ತೆಹಲ್ಕಾ ತರುಣ್ ಗೆ ಮಧ್ಯಂತರ ಜಾಮೀನು ಸಿಕ್ತು!

Sexual Harassment Tehelka ex editor Tarun Tejpal absconding Goa cops raid,
ನವದೆಹಲಿ, ನ.29- ತೆಹಲ್ಕಾ ತರುಣ್ ಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಇತ್ತ ತರುಣ್ ತೇಜಪಾಲ್ ದಿಲ್ಲಿಯಲ್ಲಿ ಪೊಲೀಸರ ಕೈಗೆ ಸಿಗದೆ ಅಜ್ಞಾತ ಸ್ಥಳಕ್ಕೆ ತೆರಳಿರುವುದರ ಬೆನ್ನಿಗೇ, ಅತ್ತ ಗೋವಾದಲ್ಲಿ ಆತನ ಪರ ವಕೀಲರು ಗೋವಾದ ಪಣಜಿ ಕೋರ್ಟಿಗೆ ಇಂದು ಬೆಳಗ್ಗೆ ದೌಡಾಯಿಸಿ, ಜಾಮೀನು ಅರ್ಜಿ ಸಲ್ಲಿಸಿದರು.

ಕೋರ್ಟೂ ಸಹ ಅಷ್ಟೇ ಆತುರಾತುರವಾಗಿ ಅರ್ಜಿಯನ್ನು ಎತ್ತಿಹಿಡಿದಿದ್ದು, ಮಧ್ಯಾಹ್ನ 2 ವರೆಗೂ ತಾತ್ಕಾಲಿಕ ಜಾಮೀನು ನೀಡಿದೆ. ಇದರಿಂದ ತರುಣ್ ಬಂಧನಕ್ಕೆ ಸಿದ್ಧತೆ ನಡೆಸಿದ್ದ ಗೋವಾ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.

ಬೆಳಗಿನ ಸುದ್ದಿ: ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದಂತಹ ಗಂಭೀರ ಪ್ರಕರಣ ಎದುರಿಸುತ್ತಿರುವ ತೆಹಲ್ಕಾ ಪತ್ರಿಕೆಯ ಸಂಸ್ಥಾಪಕ ಸಂಪಾದಕ ತರುಣ್ ತೇಜ್ ಪಾಲ್ ಇನ್ನೂ ಗೋವಾ ಪೊಲೀಸರ ಕೈಗೆ ಸಿಕ್ಕಿಲ್ಲ.

ಚೋದ್ಯವೆಂದರೆ, ಪ್ರಕರಣ ಬೆಳಕಿಗೆ ಬಂದಾಗಿನಿಂದ ದೆಹಲಿಯಲ್ಲಿರುವ ತೇಜಪಾಲ್ ಮನೆಗೆ ದೆಹಲಿ ಪೊಲೀಸರು ಬಿಗಿಭದ್ರತೆ ಹಾಕಿ, ಆತನಿಗೆ ರಕ್ಷಣೆ ನೀಡಿದ್ದರು. ಇದೀಗ ದಿಲ್ಲಿ ಪೊಲೀಸರ ಕಣ್ಣಿಗೆ ಮಣ್ಣೆರಚಿ ತೇಜಪಾಲ್ ನಾಪತ್ತೆಯಾಗಿದ್ದಾರೆ.

ಆದರೆ ಜಾಮೀನು ರಹಿತ ವಾರಂಟ್ ಅನ್ನು ಹಿಡಿದು ದಿಲ್ಲಿಗೆ ಬಂದಿರುವ ಗೋವಾ ಪೊಲೀಸರ ತರುಣ್ ತೇಜಪಾಲ್ ವಾಸಸ್ಥಳ ಮತ್ತು ಆತನ ನಿಕಟವರ್ತಿಗಳ ಮನೆಗಳ ಮೇಲೆ ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ. ತೇಜಪಾಲ್ ಪತ್ನಿಯನ್ನು ವಿಚಾರಿಸಲಾಗಿ ಆಕೆ ತನ್ನ ಗಂಡ ಎಲ್ಲಿದ್ದಾನೆ, ಎಲ್ಲಿಗೆ ಹೋಗಿದ್ದಾನೆ ಎಂದು ಪೊಲೀಸರಿಗೆ ತಿಳಿಸುತ್ತಿಲ್ಲ.

ಈ ಮಧ್ಯೆ, ದಿಲ್ಲಿ ಹೈಕೋರ್ಟಿನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದು, ಅಲ್ಲಿ ತನಗೇನಾದರೂ ಜಾಮೀನು ಸಿಕ್ಕಿಬಿಟ್ಟರೆ ಎಂಬ high hopes ಆರೋಪಿ ತೇಜಪಾಲ್ ಅವರಿಗಿದೆ. ಹಾಗಾಗಿ ಇಂದು ಮಧ್ಯಾಹ್ನದ ವರೆಗೂ ಪೊಲೀಸರ ಜತೆ ಕಣ್ಣಾಮುಚ್ಚಾಲೆ ಆಡಲು ನಿರ್ಧರಿಸಿದಂತಿದೆ.

ಆದರೆ ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಗಂಭೀರ ಸ್ವರೂಪದ್ದಾಗಿದ್ದು, ಜಾಮೀನು ಸಿಗುವುದು ದುರ್ಲಭ. ಆದರೂ ತೇಜಪಾಲ್ ಒಂದು ಕೈನೋಡೋಣ ಅಂದುಕೊಂಡು ... ಇಂದು ಬೆಳಗ್ಗೆ ತಮ್ಮನ್ನು ಬಂಧಿಸಲು ಬಂದಿದ್ದ ಗೋವಾ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+