• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉದ್ಯಮಿ ವಿಜಯ ಮಲ್ಯ ಇನ್ನು ಮೇಲೆ ದೇಶಭ್ರಷ್ಟ ಆರ್ಥಿಕ ಅಪರಾಧಿ!

|
   ಉದ್ಯಮಿ ವಿಜಯ್ ಮಲ್ಯ ಗಡಿಪಾರಿಗೆ ಬ್ರಿಟನ್ ಒಪ್ಪಿಗೆ | ಮಲ್ಯಗೆ ದೇಶಭ್ರಷ್ಟ ಆರ್ಥಿಕ ಅಪರಾಧಿ ಪಟ್ಟ

   ನವದೆಹಲಿ, ಜನವರಿ 05: ಕೊನೆಗೂ ಉದ್ಯಮಿ ವಿಜಯ ಮಲ್ಯ ಅವರಿಗೆ 'ದೇಶಭ್ರಷ್ಟ ಆರ್ಥಿಕ ಅಪರಾಧಿ' ಹಣೆಪಟ್ಟಿಯನ್ನು ವಿಶೇಷ ಪಿಎಂಎಲ್ ಎ(Prevention of Money Laundering Ac) ನ್ಯಾಯಾಲಯ ಕಟ್ಟಿದೆ.

   ಗಡಿಪಾರು ಆದೇಶ ಬಂದರೂ ಮಲ್ಯ ಭಾರತಕ್ಕೆ ಸದ್ಯಕ್ಕಂತೂ ಬರಲ್ಲ!

   ಭಾರತದ ಹಲವು ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ, ಲಂಡನ್ನಿಗೆ ಹಾರಿದ್ದ ವಿಜಯ ಮಲ್ಯ ಅವರನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಲು ಸಾಕಷ್ಟು ಒತ್ತಡ ಹೇರಲಾಗಿತ್ತು.

   ಮಲ್ಯಗೆ 'ದೇಶಭ್ರಷ್ಟ ಆರ್ಥಿಕ ಅಪರಾಧಿ' ಟ್ಯಾಗ್ ಬೀಳುವುದೇ?

   ವಿಜಯ ಮಲ್ಯ ಅವರನ್ನು ಆರ್ಥಿಕ ಅಪರಾಧಿ ಎಂಡು ಘೋಷಿಸಬೇಕು ಎಂದು ಜಾರಿ ನಿರ್ದೇಶನಾಲಯ ಹೂಡಿದ್ದ ಅರ್ಜಿಯ ವಿಚಾರಣೆಯನ್ನು ವಿಶೇಷ ಪಿಎಂಎಲ್ ಎ ನ್ಯಾಯಾಲಯ ಇಂದು ನಡೆಸಿತು.

   ಪ್ರಿವೆನ್ಷನ್ ಆಫ್ ಮನಿ ಲ್ಯಾಂಡರಿಂಗ್ act ಪ್ರಕಾರ ಈಗ ಸರ್ಕಾರಕ್ಕೆ ಮಲ್ಯ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಿದೆ.

   ಭಾರತಕ್ಕೆ ನನ್ನ ಹಣಕ್ಕಿಂತ ನನ್ನ ಮೇಲೆಯೇ ಹೆಚ್ಚು ಗಮನ: ಮಲ್ಯ

   ಮಲ್ಯ ಒಡೆತನದ 12.5 ಸಾವಿರ ಕೋಟಿ ರು ಅಸ್ತಿ ಜಪ್ತಿ ಮಾಡಲು ತನಿಖಾ ಸಂಸ್ಥೆಗಳು ಮುಂದಾಗಿವೆ.

   ಮದ್ಯದ ದೊರೆ ವಿಜಯ್ ಮಲ್ಯ ಅವರು ತಮ್ಮನ್ನು ಆರ್ಥಿಕ ಅಪರಾಧಿ ಎಂದು ಹೊಸ ತಿದ್ದುಪಡಿ ಕಾಯ್ದೆಯಡಿಯಲ್ಲಿ ಜಾರಿ ನಿರ್ದೇಶನಾಲಯವು ಕರೆದು, ದೋಷರೋಪಣ ಸಲ್ಲಿಸಲು ಮುಂದಾಗಿರುವುದಕ್ಕೆ ತಡೆ ನೀಡುವಂತೆ ಕೋರಿ, ಕೋರ್ಟಿಗೆ ಕಳೆದ ವಾರ ಹಾಕಿದ್ದ ಅರ್ಜಿ ಕೂಡಾ ತಿರಸ್ಕೃತಗೊಂಡಿತ್ತು.

   English summary
   Special PMLA court declares Vijay Mallya a fugitive economic offender. His properties can now be confiscated by the government.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X