚ್ಚಾದಂತೆ, ಔಷಧ ಕಂಡು ಹಿಡಿಯುವವರ ಸಂಖ್ಯೆಯೂ ಹಚ್ಚುತ್ತಿದೆ, ಇದರಲ್ಲಿ ಯಾವುದು ಸುಳ್ಳು ಯಾವುದು ಸತ್ಯ ಎಂದು ಕಂಡು ಹಿಡಿಯುವುದು ಕೂಡ ಕಷ್ಟಕರವಾಗಿದೆ.

      ಆಯುರ್ವೇದ ವೈದ್ಯರು ತಾವು ಕೊರೊನಾ ಸೋಂಕಿಗೆ ಔಷಧ ಕಂಡುಹಿಡಿದಿದ್ದೇನೆ ಎಂದು ಹೇಳಿದ ಕಾರಣ, ಅವರಿಗೆ ಸುಪ್ರೀಂ ಕೋರ್ಟ್​ 10 ಸಾವಿರ ರೂಪಾಯಿ ದಂಡ ವಿಧಿಸಿದೆ. ಹರಿಯಾಣದ ಡಾ. ಓಂಪ್ರಕಾಶ್ ಅವರು ದಂಡಕ್ಕೆ ಒಳಗಾಗಿರುವವರು.

      Supreme Court Fines Ayurveda Doctor

      ಇದಾಗಲೇ ಅಲೋಪಥಿಯಿಂದ ಕರೊನಾದಿಂದ ಸಂಪೂರ್ಣವಾಗಿ ಗುಣಮುಖವಾಗುವಂಥ ಔಷಧವಿನ್ನೂ ಕಂಡುಹಿಡಿಯಲಾಗುತ್ತಿದೆ. ಈ ನಡುವೆಯೇ, ರೋಗನಿರೋಧಕ ಶಕ್ತಿ ವರ್ಧಿಸಿಕೊಂಡರೆ ಕೊರೊನದಿಂದ ಬಚಾವಾಗಬಹುದು.

      ಡಾ. ಓಂಪ್ರಕಾಶ್ ತಾವು ಕಂಡುಹಿಡಿದಿರುವ ಔಷಧವನ್ನು ಕೊರೊನಾಗೆ ಬಳಸಬಹುದು ಎಂದಿದ್ದರು. ಈ ಬಗ್ಗೆ ಅವರು ಸಂದರ್ಶನ ಒಂದರಲ್ಲಿ ಮಾಹಿತಿ ಹಂಚಿಕೊಂಡಿದ್ದರು.

      ಆಯುರ್ವೇದಿಕ್ ಮೆಡಿಸಿನ್ ಆಂಡ್ ಸರ್ಜರಿಯಲ್ಲಿ ಪದವಿ ಪಡೆದಿರುವ ಡಾ. ಓಂ ಪ್ರಕಾಶ್ ತಾವು ಕಂಡುಹಿಡಿದಿರುವ ಔಷಧವನ್ನು ಕೊರೊನಾ ಚಿಕಿತ್ಸೆಗೆ ಬಳಸುವಂತೆ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿಗೆ ಆದೇಶ ನೀಡುವಂತೆ ಸುಪ್ರೀಂ ಕೋರ್ಟ್​ನಲ್ಲಿ ಪಿಐಎಲ್​ ಸಲ್ಲಿಸಿದ್ದರು. ಇದರಿಂದ ಕೊರೊನಾ ವಾಸಿಯಾಗುವುದು ಎಂದು ಅವರು ಹೇಳಿದ್ದರು.

      ನ್ಯಾಯಮೂರ್ತಿ ಸಂಜಯ್ ಕೆ. ಕೌಲ್ ನೇತೃತ್ವದ ಪೀಠ ಆ ಅರ್ಜಿಯನ್ನು ತಿರಸ್ಕರಿಸಿದ್ದು, ಈ ರೀತಿ ಪಿಐಎಲ್​ ಸಲ್ಲಿಸಿದ್ದಕ್ಕೆ ತರಾಟೆ ತೆಗೆದುಕೊಂಡಿದೆ. ಪ್ರಚಾರ ತೆಗೆದುಕೊಳ್ಳಬೇಕೆಂಬ ಕಾರಣಕ್ಕೆ ಡಾ. ಓಂಪ್ರಕಾಶ್ ಈ ರೀತಿ ಪಿಐಎಲ್ ಸಲ್ಲಿಸಿದ್ದಾರೆ ಎಂದು ಅರ್ಜಿಯನ್ನು ತಿರಸ್ಕರಿಸಿ ದಂಡ ವಿಧಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+