Breaking; ಕೋವಿಡ್ ಪ್ರಕರಣ ಏರಿಕೆ, ಶಾಲೆಗಳಿಗೆ ಹೊಸ ಮಾರ್ಗಸೂಚಿ

ನವದೆಹಲಿ, ಏಪ್ರಿಲ್ 22; ನವದೆಹಲಿಯಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಶಾಲೆಗಳಲ್ಲಿ ಕೋವಿಡ್ ಸೋಂಕು ಹರಡುವಿಕೆ ತಡೆಯಲು ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ಶುಕ್ರವಾರ ದೆಹಲಿ ಸರ್ಕಾರ ಶಾಲೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿದೆ. ಲೆಫ್ಟಿನೆಂಟ್ ಗೌರ್ನರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದಿದ್ದ ಸಭೆಯಲ್ಲಿ ಶಾಲೆಗಳಿಗೆ ಮಾರ್ಗಸೂಚಿ ರಚನೆ ಮಾಡಲು ಸೂಚನೆ ನೀಡಲಾಗಿತ್ತು.

Spike In Covid Cases Delhi Government Issues SOP For School

ಶಾಲೆಗಳಲ್ಲಿ ಪ್ರತ್ಯೇಕ ಕ್ವಾರಂಟೈನ್ ರೂಂ. ಇರಬೇಕು ಎಂದು ಸೂಚನೆ ನೀಡಲಾಗಿದೆ. ಶಿಕ್ಷಕರು ಮಕ್ಕಳು, ಪೋಷಕರ ಬಳಿ ಕೋವಿಡ್ ಸೋಂಕಿನ ಲಕ್ಷಣಗಳು ಇವಯೇ? ಎಂದು ಕೇಳುತ್ತಿರಬೇಕು ಎಂದು ನಿರ್ದೇಶನ ನೀಡಲಾಗಿದೆ.

ಶಾಲೆಗಳ ಮುಖ್ಯ ಶಿಕ್ಷಕರು ಶಾಲಾಭಿವೃದ್ಧಿ ಸಮಿತಿಯ ಜೊತೆ ಸಭೆ ನಡೆಸಬೇಕು. ಕೋವಿಡ್ ಹರಡುವಿಕೆ ತಡೆ ಬಗ್ಗೆ ಚರ್ಚೆ ನಡೆಸಬೇಕು. ಮಕ್ಕಳು, ಪೋಷಕರು ಕೋವಿಡ್ ಲಸಿಕೆ ತೆಗೆದುಕೊಳ್ಳುವಂತೆ ಉತ್ತೇಜನ ನೀಡಬೇಕು.

ಶಾಲಾ ಕೊಠಡಿ, ಆವರಣ ನಿಯಮಿತವಾಗಿ ಸ್ಯಾನಿಟೈಸ್ ಆಗುವಂತೆ ಕ್ರಮ ಕೈಗೊಳ್ಳಬೇಕು. ಶಾಲೆಗಳಲ್ಲಿ ಥರ್ಮಲ್ ಸ್ಕ್ಯಾನರ್, ಸ್ಯಾನಿಟೈಸರ್, ಮಾಸ್ಕ್ ಮುಂತಾದ ಅಗತ್ಯ ವಸ್ತುಗಳು ಸದಾ ಲಭ್ಯವಿರುವಂತೆ ನೋಡಿಕೊಳ್ಳಬೇಕು.

ವಿದ್ಯಾರ್ಥಿಗಳು ಊಟದ ಡಬ್ಬಿ, ಪೆನ್, ಬುಕ್, ಸ್ಟೇಷನರಿ ಸಾಮಾಗ್ರಿಗಳನ್ನು ಹಂಚಿಕೊಳ್ಳದಂತೆ ಮನವರಿಕೆ ಮಾಡಿಕೊಡಬೇಕು. ಶಾಲೆಗಳ ಕೊಠಡಿಗಳನ್ನು ನಿಯಮಿತವಾಗಿ ಸ್ಯಾನಿಟೈಸ್ ಮಾಡಬೇಕು. ಪ್ರವೇಶ ದ್ವಾರದಲ್ಲಿ ವಿದ್ಯಾರ್ಥಿಗಳನ್ನು ಸ್ಯಾನಿಟೈಸ್ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ನಿರ್ದೇಶನ ನೀಡಲಾಗಿದೆ.

ಕೋವಿಡ್ ಸೋಂಕಿನ ಲಕ್ಷಣಗಳಿರುವ ಯಾವುದೇ ವಿದ್ಯಾರ್ಥಿ ಶಾಲೆ ಆವರಣದ ಒಳಗೆ ಬಾರದಂತೆ ತಡೆಯಲು ಗೇಟ್‌ ಬಳಿ ಸಿಬ್ಬಂದಿ ನಿಯೋಜನೆ ಮಾಡಬೇಕು. ಥರ್ಮಲ್ ಸ್ಕ್ಯಾನಿಂಗ್ ಇಲ್ಲದೇ ಯಾವುದೇ ವಿದ್ಯಾರ್ಥಿ, ಸಿಬ್ಬಂದಿ, ಶಿಕ್ಷಕರು ಶಾಲೆಯ ಆವರಣ ಪ್ರವೇಶ ಮಾಡುವಂತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+