ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತ್ ಶಾ ಕುರಿತು ವಿವಾದಾತ್ಮಕ ಹೇಳಿಕೆ: 'ದಿ ಕ್ವಿಂಟ್' ವಿರುದ್ಧ ಮುಗಿಬಿದ್ದ ಟ್ವಿಟ್ಟಿಗರು

|
Google Oneindia Kannada News

ನವದೆಹಲಿ, ಜನವರಿ 17: ಎಚ್‌1ಎನ್1ನಿಂದ ಬಳಲುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕುರಿತು ಸಂವೇದನಾರಹಿತರಾಗಿ ಟ್ವೀಟ್ ಮಾಡಿದ 'ದಿ ಕ್ವಿಂಟ್' ಪತ್ರಿಕೆಯ ಪತ್ರಕರ್ತೆ ಸ್ತುತಿ ಮಿಶ್ರಾ ವಿರುದ್ಧ ಟ್ವಿಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಚ್‌1ಎನ್1ಗೆ ತುತ್ತಾಗಿರುವ ಅಮಿತ್ ಶಾ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಮಿತ್ ಶಾ ಅವರಿಗೆ ಹಂದಿಜ್ವರ ಬಂದಿರುವುದನ್ನು ಅವರ ವಿರೋಧಿಗಳು ಅವರನ್ನು ಅಣಕಿಸಲು ಬಳಸಿಕೊಳ್ಳುತ್ತಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಹಂದಿ ಜ್ವರ, ಅನಾರೋಗ್ಯಕ್ಕೆ ಚಿಕಿತ್ಸೆಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಹಂದಿ ಜ್ವರ, ಅನಾರೋಗ್ಯಕ್ಕೆ ಚಿಕಿತ್ಸೆ

ಇತ್ತ ಪತ್ರಕರ್ತೆ ಸ್ತುತಿ ಮಿಶ್ರಾ, 'ಹಂದಿ ಜ್ವರ ಬಂದವರು ಸಾಯುತ್ತಾರೆ, ಹೌದಲ್ಲವೇ?' ಎಂದು ಟ್ವೀಟ್ ಮಾಡಿದ್ದಾರೆ. ಇದು ಬಿಜೆಪಿ ಬೆಂಬಲಿಗರನ್ನು ಕೆರಳಿಸಿದೆ. ಬೇರೆ ಪಕ್ಷದ ಬೆಂಬಲಿಗರು ಕೂರ ಸ್ತುತಿ ಮಿಶ್ರಾ ಅವರ ಅವಹೇಳನಾಕಾರಿ ಹೇಳಿಕೆಯನ್ನು ಖಂಡಿಸಿದ್ದಾರೆ.

Stuti Mishra tweet on bjp president Amit shah Twitterians trends #BlockQuint

ಸ್ತುತಿ ಮಿಶ್ರಾ ಹೇಳಿಕೆಯ ವಿವಾದ ಇಡೀ ಪತ್ರಿಕೆಯ ವಿರುದ್ಧವೇ ಆಕ್ರೋಶವನ್ನು ಸೃಷ್ಟಿಸಿದೆ. 'ದಿ ಕ್ವಿಂಟ್' ಯಾವಾಗಲೂ ಬಿಜೆಪಿ ವಿರುದ್ಧದ ಲೇಖನಗಳನ್ನೇ ಪ್ರಕಟಿಸುತ್ತದೆ. ತನ್ನ ಉದ್ಯೋಗಿಯ ಹೇಳಿಕೆಗೂ ಅದು ಬೆಂಬಲ ನೀಡಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಟ್ವಿಟ್ಟರ್‌ನಲ್ಲಿ ಈಗ 'ಬ್ಲಾಕ್ ಕ್ವಿಂಟ್' ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದೆ.

ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಆರೋಗ್ಯ ಸ್ಥಿರಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಆರೋಗ್ಯ ಸ್ಥಿರ

ಸ್ತುತಿ ಹೇಳಿಕೆಯನ್ನು ಖಂಡಿಸಿ ಸಾವಿರಾರು ಮಂದಿ 'ದಿ ಕ್ವಿಂಟ್' ಟ್ವಿಟ್ಟರ್ ಖಾತೆಯನ್ನು ಬ್ಲಾಕ್ ಮಾಡಿದ್ದಾರೆ. ತನ್ನ ಉದ್ಯೋಗಿಯ ಟ್ವೀಟ್‌ಗೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಕ್ವಿಂಟ್ ಸ್ಪಷ್ಟೀಕರಣ ನೀಡಿದೆ.

'ದಿ ಕ್ವಿಂಟ್‌ನ ಉದ್ಯೋಗಿ ಸ್ತುತಿ ಮಿಶ್ರಾ ಅವರ ಸಂವೇದನಾರಹಿತ ಟ್ವೀಟ್ ನಮ್ಮ ಗಮನಕ್ಕೆ ಬಂದಿದೆ. ಅಂತಹ ಯಾವುದೇ ಹೇಳಿಕೆಯನ್ನು 'ದಿ ಕ್ವಿಂಟ್' ಖಂಡಿಸುತ್ತದೆ. ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬೇಗನೆ ಗುಣಮುಖರಾಗಲಿ ಎಂದು ಸಂಪೂರ್ಣ ಕ್ವಿಂಟ್ ತಂಡ ಹಾರೈಸುತ್ತದೆ' ಎಂದು ಪತ್ರಿಕೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.

Stuti Mishra tweet on bjp president Amit shah Twitterians trends #BlockQuint

ಆದರೆ, ಕ್ವಿಂಟ್ ಸ್ಪಷ್ಟೀಕರಣದಿಂದ ಟ್ವಿಟ್ಟಿಗರು ಸಮಾಧಾನಗೊಂಡಿಲ್ಲ. ಪತ್ರಿಕೆ ಹಾಗೂ ಸ್ತುತಿ ಮಿಶ್ರಾ ವೈಯಕ್ತಿಕವಾಗಿ ಅಮಿತ್ ಶಾ ಅವರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

 ಅರುಣ್ ಜೇಟ್ಲಿ ಶೀಘ್ರ ಗುಣಮುಖರಾಗಲೆಂದು ವಿಪಕ್ಷ ನಾಯಕರ ಹಾರೈಕೆ ಅರುಣ್ ಜೇಟ್ಲಿ ಶೀಘ್ರ ಗುಣಮುಖರಾಗಲೆಂದು ವಿಪಕ್ಷ ನಾಯಕರ ಹಾರೈಕೆ

ಈ ಟ್ವೀಟ್‌ನ ಜೊತೆಗೆ 'ಪ್ರೇ ಫಾರ್ ಅಮಿತ್ ಶಾ' ಮತ್ತು 'ಸ್ವೈನ್ ಫ್ಲೂ' ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ.

English summary
Twitterians angry on Journalist Stuti Mishra an employee of The Quint for making insensitive comment on BJP President Amit Shah's health. #BlockQuint hashtag trended in twitter after Stuti asked, 'people die of swine flu, right?'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X