ವಿವರಣೆ: ರವಿಶಂಕರ್ ಗುರೂಜಿ ಯಮುನಾ ನದಿ ತೀರ ವಿವಾದ
ನವದೆಹಲಿ, ಮಾರ್ಚ್ 09: ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ಅವರು ಮಾರ್ಚ್ 11ರಂದು ಹಮ್ಮಿಕೊಂಡಿರುವ ವಿಶ್ವ ಸಂಸ್ಕೃತಿ ಉತ್ಸವ ಕಾರ್ಯಕ್ರಮಕ್ಕೆ ನೂರೆಂಟು ಸಮಸ್ಯೆಗಳು ಎದುರಾಗಿವೆ.
ವಿವಾದ ಕಾವು ಹೆಚ್ಚಾಗುತ್ತಿದ್ದಂತೆ ಈ ಕಾರ್ಯಕ್ರಮಕ್ಕೆ ತೆರಳುವುದಿಲ್ಲ ಎಂದು ರಾಷ್ಟ್ರಪತಿಗಳು ಹಾಗೂ ಪ್ರಧಾನಿ ಸಚಿವಾಲಯ ಪ್ರಕಟಿಸಿದೆ. ಯಮುನಾ ನದಿ ಮೇಲೆ ಸೇತುವೆ, ಪರಿಸರ ಕಲುಷಿತಗೊಂಡಿರುವುದು, ಸೈನಿಕರ ಬಳಕೆ ಹೀಗೆ ನಾನಾ ವಿವಾದಗಳ ಕೇಂದ್ರ ಬಿಂದುವಾಗಿರುವ ಈ ಕಾರ್ಯಕ್ರಮದ ಬಗ್ಗೆ ವಿವರಣೆ ಇಲ್ಲಿದೆ:
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮಾರ್ಚ್ 11ರಂದು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ ಹಾಗೂ ಸಮಾರೋಪ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈಗ ಇಬ್ಬರು ಕೂಡಾ ಕಾರ್ಯಕ್ರಮಕ್ಕೆ ಗೈರು ಹಾಜರಾಗುವ ಸಾಧ್ಯತೆ ಇದೆ.

ಏನಿದು ಕಾರ್ಯಕ್ರಮ:
* ಆರ್ಟ್ ಆಫ್ ಲಿವಿಂಗ್ ಸ್ಥಾಪನೆಯಾಗಿ 35 ವರ್ಷಗಳಾಗಿದ್ದು, ವಾರ್ಷಿಕೋತ್ಸವ ಸಮಾರಂಭವನ್ನು ಯಮುನಾ ನದಿ ತೀರದಲ್ಲಿ ಮೂರು ದಿನಗಳ ಕಾಲ ನಡೆಸಲು ಉದ್ದೇಶಿಸಲಾಗಿದೆ.
* ಸುಮಾರು 35 ಲಕ್ಷಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
* ಯೋಗ, ಧಾನ್ಯ, ಸುದರ್ಶನ ಕ್ರಿಯೆ, ಉಪನ್ಯಾಸ, ಶಾಂತಿ ಪ್ರಾರ್ಥನೆ, ದೇಶ, ವಿದೇಶದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
* ಈ ಕಾರ್ಯಕ್ರಮವಾಗಿ ತಾತ್ಕಾಲಿಕವಾಗಿ ತೂಗು ಸೇತುವೆ ನಿರ್ಮಿಸಲಾಗಿದೆ. ಇದಕ್ಕೆ ಭಾರತೀಯ ಸೇನೆಯ ಯೋಧರನ್ನು ಬಳಸಲಾಗಿದೆ.
ವಿವಾದ ಏನು?:
* ಕಾರ್ಯಕ್ರಮದ ಆಯೋಜನೆಯಿಂದ ಯಮುನಾ ನದಿ ಕಲುಷಿತಗೊಂಡಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.
* ರಾಷ್ಟ್ರೀಯ ಹಸಿರು ಪ್ರಾಧಿಕಾರಕ್ಕೆ ಈ ಬಗ್ಗೆ ದೂರು ನೀಡಲಾಗಿದೆ. ಈ ಬಗ್ಗೆ ಬಂದಿರುವ ದೂರಿನ ವಿಚಾರಣೆ ಜಾರಿಯಲ್ಲಿದೆ.
* ನೀರಿನ ಅಭಾವ ಎದುರಿಸುತ್ತಿರುವ ಪೂರ್ವ ದೆಹಲಿ ಭಾಗದಲ್ಲಿ ಯಮುನಾ ನದಿಯ ನೀರು ಆಸರೆಯಾಗಿದ್ದು, ಪರಿಸರ, ನೀರು ಮಾಲಿನ್ಯಗೊಂಡು ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆಗೆ ಕಾರಣವಾಗಲಿದೆ.
ಕಾರ್ಯಕ್ರಮ ಹಾಗೂ ವಿವಾದದ ಬಗ್ಗೆ ರವಿಶಂಕರ್ ಗುರೂಜಿ ಟ್ವೀಟ್:
Thanks to the efforts of over 100,000 Delhi households who for 3 months prepared enzymes to clean nallahs, methane emission has reduced.(4)
— Sri Sri Ravi Shankar (@SriSri) March 3, 2016












Click it and Unblock the Notifications