'ಅಪ್ಪನ ಮನೆಯಲ್ಲಿ ಮಗ ವಾಸಿಸುವಂತಿಲ್ಲ' ಎಂದು ಕೋರ್ಟ್ ಹೇಳಿದ್ದೇಕೆ?

Posted By:
Subscribe to Oneindia Kannada

ನವದೆಹಲಿ, ನವೆಂಬರ್ 30: 'ಅಪ್ಪನ ಮನೆಯಲ್ಲಿ ಮಗ ವಾಸಿಸುವಂತಿಲ್ಲ'' ಈ ಥರಾ ಡೈಲಾಗ್ ಎಲ್ಲೋ ಕೇಳಿದಂತೆ ಇದೆಯಲ್ಲ ಎಂದು ಕನ್ನಡ ಸಿನಿಪ್ರೇಮಿಗಳಿಗೆ ಅನಿಸಿದ್ದರೆ ತಪ್ಪಲ್ಲ, ರಿಯಲ್ ಸ್ಟಾರ್ ಉಪೇಂದ್ರ 'ಎ' ಫಿಲಂನಲ್ಲಿ ಹೊಡೆದ ಡೈಲಾಗ್ ಬಹುತೇಕ ನಿಜವಾಗುತ್ತಿದೆ. ಹೀಗೊಂದು ಆದೇಶವನ್ನು ದೆಹಲಿ ಹೈಕೋರ್ಟ್ ನೀಡಿದೆ.

ಅಪ್ಪನ ಸ್ವಯಾರ್ಜಿತ ಮನೆಯಲ್ಲಿ ವಾಸಿಸುವ ಕಾನೂನುಬದ್ಧ ಹಕ್ಕು ಮಗನಿಗೆ ಇಲ್ಲ, ಅವರ ಕೃಪೆಯ ಮೇರೆಗೆ ಮಾತ್ರವೇ ಆ ಮನೆಯಲ್ಲಿ ವಾಸವಾಗಿರಬಹುದು, ಇದು ವಿವಾಹಿತ ಹಾಗೂ ಅವಿವಾಹಿತರಿಬ್ಬರಿಗೂ ಅನ್ವಯ ಎಂದು ದೆಹಲಿ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿರುವುದು ಭಾರಿ ಚರ್ಚೆಗೊಳಲ್ಪಟ್ಟಿದೆ.

Son has no legal right in parents’ house, can stay at their mercy: Delhi High Court

ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ 'ಎ' ಚಿತ್ರದಲ್ಲಿ ಯಾರದೋ ಮನೆಗೆ ನುಗ್ಗಿ ಅಲ್ಲಿರುವವರನ್ನು ಅಪ್ಪ, ಅಮ್ಮ, ತಮ್ಮ, ತಂಗಿ ಎಂದು ಕರೆಯುವ ದೃಶ್ಯವಿದೆ. ಆ ಸಂದರ್ಭದಲ್ಲಿ ಬರುವ ಡೈಲಾಗ್' ನಾನೇನಾದ್ರೂ ಪಿಎಂ ಆದ್ರೆ ಅಪ್ಪನ ಆಸ್ತಿ ಮಗನಿಗೆ ಹೋಗೋದನ್ನು ಬ್ಯಾನ್ ಮಾಡ್ತೀನಿ' ಎಂದು ಉಪ್ಪಿ ಹೇಳುತ್ತಾರೆ.

ಮದುವೆಯಾಗಿರಲಿ ಅಥವಾ ಮದುವೆಯಾಗಿರದೇ ಇರಲಿ, ಪುತ್ರನಿಗೆ ತನ್ನ ಹೆತ್ತವರ ಸ್ವಯಾರ್ಜಿತ ಮನೆಯಲ್ಲಿ ವಾಸಿಸುವ ಕಾನೂನುಬದ್ಧ ಹಕ್ಕು ಇಲ್ಲ, ಅವರ ಕೃಪೆಯ ಮೇರೆಗೆ ಮಾತ್ರವೇ ಆತ ಆ ಮನೆಯಲ್ಲಿ ವಾಸವಾಗಿರಬಹುದು ಎಂದು ದೆಹಲಿ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದೆ.

ಸೌಹಾರ್ದಯುತ ಬಾಂಧವ್ಯ ಇರುವವರೆಗೂ ಹೆತ್ತವರು ಮಗನಿಗೆ ತಮ್ಮ ಸ್ವಯಾರ್ಜಿತ ಮನೆಯಲ್ಲಿ ವಾಸವಾಗಿರಲು ಅವಕಾಶ ನೀಡಬಹುದು. ಆದರೆ, ಅದರ ಅರ್ಥ ಜೀವಮಾನಪೂರ್ತಿ ಆತನ ಹೊರೆಯನ್ನು ಪಾಲಕರು ಹೊತ್ತುಕೊಳ್ಳಬೇಕು ಎಂಬುದಲ್ಲ ಎಂದು ಹೈಕೋರ್ಟ್ ಸ್ಪಷ್ಟ ಪಡಿಸಿದೆ.

ತಮ್ಮ ಸ್ವಾಧೀನದಲ್ಲಿ ಇರುವ ಮನೆಯ ಮಹಡಿಯನ್ನು ತೆರವುಗೊಳಿಸುವಂತೆ ತನ್ನ ಪುತ್ರ ಹಾಗೂ ಸೊಸೆಗೆ ನಿರ್ದೇಶನ ನೀಡಬೇಕು, ಮಗ ಹಾಗೂ ಸೊಸೆಯಿಂದ ಕಿರುಕುಳವಾಗುತ್ತಿದೆ ಎಂದು ಕೋರಿ ಹೆತ್ತವರೊಬ್ಬರು ವಿಚಾರಣಾ ನ್ಯಾಯಾಲಯದಲ್ಲಿ ಖಟ್ಲೆ ಹೂಡಿದ್ದರು. ವಿಚಾರಣಾ ನ್ಯಾಯಾಲಯವು ನೀಡಿದ್ದ ತೀರ್ಪನ್ನು ಪ್ರಶ್ನಿಸಿದ ಮಗನಿಗೆ ಮೇಲ್ಕಂಡಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A son, irrespective of his marital status, has no legal right to live in the self-acquired house of his parents and can reside there only at their “mercy”, the Delhi High Court has said.
Please Wait while comments are loading...