6ನೇ ಹಂತದ ಚುನಾವಣೆ: ಗಂಭೀರ್, ಸಿಂಧಿಯಾ ಶ್ರೀಮಂತ ಅಭ್ಯರ್ಥಿಗಳು

ನವದೆಹಲಿ, ಮೇ 4: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಂತೆಯೇ ಆಸ್ತಿ ಎಷ್ಟಿದೆ ಎಂದು ನೋಡುವ ಕುತೂಹಲ ಎಲ್ಲರಲ್ಲಿಯೂ ಇದ್ದೇ ಇದೆ.

ಮೇ 12ರಂದು ನಡೆಯುವ 6ನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ, ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಹಾಗೂ ಕಾಂಗ್ರೆಸ್ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರೇ ಹೆಚ್ಚು ಶ್ರೀಮಂತ ಅಭ್ಯರ್ಥಿಗಳಾಗಿದ್ದಾರೆ.

ಜ್ಯೋತಿರಾದಿತ್ಯ ಸಿಂಧಿಯಾ ಬಳಿ 374 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅದರಲ್ಲಿ 45 ಕೋಟಿ ರೂ ಅವಷ್ಟು ಚರಾಸ್ತಿ, 32 ಕೋಟಿಯಷ್ಟು ಸ್ಥಿರಾಸ್ತಿ ಹೊಂದಿದ್ದಾರೆ. ಇನ್ನು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರ ಬಳಿ ಒಟ್ಟು 147 ಓಟಿ ಮೌಲ್ಯದ ಆಸ್ತಿ ಇದೆ. ಗೌತಮ್ ಗಂಭೀರ್ ಅವರ ಒಟ್ಟು ಚರಾಸ್ತಿ 116.38 ಕೋಟಿ, ಅವರ ಪತ್ನಿ ಅವರ ಒಟ್ಟು ಚರಾಸ್ತಿ 1.15 ಕೋಟಿ. ಗಂಭೀರ್ ಅವರ ಒಟ್ಟು ಸ್ಥಿರಾಸ್ತಿ 21 ಕೋಟಿ ಆಸ್ತಿ ಹೊಂದಿದ್ದಾರೆ.

Scindia,Gambhir richest candidates contesting in Lok Sabha sixth phase poll

ಗಂಭೀರ್ ಅವರಿಗೆ 34.15 ಕೋಟಿ ಸಾಲವಿದೆ. ಜೊತೆಗೆ 1.32 ಕೋಟಿ ಸರ್ಕಾರಿ ಶುಲ್ಕ ಬಾಕಿ ಉಳಿಸಿಕೊಂಡಿದ್ದಾರೆ. ಗಂಭೀರ್ ಅವರ ಬಳಿ 5.21 ಲಕ್ಷ ಮೌಲ್ಯದ ಚಿನ್ನಾಭರಣ ಇದೆ. ಗಂಭಿರ್ ಪತ್ನಿ ಬಳಿ 23.98 ಲಕ್ಷ ಮೌಲ್ಯದ ಆಭರಣಗಳಿವೆ.

ಗೌತಮ್ ಗಂಭೀರ್ ಅವರ ಬಳಿ ಐದು ಕಾರು ಮತ್ತು ಒಂದು ಬೈಕ್ ಇದೆ. ಬಿಎಂಡಬ್ಲು, ಆಡಿ ಮತ್ತು ಮಾರುತಿ ಬೊಲೆನೋ ಕಾರನ್ನು ಅವರು ಖರೀದಿಸಿದ್ದಾರೆ ಇವುಗಳ ಒಟ್ಟು ಮೌಲ್ಯ 1.27 ಕೋಟಿ. ಮಾರುತಿ ಎಸ್‌ಎಕ್‌4, ಬೊಲೆನೊ ಮತ್ತು ಕೆಟಿಎಂ ಬೈಕ್ ಉಡುಗೊರೆಯಾಗಿ ಅವರಿಗೆ ಸಿಕ್ಕಿದೆ.

ಆರನೇ ಹಂತದ ಅಭ್ಯರ್ಥಿಗಳ ಪೈಕಿ ಅತಿ ಕಡಿಮೆ ಎಂದರೆ 3.41 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದವರಿದ್ದಾರೆ. ಒಟ್ಟು 69 ಅಭ್ಯರ್ಥಿಗಳು ಪ್ಯಾನ್ ಕಾರ್ಡ್ ಮಾಹಿತಿಯನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಬಿಜೆಪಿಯ 54 ಅಭ್ಯರ್ಥಿಗಳ ಪೈಕಿ 46 ಅಭ್ಯರ್ಥಿಗಳು, ಕಾಂಗ್ರೆಸ್‌ನ 46 ಅಭ್ಯರ್ಥಿಗಳ ಪೈಕಿ 37 ಅಭ್ಯರ್ಥಿಗಳು, ಬಿಎಸ್‌ಪಿಯ 49 ಅಭ್ಯರ್ಥಿಗಳ ಪೈಕಿ 31 ಅಭ್ಯರ್ಥಿಗಳು, ಆಮ್ ಆದ್ಮಿ ಪಕ್ಷದ 12 ಅಭ್ಯರ್ಥಿಗಳ ಪೈಕಿ 6 ಅಭ್ಯರ್ಥಿಗಳು, 307 ಸ್ವತಂತ್ರ ಅಭ್ಯರ್ಥಿಗಳ ಪೈಕಿ 71 ಅಭ್ಯರ್ಥಿಗಳ ಬಳಿ 1 ಕೋಟಿ ರಗೂ ಅಧಿಕ ಮೌಲ್ಯದ ಆಸ್ತಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+