ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಯಾಣಿಕರಿಗೆ ಗುಡ್ ನ್ಯೂಸ್: ಇನ್ಮೇಲೆ ವಿಮಾನದಲ್ಲೂ ಸಿಗಲಿದೆ ವೈ-ಫೈ!

|
Google Oneindia Kannada News

ನವದೆಹಲಿ, ಮಾರ್ಚ್ 03: ವಿಮಾನ ಪ್ರಯಾಣಿಕರಿಗೆ ಇದೋ ಇಲ್ಲಿದೆ ಸಿಹಿ ಸುದ್ದಿ. ಇನ್ಮೇಲೆ ವಿಮಾನದ ಒಳಗೆ ವೈ-ಫೈ ಸೌಲಭ್ಯ ಸಿಗಲಿದೆ. ಭಾರತದಲ್ಲಿ ವಿಮಾನ ಪ್ರಯಾಣಿಕರಿಗೆ ಇನ್-ಫ್ಲೈಟ್ ವೈ-ಫೈ ಇಂಟರ್ನೆಟ್ ಸೌಲಭ್ಯ ನೀಡಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಸಮ್ಮತಿ ನೀಡಿದೆ.

ವಿಮಾನ ಏರಿದಾಗ ಮೊಬೈಲ್ ಸ್ವಿಚ್ ಆಫ್ ಮಾಡುವಂತೆ ಅಥವಾ ಫ್ಲೈಟ್ ಮೋಡ್ ಆನ್ ಮಾಡುವಂತೆ ಪ್ರಯಾಣಿಕರಿಗೆ ಸೂಚನೆ ನೀಡಲಾಗುತ್ತಿತ್ತು. ಆದ್ರೀಗ, ಭಾರತದಲ್ಲಿ ಹಾರಾಡುವ ಸರ್ಕಾರಿ ಸ್ವಾಮ್ಯದ ಏರ್ ಲೈನ್ಸ್ ಗಳಿಗೆ ಈ ನಿರ್ಬಂಧ ತೆರವು ಮಾಡಲಾಗಿದ್ದು, ಪ್ರಯಾಣಿಕರಿಗೆ ಅಂತರ್ಜಾಲ ಸೇವೆ ನೀಡಲು ಒಪ್ಪಿಗೆ ಸೂಚಿಸಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಮುಂದೆ ಓದಿರಿ...

ವಿಮಾನದಲ್ಲಿ ಇನ್ನುಮುಂದೆ ಮೊಬೈಲ್ ಬಳಸಬಹುದು!ವಿಮಾನದಲ್ಲಿ ಇನ್ನುಮುಂದೆ ಮೊಬೈಲ್ ಬಳಸಬಹುದು!

ಅಧಿಸೂಚನೆಯಲ್ಲಿ ಏನಿದೆ.?

ಅಧಿಸೂಚನೆಯಲ್ಲಿ ಏನಿದೆ.?

ವಿಮಾನದಲ್ಲಿ ಪ್ರಯಾಣ ಆರಂಭಿಸಿದಾಗ ಪ್ರಯಾಣಿಕರು ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಸ್ಮಾರ್ಟ್ ವಾಚ್, ಈ-ರೀಡರ್, ಪಾಯಿಂಟ್ ಆಫ್ ಸೇಲ್ ಡಿವೈಸ್ ಗಳ ಮೂಲಕ ವೈ-ಫೈ ಸೇವೆ ಪಡೆಯಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇನ್ ಫ್ಲೈಟ್ ವೈ-ಫೈ ನೀಡಿದ್ದ ಟಾಟಾ ಗ್ರೂಪ್

ಇನ್ ಫ್ಲೈಟ್ ವೈ-ಫೈ ನೀಡಿದ್ದ ಟಾಟಾ ಗ್ರೂಪ್

ಕಳೆದ ಫೆಬ್ರವರಿಯಲ್ಲಿ ಪಾನಸೋನಿಕ್ ಏವಿಯೋನಿಕ್ಸ್ ಸಹಭಾಗಿತ್ವದೊಂದಿಗೆ ಟಾಟಾ ಗ್ರೂಪ್ ನ ನೆಲ್ಕೋ ಇನ್-ಫ್ಲೈಟ್ ವೈ-ಫೈ ಸೇವೆಯನ್ನು ಭಾರತದಲ್ಲಿ ಆರಂಭಿಸಿತ್ತು.

ಭಾರತದ 150 ಪೈಲೆಟ್ ಗಳಿಗೆ ನೋಟಿಸ್ ಜಾರಿ: ಯಾಕೆ ಗೊತ್ತೆ?ಭಾರತದ 150 ಪೈಲೆಟ್ ಗಳಿಗೆ ನೋಟಿಸ್ ಜಾರಿ: ಯಾಕೆ ಗೊತ್ತೆ?

ಇಲ್ಲಿಯವರೆಗೂ ಇದ್ದ ನಿಯಮವೇನು.?

ಇಲ್ಲಿಯವರೆಗೂ ಇದ್ದ ನಿಯಮವೇನು.?

ಈಗಾಗಲೇ ಏರ್ ಫ್ರಾನ್ಸ್, ಬ್ರಿಟಿಷ್ ಏರ್ ವೇಸ್, ಈಜಿಪ್ಟ್ ಏರ್, ಎಮಿರೇಟ್ಸ್, ಮಲೇಶಿಯಾ ಏರ್ ಲೈನ್ಸ್, ಕತಾರ್ ಏರ್ ವೇಸ್ ಸೇರಿದಂತೆ ವಿಶ್ವದ ಹಲವು ಏರ್ ಲೈನ್ಸ್ ಗಳು ಪ್ರಯಾಣಿಕರಿಗೆ ಇನ್-ಫ್ಲೈಟ್ ವೈ-ಫೈ ಸೌಲಭ್ಯ ನೀಡುತ್ತಿವೆ. ಆದರೆ ಅವು ಭಾರತದ ವಾಯುವಲಯ ಪ್ರವೇಶಿಸಿದ ಕೂಡಲೆ ವೈ-ಫೈ ಸೇವೆ ಕಡಿತಗೊಳಿಸಬೇಕು ಎಂಬ ನಿಯಮ ಈವರೆಗೂ ಜಾರಿಯಲ್ಲಿತ್ತು.

ಕರೆ ಮಾಡುವ ಅವಕಾಶವೂ ಇದೆ

ಕರೆ ಮಾಡುವ ಅವಕಾಶವೂ ಇದೆ

ಇನ್-ಫ್ಲೈಟ್ ಕನೆಕ್ಟಿವಿಟಿ (IFC) ಮೂಲಕ ವಿಮಾನದಲ್ಲಿ ಪ್ರಯಾಣಿಸುವಾಗ ಕರೆ ಮಾಡುವ ಮತ್ತು ಅಂತರ್ಜಾಲ ಸೇವೆ ಬಳಸುವ ಅವಕಾಶವಿರುತ್ತದೆ. ಭಾರತೀಯ ವಾಯುವಲಯದಲ್ಲಿ ವೈ-ಫೈ ಸೌಲಭ್ಯ ಒದಗಿಸಿರುವುದರಿಂದ ಸ್ಥಳೀಯ ಏರ್ ಲೈನ್ಸ್ ಗೆ ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ.

ಇಂಡಿಗೋ 'ಬೇಸಿಗೆ ಆಫರ್', ಕಡಿಮೆ ಮೊತ್ತದಲ್ಲಿ ವಿಮಾನಯಾನಇಂಡಿಗೋ 'ಬೇಸಿಗೆ ಆಫರ್', ಕಡಿಮೆ ಮೊತ್ತದಲ್ಲಿ ವಿಮಾನಯಾನ

English summary
Soon Fliers In India may get WiFi internet on board flights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X