6 ಸಂಸದೆಯರೊಂದಿಗೆ ಶಶಿ ತರೂರ್‌ ಸೆಲ್ಫಿ ಹುಟ್ಟಿಸಿತು ವಿವಾದ: ಕಾರಣವೇನು?

ನವದೆಹಲಿ, ನವೆಂಬರ್‌ 29: ಹಿರಿಯ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಆರು ಮಂದಿ ಸಂಸದೆರೊಂದಿಗೆ ಸೆಲ್ಫಿಯನ್ನು ತೆಗೆದು ಮಾಡಿದ ಟ್ವೀಟ್‌ ಈಗ ಬಾರಿ ವಿವಾದಕ್ಕೆ ಕಾರಣ ಆಗಿದೆ. ಶಶಿ ತರೂರ್‌ ಈ ಟ್ವೀಟ್‌ಗೆ ನೀಡಿರುವ ಶೀರ್ಷಿಕೆಯೇ ಈ ವಿವಾದಕ್ಕೆ ಕಾರಣವಾಗಿದೆ.

ಆರು ಮಂದಿ ಮಹಿಳಾ ಸಂಸದರೊಂದಿಗೆ ಸೆಲ್ಫಿಯನ್ನು ತೆಗೆದು ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ನಾಯಕ ಶಶಿ ತರೂರ್‌, "ಕೆಲಸ ಮಾಡಲು ಲೋಕಸಭೆ ಆಕರ್ಷಕ ಸ್ಥಳ ಅಲ್ಲ ಎಂದು ಯಾರು ಹೇಳಿದ್ದು," ಎಂದು ಪ್ರಶ್ನಿಸಿದ್ದಾರೆ. ಇದನ್ನು ಟೀಕೆ ಮಾಡಿರುವ ನೆಟ್ಟಿಗರು ಶಶಿ ತರೂರ್‌ ಸೆಕ್ಸಿಸಂ ಮಾಡುತ್ತಾರೆ ಎಂದು ಆರೋಪ ಮಾಡಿದ್ದಾರೆ.

ಮಹಿಳಾ ಸಂಸದರಾದ ಸುಪ್ರಿಯಾ ಸುಳೆ, ಪ್ರೀನೀತ್ ಕೌರ್, ತಮಿಳಚಿ ತಂಗಪಾಂಡಿಯನ್, ಮಿಮಿ ಚಕ್ರವರ್ತಿ, ನುಸ್ರತ್ ಜಹಾನ್ ರೂಹಿ ಮತ್ತು ಜ್ಯೋತಿಮಣಿ ಜೊತೆಗಿನ ಸೆಲ್ಫಿ ಫೋಟೋವೊಂದನ್ನು ಇಂದು ಬೆಳಗ್ಗೆ ಶಶಿ ತರೂರ್ ಟ್ವೀಟ್ ಮಾಡಿದ್ದು, ಇದರೊಂದಿಗೆ ಕೆಲಸ ಮಾಡಲು ಲೋಕಸಭೆ ಆಕರ್ಷಕ ಸ್ಥಳ ಅಲ್ಲ ಎಂದು ಯಾರು ಹೇಳಿದ್ದು ಎಂದಿದ್ದಾರೆ. ಇದು ಈಗ ವಿವಾದಕ್ಕೆ ಕಾರಣವಾಗಿದೆ.

Shashi Tharoor trolled for selfie with 6 women MPs with attractive place tweet

ಕ್ಷಮೆಯಾಚಿಸಿದ ಶಶಿ ತರೂರ್

"ಇಡೀ ಸೆಲ್ಫಿ ವಿಷಯವನ್ನು (ಮಹಿಳಾ ಸಂಸದರೊಂದಿಗೆ ಸೆಲ್ಫಿ) ಒಂದು ಹಾಸ್ಯವನ್ನಾಗಿ ಮಾಡಲಾಗಿದೆ. ಈ ಮಹಿಳಾ ಸಂಸದರು ಉತ್ಸಾಹದಲ್ಲಿ ಟ್ವೀಟ್‌ ಮಾಡಲು ನನ್ನಲ್ಲಿ ಹೇಳಿದರು. ಇದರಿಂದಾಗಿ ಕೆಲವರು ಮನ ನೊಂದಿದ್ದಾರೆ, ನನ್ನನ್ನು ಕ್ಷಮಿಸಿ, ಆದರೆ ಈ ಕಾರ್ಯಸ್ಥಳದ ಸೌಹಾರ್ದತೆಯ ಪ್ರದರ್ಶನದಲ್ಲಿ ಭಾಗಿಯಾಗಲು ನನಗೆ ಸಂತೋಷ ಆಗಿದೆ. ಇದೆಲ್ಲವೂ ಇಷ್ಟೇ," ಎಂದು ತಿಳಿಸಿದ್ದಾರೆ.

ಮಹಿಳಾ ಆಯೋಗದ ಮುಖ್ಯಸ್ಥೆಯ ಆಕ್ರೋಶ

ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಟ್ವೀಟ್‌ಗೆ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನೀವು ಮಹಿಳೆಯರನ್ನು ಆಕರ್ಷಣೆಯ ವಸ್ತುವನ್ನಾಗಿ ಮಾಡುವ ಮೂಲಕ ಸಂಸತ್ತು ಮತ್ತು ರಾಜಕೀಯದಲ್ಲಿ ಕೊಡುಗೆಯನ್ನು ಅವಮಾನಿಸು‌ತ್ತಿದ್ದೀರಿ," ಎಂದಿದ್ದಾರೆ, ಇನ್ನು ಮಹಿಳೆಯರನ್ನು ಆಕ್ಷೇಪ ಮಾಡುವುದನ್ನು ನಿಲ್ಲಿಸಿ ಎಂದು ಸುಪ್ರೀಂ ಕೋರ್ಟ್ ವಕೀಲರಾದ ಕರುಣಾ ನಂದಿ ಟ್ವೀಟ್‌ ಮಾಡಿದ್ದಾರೆ. ಈ ಬೆನ್ನಲ್ಲೇ ಶಶಿ ತರೂರ್‌ ಕ್ಷಮೆಯಾಚಿಸಿದ್ದಾರೆ.

ಇನ್ನು ಸುಪ್ರೀಂ ಕೋರ್ಟ್ ವಕೀಲರಾದ ಕರುಣಾ ನಂದಿ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಬಾಟ್ಮಿಂಟನ್‌ ಆಟಗಾರ್ತಿ ಅರ್ಜುನ ಅವರ್ಧೆ ಜ್ವಾಲಾ, "ನಿಜವಾಗಿ ಅಲ್ಲ ಕರುಣಾ. ನಾವು ಕೆಲವು ವಿಚಾರವನ್ನು ಹಗುರವಾಗಿ ತೆಗೆದುಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ಎಲ್ಲವನ್ನೂ ನಾವು ಬೇರೆ ರೀತಿಯಲ್ಲಿ ನೋಡಬಾರದು. ಇದು ಸಂಸತ್ತಿನಲ್ಲಿ ಸಾಮಾನ್ಯವಾಗಿ ಸ್ಟೀರಿಯೊಟೈಪ್ ಆಗಿರುವ ಎಲ್ಲಾ ಮಹಿಳೆಯರಿಗೆ ಒಂದು ಪ್ರಶಂಸೆಯ ಮಾತು ಆಗಿದೆ. ಇದು ಕೇವಲ ನನ್ನ ಅಭಿಪ್ರಾಯ," ಎಂದಿದ್ದಾರೆ.

Recommended Video

      KL Rahul ಹಾಗು Rashid Khanಗೆ ಎದುರಾಯಿತು ಭಾರೀ ಕಂಟಕ | Oneindia Kannada

      "ಲೋಕಸಭೆಯಲ್ಲಿ ಇರುವ ಮಹಿಳೆಯರು ನಿಮ್ಮ ಕೆಲಸದ ಸ್ಥಳವನ್ನು ಆಕರ್ಷಕವಾಗಿಸುವ ಅಲಂಕಾರಿಕ ವಸ್ತುಗಳಲ್ಲ. ಅವರೂ ಕೂಡಾ ಸಂಸತ್ ಸದಸ್ಯರು. ನೀವು ಬಹಳ ಅಗೌರವ ತೋರುತ್ತಿದ್ದೀರಿ ಹಾಗೂ ಲಿಂಗ ಸೆಕ್ಸಿಸ್ಟ್‌ ಆಗಿ ವರ್ತನೆ ಮಾಡುತ್ತಿದ್ದೀರಿ," ಎಂದು ಟ್ವೀಟಿಗರೊಬ್ಬರು ಆರೋಪ ಮಾಡಿದ್ದಾರೆ.

      "ಇಂತಹ ಸಂದರ್ಭದಲ್ಲಿ ನೀವು ಏನು ಮಾಡುತ್ತಿದ್ದೀರಿ. ಯಾರೂ ಕೂಡಾ ನೀವು ಟ್ವೀಟ್ ಮಾಡುವುದನ್ನು/ಫೋಟೋ ತೆಗೆಯುವುದನ್ನು ತಡೆಯಲಿಲ್ಲ. ಆದರೆ ಈ ದಿನವು ರೈತರಿಗೆ ಸಮರ್ಪಿಸಿದ ದಿನವಾಗಿದೆ," ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು "ಕೆಲಸ ಮಾಡಲು ಆಕರ್ಷಕ ಸ್ಥಳವೇ? ಇದು 2021 ಅಂಕಲ್?," ಎಂದು ಟೀಕೆ ಮಾಡಿದ್ದಾರೆ. "ಈ ಸಮಯದಲ್ಲಿ, ನೀವು ಹೆಚ್ಚಿನ ಮೀಮ್‌ಗಳನ್ನು ಕೇಳುತ್ತಿದ್ದೀರಿ," ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+