"ಧಾರ್ಮಿಕ ಸ್ವಾತಂತ್ರ್ಯಕ್ಕೆ ಬೆಂಬಲ ಓಕೆ, ಆದರೆ ಮತಾಂತರ ಯಾಕೆ?!"
ನವದೆಹಲಿ, ಜನವರಿ 16: "ಧಾರ್ಮಿಕ ಸ್ವಾತಂತ್ರ್ಯಕ್ಕೆ ನಾವು ಎಂದಿಗೂ ಬೆಂಬಲ ನೀಡುತ್ತೇವೆ. ಆದರೆ ಸಾಮೂಹಿಕ ಮತಾಂತರದ ಬಗ್ಗೆ ಚರ್ಚೆ ನಡೆಯುವ ಅಗತ್ಯವಿದೆ" ಎಮದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ಕ್ರೈಸ್ತ ಸಂಘಟನೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಂಗಳವಾರ ಅವರು ಮಾತನಾಡುತ್ತಿದ್ದರು.
"ನಾವು(ಬಿಜೆಪಿ) ಗೆಲ್ಲಲಿ, ಅಥವಾ ಗೆಲ್ಲದಿರಲಿ, ನಾವೆಂದಿಗೂ ಜನರಲ್ಲಿ ಭೇದ-ಭಾವ ಮಾಡಲಾರೆವು. ನನಗೆ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ತಕರಾರಿಲ್ಲ. ಅದನ್ನು ಬೆಂಬಲಿಸುತ್ತೇನೆ. ಆದರೆ ಆ ಹೆಸರಿನಲ್ಲಿ ಸಾಮೂಹಿಕ ಮತಾಂತರಗಳು ನಡೆಯುವುದು ಪ್ರತಿಯೊಂದು ದೇಶಕ್ಕೂ ದೊಡ್ಡ ಸವಾಲು" ಎಂದು ಅವರು ಆತಂಕ ವ್ಯಕ್ತಪಡಿಸಿದರು.

"ನಾನು ನನ್ನ ಬದುಕಿನಲ್ಲಿ ಇದುವರೆಗೂ ಜಾತಿ, ಮತಗಳ ಕುರಿತು ಭೇದ-ಭಾವ ಮಾಡಿಲ್ಲ. ನಾವು ಗೆಲ್ಲಿ, ಬಿಡಲಿ ಭೇದ-ಭಾವ ಮಾಡುವುದೂ ಇಲ್ಲ. ನಮ್ಮ ಪ್ರಧಾನಿ ಹೇಳುವುದೂ ಅದನ್ನೇ" ಎಂದು ಸಿಂಗ್ ಹೇಳಿದರು.
"ಜನರ ಮೇಲೆ ಪ್ರೀತಿ, ಅಭಿಮಾನವಿಲ್ಲದೆ ಯಾರೂ ಅಧಿಕಾರ ನಡೆಸಲು ಸಾಧ್ಯವಿಲ್ಲ. ಪ್ರೀತಿಯಿಂದ ಆಳಬೇಕು, ಬೇರೆ ದಾರಿ ಇಲ್ಲ" ಎಂದರು. ನಾನು ಕ್ರೈಸ್ತ ಸಮುದಾಯ್ಕೆ ಒಂದು ವಿಷಯ ಹೇಳಲು ಇಷ್ಟಪಡುತ್ತೇನೆ. ಪ್ರತಿಯೊಬ್ಬರಿಗೂ ತಮಗೆ ಇಷ್ಟವಾದ ಮತವನ್ನು ಸೇರುವ ಧಾರ್ಮಿ ಸ್ವಾತಂತ್ರ್ಯವಿದೆ. ಅದಕ್ಕೆ ನಮ್ಮ ತಕರಾರಿಲ್ಲ. ಆದರೆ ಅದು ಅವರ ಸ್ವಂತ ಇಚ್ಛೆಯಿಂದ ಆಗಬೇಕು. ಒತ್ತಾಯದಿಂದ ಅಲ್ಲ. ಸಾಮೂಹಿಕ ಮತಾಂತರ ಆರಂಭವಾದರೆ ಅದು ಆ ದೇಶಕ್ಕೆ ದೊಡ್ಡ ಸಮಸ್ಯೆ ಎಂದು ಸಿಂಗ್ ಹೇಳಿದರು.












Click it and Unblock the Notifications