ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಡಾಖ್‌ನಲ್ಲಿ ಪರಿಸ್ಥಿತಿ ಉದ್ವಿಗ್ನ: ಆತಂಕ ವ್ಯಕ್ತಪಡಿಸಿದ ಡಿಎಸ್ ಹೂಡಾ

|
Google Oneindia Kannada News

ನವದೆಹಲಿ, ಜೂನ್ 17: ಲಡಾಖ್‌ನಲ್ಲಿ ಉಂಟಾಗಿರುವ ಉಗ್ವಿಗ್ನ ಪರಿಸ್ಥಿತಿ ಕುರಿತು ಲೆಫ್ಟಿನೆಂಟ್ ಜನರಲ್ ಡಿಎಸ್ ಹೂಡಾ ಆತಂಕ ವ್ಯಕ್ತಪಡಿಸಿದ್ದಾರೆ.

Recommended Video

ಗಾಲ್ವಾನ್ ಘರ್ಷಣೆಯಲ್ಲಿ ಸತ್ತ ಚೀನಾ ಸೈನಿಕರ ಲೆಕ್ಕ ಕೊಟ್ಟ ಅಮೇರಿಕಾ | Oneindia Kannada

ಪೂರ್ವ ಲಡಾಕ್ ನಲ್ಲಿ ಕಳೆದ ಮೇ 5ರಂದು ಚೀನಾ ಸೇನಾಪಡೆಯನ್ನು ನಿಯೋಜಿಸಿದ ನಂತರ ಭಾರತ ಸಹ ತನ್ನ ಸೇನಾಪಡೆಯನ್ನು ನಿಯೋಜಿಸಿತ್ತು. ಬಳಿಕ ಗಡಿ ಸಮಸ್ಯೆಯನ್ನು ಶಾಂತಿ ಮಾತುಕತೆ ಮೂಲಕ ಬಗೆಹರಿಸೋಣವೆಂದು ಈಗಾಗಲೇ ಐದಾರು ಸುತ್ತಿನ ಮಾತುಕತೆ ಸಹ ಮುಗಿದಿತ್ತು.

ಚೀನಾ-ಭಾರತ ಘರ್ಷಣೆ: ಈವರೆಗೂ ಬೆಳವಣಿಗೆಯ ಪ್ರಮುಖ ಅಂಶಗಳುಚೀನಾ-ಭಾರತ ಘರ್ಷಣೆ: ಈವರೆಗೂ ಬೆಳವಣಿಗೆಯ ಪ್ರಮುಖ ಅಂಶಗಳು

ಆದರೆ ಸೋಮವಾರ-ಮಂಗಳವಾರ ಇದ್ದಕ್ಕಿದ್ದಂತೆ ಗಡಿಯಲ್ಲಿ ಘರ್ಷಣೆ ನಡೆದಿದೆ. ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಚೀನಾ ಕಡೆಯ ಯೋಧರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ವರದಿ ಬಂದಿದ್ದು ನಿಜಕ್ಕೂ ಆಘಾತಕಾರಿ ವಿಷಯ ಎಂದು ಹೂಡಾ ಅಭಿಪ್ರಾಯಪಟ್ಟಿದ್ದಾರೆ.

ಎರಡೂ ರಾಷ್ಟ್ರಗಳ ಬೇಡಿಕೆ ಏನು?

ಎರಡೂ ರಾಷ್ಟ್ರಗಳ ಬೇಡಿಕೆ ಏನು?

ಎರಡೂ ರಾಷ್ಟ್ರಗಳ ಬೇಡಿಕೆಗಳು ಏನೇನು?, ಎರಡೂ ದೇಶಗಳು ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧವಿದೆಯೇ ಎಂಬುದರ ಮೇಲೆ ಮುಂದಿನ ವಿಷಯ ನಿರ್ಧಾರವಾಗುತ್ತದೆ.

ಭಾರತ-ಚೀನಾ ಸಮಸ್ಯೆಯನ್ನು ಬಗೆಹರಿಸಲು ಕೆಲವು ಕಠಿಣ ಮಾತುಕತೆಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಮೊದಲಿಗೆ ಭಾವಿಸಲಾಗಿತ್ತು ಆದರೆ ಇತ್ತೀಚಿನ ಹಿಂಸಾಚಾರವು ಸಾವಿಗೆ ಕಾರಣವಾಗಿರುವುದರಿಂದ ಇನ್ನು ಮುಂದೆ ನಿರ್ಣಯಿಸುವುದು ಕಷ್ಟವಾಗಬಹುದು.

ಮೂಲ ಸ್ಥಾನಕ್ಕೆ ಮರಳಲು ಚೀನಾ ಒಪ್ಪಬೇಕು

ಮೂಲ ಸ್ಥಾನಕ್ಕೆ ಮರಳಲು ಚೀನಾ ಒಪ್ಪಬೇಕು

ಗಡಿ ವಾಸ್ತವ ರೇಖೆಯ ಉದ್ದಕ್ಕೂ ಮೂಲ ಸ್ಥಾನಕ್ಕೆ ಮರಳಲು ಚೀನಾ ಒಪ್ಪಿದರೆ ಉದ್ವಿಗ್ನತೆ ಕಡಿಮೆಯಾಗಬಹುದು. ಆದರೆ, ಈ ಬಾರಿ ಚೀನಿಯರು ಆ ಪ್ರದೇಶದಿಂದ ಹಿಂದೆ ಸರಿಯಲು ಒಪ್ಪುವ ಹಾಗೆ ಕಾಣುತ್ತಿಲ್ಲ ಎಂದು ಲೆ.ಜ.ಡಿ ಎಸ್ ಹೂಡಾ ಅಭಿಪ್ರಾಯಪಟ್ಟಿದ್ದಾರೆ.

ಚೀನಾದ ಉದ್ದೇಶದ ಬಗ್ಗೆ ಹೆಚ್ಚು ತಿಳಿದಿಲ್ಲ

ಚೀನಾದ ಉದ್ದೇಶದ ಬಗ್ಗೆ ಹೆಚ್ಚು ತಿಳಿದಿಲ್ಲ

ಕಳೆದ ಬಾರಿಯ ಡೋಕ್ಲಾಮ್ ಅಥವಾ ಚುಮಾರ್ ಘಟನೆಗಳಿಗೆ ವಿರುದ್ಧವಾಗಿ ಈ ಬಾರಿ ಚೀನಾದ ಉದ್ದೇಶಗಳ ಬಗ್ಗೆ ನಮಗೆ ಹೆಚ್ಚು ತಿಳಿದಿಲ್ಲ. ಚೀನಾ ದೇಶ ಪೂರ್ವ ಲಡಾಕ್ ನಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾದಾಗ ಅದನ್ನು ಭಾರತ ವಿರೋಧಿಸಿ ಘರ್ಷಣೆ ಆರಂಭವಾಗಿದೆ. ಚೀನಾದ ಆಕಾಂಕ್ಷೆಗಳಿಗೆ ಭಾರತ ಒಪ್ಪದಿದ್ದರೆ ಈ ಬಾರಿ ಹೆಚ್ಚಿನ ಉದ್ವಿಗ್ನತೆಗೆ ಕಾರಣವಾಗಬಹುದು.

ಚೀನಾ ಹೆಲಿಕಾಪ್ಟರ್‌ಗಳ ಹಾರಾಟ

ಚೀನಾ ಹೆಲಿಕಾಪ್ಟರ್‌ಗಳ ಹಾರಾಟ

ಸೋಮವಾರ ಹಾಗೂ ಮಂಗಳವಾರ (ಜೂನ್ 15,16 ) ನಡೆದ ಸಂಘರ್ಷದ ಬಳಿಕ, ಚೀನಾ ಸೇನೆಯ ಹೆಲಿಕಾಪ್ಟರ್‌ಗಳು ತನ್ನ ಸೇನೆಯ ಮೃತ ಯೋಧರ ಶವ ಸಾಗಿಸಲು ಹಾಗೂ ಗಾಯಗೊಂಡವರನ್ನು ರಕ್ಷಿಸಲು ಧಾವಿಸಿದೆ. ಚೀನಿ ಹೆಲಿಕಾಪ್ಟರ್‌ಗಳ ಹಾರಾಟವನ್ನು ಭಾರತೀಯ ಸೇನೆ ಗುರುತಿಸಿದೆ. ಗಲ್ವಾನ್‌ ಕಣಿವೆಯಲ್ಲಿ ಉಭಯ ದೇಶಗಳ ಸೇನೆ ಮುಖಾಮುಖಿಯಾಗಿದ್ದು, ಎರಡೂ ಸೇನೆಗಳಿಗೆ ಈ ಗುದ್ದಾಟದಲ್ಲಿ ಅಪಾರ ಹಾನಿ ಸಂಭವಿಸಿದೆ.

English summary
The situation in Eastern Ladakh after the death of Indian soldiers in the clashes is extremely grave now. It was already serious to begin with because of the way the PLA soldiers came and occupied Indian territory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X