• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುನಂದಾ ಹತ್ಯೆ, ಇನ್ನಷ್ಟು ನಿಗೂಢ ಹೆಸರು ಬಯಲು

By ವಿಕಾಸ್ ನಂಜಪ್ಪ
|

ನವದೆಹಲಿ, ಜ. 10: ಸುನಂದಾ ಪುಷ್ಕರ್ ಹತ್ಯೆ ಪ್ರಕರಣ ಮತ್ತಷ್ಟು ಗೊಂದಲಮಯವಾಗುತ್ತಿದೆ. ವಿರೋಧಾತ್ಮಕ ಅಭಿಪ್ರಾಯಗಳು, ಹಲವು ವೈದ್ಯಕೀಯ ವರದಿಗಳು ಮತ್ತು ಅನೇಕ ಹೇಳಿಕೆಗಳು ತನಿಖೆಯಲ್ಲಿ ತೀವ್ರ ಗೊಂದಲ ಸೃಷ್ಟಿಸುತ್ತಿವೆ. ಪೊಲೀಸರು ಈಗಾಗಲೇ ದಾಖಲಿಸಿಕೊಂಡಿರುವ ಹೇಳಿಕೆಗಳು ಕೂಡ ಯಾವುದೇ ತೀರ್ಮಾನಕ್ಕೆ ಬರಲು ಸಹಾಯಕವಾಗಿಲ್ಲ.

ಪ್ರಕರಣದಲ್ಲಿ ಶಶಿ ತರೂರ್ ಹಾಗೂ ಸುನಂದಾ ಪುಷ್ಕರ್ ನಡುವೆ ಇದ್ದ ಸಂಬಂಧ ಹಲವು ಆಯಾಮಗಳನ್ನು ಪಡೆಯುತ್ತಿದೆ. ಇವರ ಮನೆಯಲ್ಲಿ ಅಡುಗೆ ಭಟ್ಟನಾಗಿದ್ದ ನಾರಾಯಣ ಸಿಂಗ್ 'ಕೇಟಿ' ಎಂಬ ವ್ಯಕ್ತಿಯ ಹೆಸರು ಹೇಳಿದ್ದು, ಆತನೇ ದಂಪತಿ ಮಧ್ಯೆ ಕಲಹ ಏರ್ಪಡಲು ಕಾರಣ ಎಂದು ಹೇಳಿಕೆ ನೀಡಿದ್ದಾರೆ. [ಸುನಂದಾ ಕೊಲೆ ದೃಢಪಡಿಸಿದ್ದು ಗಾಯ ಸಂ. 10]

ದೈಹಿಕ ಸಮಸ್ಯೆ ಇರಲಿಲ್ಲ : ಸುನಂದಾ ಸಾವನ್ನಪ್ಪುವ ಎರಡು ದಿನಗಳ ಮೊದಲು ತಿರುವನಂತಪುರಂನ ಕೆಎಂಐಎಸ್ ಆಸ್ಪತ್ರೆಯಲ್ಲಿ ಕೀಲು ನೋವಿಗೆ ಚಿಕಿತ್ಸೆ ಪಡೆದಿದ್ದರು. ಆದರೆ, ಇಲ್ಲಿ ದೈಹಿಕವಾಗಿ ಯಾವುದೇ ಸಮಸ್ಯೆ ಕಂಡುಬಂದಿರಲಿಲ್ಲ. ತಾವು ಯಾವುದೇ ಶಮನಕಾರಿ ಔಷಧಿ ಸೇವಿಸಲು ಸೂಚಿಸಿರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. [ಸುನಂದಾ ಸಾವು ಹುಟ್ಟುಹಾಕಿದ ಪ್ರಶ್ನೆಗಳು]

ಸುನಂದಾ ಪುಷ್ಕರ್ ಮೃತಪಟ್ಟ ನಂತರ ಕೇರಳದ ಹಲವು ಕಾಂಗ್ರೆಸ್ ಮುಖಂಡರು ದಂಪತಿ ಮಧ್ಯೆ ತೀವ್ರ ಕಲಹವಿತ್ತು ಎಂದು ಆರೋಪಿಸಿದ್ದಾರೆ. ಆದರೆ, ಇನ್ನು ಕೆಲವರು ದಂಪತಿ ಅನ್ಯೋನ್ಯವಾಗಿದ್ದರು ಎಂದಿದ್ದಾರೆ. [ಸುನಂದಾ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ ತರೂರ್ ಪತ್ರ]

ಕೇಟಿ ಮತ್ತು ಸುನಿಲ್ ಯಾರು? : ನಾರಾಯಣ್ ಸಿಂಗ್ ವಿಚಾರಣೆಯಲ್ಲಿ ಬಾಯಿಬಿಟ್ಟ ಎರಡು ಹೆಸರು ಕೇಟಿ ಮತ್ತು ಸುನಿಲ್. ಸುನಂದಾ ಹಾಗೂ ಶಶಿ ದಂಪತಿ ಮಧ್ಯೆ ಕಲಹ ಸಂಭವಿಸಲು ಕೇಟಿ ಎಂಬ ವ್ಯಕ್ತಿ ಕಾರಣ. ಈತನಿಗಾಗಿಯೇ ದುಬೈ ಹಾಗೂ ಇತರೆಡೆ ದಂಪತಿ ಮಧ್ಯೆ ಹೊಡೆದಾಟ ಸಂಭವಿಸಿತ್ತು ಎಂದು ನಾರಾಯಣ ಸಿಂಗ್ ಹೇಳಿದ್ದಾನೆ.

ಸುನಿಲ್ ಸಾಬ್ ಹೆಸರಿನ ಹಿಂದೆ ಬಿದ್ದಾಗ ಈತ ಪುಷ್ಕರ್ ಕುಟುಂಬಕ್ಕೆ ಹತ್ತಿರದವನು ಎಂಬುದು ಬಯಲಾಗಿತ್ತು. ಪೊಲೀಸರು ಸುನಿಲ್‌ನನ್ನು ತನಿಖೆ ನಡೆಸಿದಾಗ ಸುನಂದಾ ಸಾವಿನ ಕುರಿತು ತನಗೆ ಏನೂ ತಿಳಿದಿಲ್ಲ ಎಂದು ಆತ ತಿಳಿಸಿದ್ದಾನೆ. [ಪುಷ್ಕರ್ ಕೊಲೆ ಎಸ್ಐಟಿಯಿಂದ ವಿಚಾರಣೆ]

ಶೀಘ್ರದಲ್ಲಿ ತರೂರ್ ವಿಚಾರಣೆ : ಶಶಿ ತರೂರ್ ಮುಂದಿನ ವಾರ ನವದೆಹಲಿಗೆ ಬರಲಿದ್ದಾರೆ. ಆಗ ಅವರನ್ನು ವಿಚಾರಣೆಗೊಳಪಡಿಸಲಾಗುವುದು, ಎಲ್ಲ ವಿಚಾರಣೆಗೂ ಸಹಕರಿಸುವುದಾಗಿ ಶಶಿ ತರೂರ್ ತಿಳಿಸಿದ್ದಾರೆಂದು ಪೊಲೀಸರು ಹೇಳಿದ್ದಾರೆ. ಈಗ ತನಿಖಾಧಿಕಾರಿಗಳನ್ನು ಕಾಡುತ್ತಿರುವುದು 'ಕೇಟಿ' ಎಂಬ ವ್ಯಕ್ತಿ ಯಾರು ಎಂಬುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
There are more mystery figures emerging in the probe into the murder of Sunanda Pushkar. Katy and Sunil are the names that cropped up during the questioning of Narayan Singh the domestic help.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more