ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಯಾಣಿಕರ ಸಮಸ್ಯೆಗೆ ಪರಿಹಾರ: ರೈಲಿನಲ್ಲಿ ಶೀಘ್ರ ಸರ್ವೀಸ್ ಕ್ಯಾಪ್ಟನ್

|
Google Oneindia Kannada News

ನವದೆಹಲಿ, ಮಾರ್ಚ್ 5: ರೈಲುಗಳಲ್ಲಿರುವ ಸ್ವಚ್ಛತೆ ಕಾಣದ ಶೌಚಗೃಹಗಳು, ಬೋಗಿಗಳಲ್ಲಿ ಅನೈರ್ಮಲ್ಯ ವಾತಾವರಣ, ವಸ್ತುಗಳ ಕಳವು, ಕಿತ್ತಾಟ, ಮಹಿಳೆಯರ ಸುರಕ್ಷತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಮೌನವಾಗಿ ಸಹಿಸಿಕೊಳ್ಳುತ್ತಿರುವ ದಿನಗಳು ದೂರಾಗಲಿವೆ.

ಇದಕ್ಕಾಗಿ ಇಲಾಖೆ ಮೇಲೆ ಮತ್ತು ಎಕ್ಸ್ ಪ್ರೆಸ್ ರೈಲುಗಳು ಸೇರಿ ಎಲ್ಲಾ ರೈಲುಗಳಲ್ಲೂ ಸರ್ವೀಸ್ ಕ್ಯಾಪ್ಟನ್ ಗಳನ್ನು ನೇಮಿಸುವ ಬಗ್ಗೆ ಚಿಂತನೆ ನಡೆಸಿದೆ.

11 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ನೈಋತ್ಯ ರೈಲ್ವೆ11 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ನೈಋತ್ಯ ರೈಲ್ವೆ

ಸ್ವಚ್ಛತೆಯ ಕೊರತೆ, ಸುರಕ್ಷತೆಯ ಸಮಸ್ಯೆ ಸೇರಿ ಪ್ರಯಾಣಿಕರು ನೀಡುವ ಎಲ್ಲ ದೂರುಗಳನ್ನು ರೈಲಿನಲ್ಲೇ ಇರುವ ಸರ್ವೀಸ್ ಕ್ಯಾಪಟನ್ ಗಳು ಸ್ವೀಕರಿಸಿ ಸಂಬಂಧಪಟ್ಟವರ ಗಮನಕ್ಕೆ ತಂದು, ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಒದಗಿಸಲಿದ್ದಾರೆ.

Service captains in Indian railways Soon

ಕಳೆದ ವರ್ಷದ ಡಿಸೆಂಬರ್ ನಲ್ಲಿ ಆಯೋಜನೆಗೊಂಡಿದ್ದ ಎಲ್ಲ ರೈಲು ವಲಯಗಳ ಮುಖ್ಯಸ್ಥರ ಸಭೆಯಲ್ಲಿ ಸರ್ವೀಸ್ ಕ್ಯಾಪ್ಟನ್ ಗಳನ್ನು ನೇಮಿಸುವ ಸಲಹೆ ಕೇಳಿ ಬಂದಿತ್ತು. ಇದನ್ನು ಆಧರಿಸಿ ಇಂತಹ ಸಾಧ್ಯತೆಯ ಕುರಿತು ಅಧ್ಯಯನ ನಡೆಸಿ, ವರದಿ ಸಲ್ಲಿಸಲು ರೈಲ್ವೆ ಸಚಿವ ಪಿಯೂಶ್ ಗೋಯೆಲ್ ಹಿರಿಯಾಧಿಕಾರಿಗಳ ಸಮಿತಿ ರಚಿಸಿದ್ದರು. ಈ ಸಮಿತಿಯು ವರದಿ ಸಲ್ಲಿಸಿದ್ದು, ಅದರಲ್ಲಿ ಸರ್ವೀಸ್ ಕ್ಯಾಪಟನ್ ನೇಮಿಸುವುದು ಸೇರಿ ಪ್ರಯಾಣಿಕರ ಸೌಲಭ್ಯ ಹೆಚ್ಚಿಸಲು ಇನ್ನೂ ಹಲವು ಶಿಫಾರಸುಗಳನ್ನು ಮಾಡಿದೆ.

ಸರ್ವೀಸ್ ಕ್ಯಾಪ್ಟನ್ ಎಂದರೇನು? ರೈಲು ಸರ್ವೀಸ್ ಕ್ಯಾಪ್ಟನ್ ಎಂದರೆ, ರೈಲ್ವೆ ಮೇಲ್ವಿಚಾರರಿದ್ದಂತೆ, ಆಯಾ ರೈಲ್ವೆ ವಲಯಗಳ ಹಿರಿಯ ಅಧಿಕಾರಿಗಳ ಸಮಿತಿ, ತಮ್ಮ ವಲಯಗಳಲ್ಲಿ ಕಾರ್ಯನಿರ್ವಜಹಿಸುತ್ತಿರುವ ಜೂನಿಯರ್ ಎಂಜಿನಿಯರ್ ಅಥವಾ ಮಾಸ್ಟರ್ ಕ್ರಾಫ್ಟ್ ಮ್ಯಾನ್ ಹುದ್ದೆಯಲ್ಲಿರುವವವರ ನಿರ್ದಿಷ್ಟ ಸಂಖ್ಯೆಯ ಅಧಿಕಾರಿಗಳನ್ನು ಸರ್ವೀಸ್ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಿದೆ. ಸಮವಸ್ತ್ರದಲ್ಲಿರುವುದರಿಂದ ಅಧಿಕಾರಿಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ.

English summary
Indian railways is planning facilitate service captions in trains to taking care of passengers to assist their basic needs while traveling
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X