Get Updates
Get notified of breaking news, exclusive insights, and must-see stories!

'ಮಧುಮೇಹ ಕಡಿಮೆಯಾಗಬೇಕೆ? ಹಾಗಾದರೆ ಸಂಸ್ಕೃತದಲ್ಲಿ ಮಾತಾಡಿ'

Recommended Video

      BJP MP Ganesh singh on Sanskrit Language in Loksabha | BJP | LOKSABHA | SANSKRIT | ONEINDIA KANNADA

      ನವದೆಹಲಿ, ಡಿಸೆಂಬರ್ 13: 'ಪ್ರತಿದಿನ ಮಾತನಾಡುವಾಗ ಸಂಸ್ಕೃತವನ್ನು ಬಳಸಿದರೆ ಜನರು ಮಧುಮೇಹದಿಂದ ದೂರವಿರಬಹುದು ಹಾಗೂ ಮನುಷ್ಯನ ನರ ಮಂಡಲ ಉತ್ತಮವಾಗಿಲಿದೆ ಕೊಬ್ಬಿನಿಂದಲೂ ಮುಕ್ತಿ ಪಡೆಯಬಹುದು' ಈ ವಿಷಯನ್ನು ಯಾವುದೇ ವಿಶ್ವವಿದ್ಯಾಲಯದ ಸಂಶೋಧನೆ ಬಹಿರಂಗ ಪಡಿಸಿಲ್ಲ.

      ಬದಲಾಗಿ ಬಿಜೆಪಿ ಸಂಸದ ಗಣೇಶ್ ಸಿಂಗ್ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಸಂಸ್ಕೃತವು ವಿಶಿಷ್ಟ ಭಾಷೆಯಾಗಿದ್ದು, ಜಗತ್ತಿನ ಶೇ.97 ಭಾಷೆಗಳಿಗೆ ಮೂಲ ಪ್ರೇರಣೆಯಾಗಿದೆ.

      ಇಂಗ್ಲಿಷ್ ಹಾಗೂ ಇಸ್ಲಾಮಿಕ್ ಭಾಷೆಗಳಿಗೂ ಸಂಸ್ಕೃತವೇ ಮೂಲವಾಗಿದೆ. ನಾಸಾ ಕೂಡ ಕಂಪ್ಯೂಟರ್‌ನಲ್ಲಿ ಸಂಸ್ಕೃತ ಬಳಕೆಗೆ ಪ್ರಯತ್ನಿಸುತ್ತಿದೆ.ಹೀಗಾಗಿ ಜನರು ತಮ್ಮ ದೈನಂದಿಕ ಜೀವನದಲ್ಲಿ ಸಂಸ್ಕೃತವನ್ನು ಬಳಸಿದರೆ ಕೆಲಸ ರೋಗಗಳಿಂದಲೂ ದೂರವಿರಬಹುದು ಎಂಬ ಹೇಳಿಕೆಯನ್ನು ಗಣೇಶ್‌ ಸಿಂಗ್ ನೀಡಿದ್ದಾರೆ.

      Speak Sanskrit To Reduce Diabetes

      ಆದರೆ ಗಣೇಶ್ ಸಿಂಗ್ ಅವರು ಸಂಸ್ಕೃತ ಹಾಗೂ ಮಧುಮೇಹಕ್ಕಿರುವ ಸಂಬಂಧವನ್ನು ವಿವರಿಸಿಲ್ಲ, ಬಿಜೆಪಿ ಸಂಸದನ ಈ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದೆ.

      ದೇಶದಲ್ಲಿ ಮೊದಲ ಬಾರಿಗೆ ಸಂಸ್ಕೃತ ಕೇಂದ್ರೀಯ ವಿಶ್ವವಿದ್ಯಾಲಯ ಆರಂಭಿಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಲೋಕಸಭೆಯಲ್ಲಿ ವಿಧೇಯಕ ಮಂಡಿಸಿದಾಗ ಈ ಚರ್ಚೆ ನಡೆಯಿತು. ಚರ್ಚೆ ಬಳಿಕ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಆರಂಭಕ್ಕೆ ಲೋಕಸಭೆ ಅನುಮತಿಯನ್ನೂ ಕೂಡ ನೀಡಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+