ಸೋನಿಯಾ ಗಾಂಧಿ ಅವರಿಗೆ 71ನೇ ಹುಟ್ಟುಹಬ್ಬದ ಸಂಭ್ರಮ

ನವದೆಹಲಿ, ಡಿಸೆಂಬರ್ 09: ಗುಜರಾತ್ ಮೊದಲ ಹಂತದ ಚುನಾವಣೆ ನಡೆಯುತ್ತಿದೆ ಆದರೆ ರಾಹುಲ್ ಗಾಂಧಿ ಗುಜರಾತ್ ನಲ್ಲಿರದೆ ಮನೆಗೆ ತೆರಳಿದ್ದಾರೆ. ರಾಹುಲ್ ಚುನಾವಣಾ ಕಣದಿಂದ ಪಲಾಯನ ಮಾಡಿದ್ದಾರೆ ಎಂದುಕೊಳ್ಳುವ ಹಾಗಿಲ್ಲ. ಅವರು ಈ ವಿರಾಮ ತೆಗೆದುಕೊಂಡಿರುವುದು ಒಳ್ಳೆಯ ಕೆಲಸಕ್ಕೆ.

ರಾಹುಲ್ ಗಾಂಧಿ ತಮ್ಮ ತಾಯಿ ಸೋನಿಯಾ ಗಾಂಧಿ ಅವರನ್ನು ಭೇಟಿ ಆಗಲು ಹೋಗಿದ್ದಾರೆ. ಕಾರಣ ಇಂದು (ಡಿಸೆಂಬರ್ 09) ಸೋನಿಯಾ ಅವರ ಹುಟ್ಟುಹಬ್ಬ. ಎ.ಐ.ಸಿ.ಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಇಂದು 71ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಗಳಲ್ಲಿ ಸೋನಿಯಾ ಗಾಂಧಿ ಅವರಿಗೆ ಶುಭಾಷಯಗಳ ಮಹಾಪೂರವೇ ಹರಿದು ಬಂದಿದ್ದು, ದೇಶದ ಗಣ್ಯರು ಸೊನಿಯಾ ಗಾಂಧಿ ಅವರಿಗೆ ಶುಭಾಷಯಗಳನ್ನು ಕೋರಿದ್ದಾರೆ.

Soniya Gandhi celebrating 72nd Birthday on December 09.

ಸೋನಿಯಾ ಗಾಂಧಿ ಅವರ ಹುಟ್ಟುಹಬ್ಬ ಪ್ರಯುಕ್ತ ಟ್ವಿಟರ್ ನಲ್ಲಿ ಎಚ್‌ಬಿಡಿಸೋನಿಯಾಗಾಂಧಿ (HBDsoniyagandhi) ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್ ಆಗಿದ್ದು, ಹ್ಯಾಷ್ ಟ್ಯಾಗ್ ಅಡಿಯಲ್ಲಿ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಸೋನಿಯಾ ಗಾಂಧಿ ಅವರಿಗೆ ಶುಭಾಷಯಗಳನ್ನು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಸೋನಿಯಾ ಗಾಂಧಿ ಅವರಿಗೆ ಟ್ವಿಟರ್ ನಲ್ಲಿ ಶುಭಾಷಯ ಕೋರಿದ್ದು 'ತಮ್ಮ ಆರೋಗ್ಯ, ಆಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ' ಎಂದಿದ್ದಾರೆ

1998 ರಿಂದಲೂ ನೂರಾರು ವರ್ಷ ಇತಿಹಾಸ ಇರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷಗಾದಿಯಲ್ಲಿದ್ದು ಕೊಂಡು ಪಕ್ಷವನ್ನು ಮುನ್ನೆಡೆಸಿದ ಸೋನಿಯಾ ಗಾಂಧಿ ಅವರು ಇನ್ನು ಕೆಲವೇ ದಿನಗಳಲ್ಲಿ ಅಧ್ಯಕ್ಷ ಗಾಧಿಯಿಂದ ಕೆಳಗಿಳಿಯಲಿದ್ದು, ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ಸಜ್ಜಾಗುತ್ತಿರುವಂತೆ ಗೋಚರವಾಗುತ್ತಿದೆ.

ಗುಜರಾತ್ ನ ಚುನಾವಣಾ ಪ್ರಚಾರದಲ್ಲಿಯೂ ಭಾಗವಹಿಸದ ಅವರು ತಮ್ಮ ಮಗ ರಾಹುಲ್ ಗೆ ಪಟ್ಟ ಕಟ್ಟಿ ತೆರೆ ಮರೆಗೆ ಸರಿಯುವ ಯೋಚನೆಯಲ್ಲಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ನಲ್ಲಿ ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+