ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಸಿ/ಎಸ್ಟಿ ಮೀಸಲಾತಿ ಮತ್ತೆ 10 ವರ್ಷಕ್ಕೆ ಮುಂದುವರಿಕೆ

|
Google Oneindia Kannada News

ನವದೆಹಲಿ, ಡಿಸೆಂಬರ್ 04: ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡುವ ಮೀಸಲಾತಿಯನ್ನು ಮತ್ತೆ 10 ವರ್ಷಗಳಿಗೆ ಮುಂದುವರೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸಂವಿಧಾನದ 95 ನೇ ತಿದ್ದುಪಡಿ ಕಾಯ್ದೆ ಅನ್ವಯ, ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ನೀಡುವ ರಾಜಕೀಯ ಮೀಸಲಾತಿಯನ್ನು ಮುಂದುವರೆಸಲು ತೀರ್ಮಾನ ಮಾಡಲಾಗಿದೆ.

SPG ಪಾಸ್: ರಾಜ್ಯಸಭೆಯಲ್ಲಿ ರಗಡ್ ಗಲಾಟೆ, ಕಾಂಗ್ರೆಸ್ ಸಭಾತ್ಯಾಗ! SPG ಪಾಸ್: ರಾಜ್ಯಸಭೆಯಲ್ಲಿ ರಗಡ್ ಗಲಾಟೆ, ಕಾಂಗ್ರೆಸ್ ಸಭಾತ್ಯಾಗ!

ಈ ಹಿಂದೆ ಮೀಸಲಾತಿ ಅವಧಿಯನ್ನು ಜನವರಿ 26, 2010 ರಂದು ಪರಿಷ್ಕರಣೆ ಮಾಡಿ 10 ವರ್ಷಗಳಿಗೆ ಮುಂದುವರೆಸಲಾಗಿತ್ತು, ಜನವರಿ 25, 2020 ರವರೆಗೆ ಮುಕ್ತಾಯಗೊಳ್ಳಲಿತ್ತು. ಈಗ ಮತ್ತೆ ಈ ಮೀಸಲಾತಿಯನ್ನು ಜನವರಿ 25. 2020 ರಿಂದ ಮುಂದುವರೆದು, ಜನವರಿ 25, 2030 ರವರೆಗೆ ಇರಲಿದೆ.

SC,ST reservation Continues To Next 10 years

ದೇಶದಲ್ಲಿ ಒಟ್ಟು 84 ಪರಿಶಿಷ್ಟ ಜಾತಿ ಮತ್ತು 47 ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಕ್ಷೇತ್ರಗಳಿವೆ. ದೇಶದ ಒಟ್ಟು 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಒಟ್ಟು 4116 ವಿಧಾನಸಭಾ ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿಗೆ 614 ಮತ್ತು ಪರಿಶಿಷ್ಟ ಪಂಗಡಕ್ಕೆ 554 ಕ್ಷೇತ್ರಗಳು ಮೀಸಲಿರಿಸಲಾಗಿವೆ.

ಕರ್ನಾಟಕದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿವೆ. ಅದರಲ್ಲಿ ಪರಿಶಿಷ್ಟ ಜಾತಿಗೆ 3 (ಕಲಬುರಗಿ, ಚಿತ್ರದುರ್ಗ, ಚಾಮರಾಜನಗರ) ಕ್ಷೇತ್ರ ಮತ್ತು ಪರಿಶಿಷ್ಟ ಪಂಗಡಕ್ಕೆ 2 (ರಾಯಚೂರು, ಬಳ್ಳಾರಿ) ಕ್ಷೇತ್ರ ಮೀಸಲಾಗಿವೆ.

ಕಾರ್ಪೋರೇಟ್ ತೆರಿಗೆ ಕಡಿತ ಲೋಕಸಭೆಯಲ್ಲಿ ಅಂಗೀಕಾರಕಾರ್ಪೋರೇಟ್ ತೆರಿಗೆ ಕಡಿತ ಲೋಕಸಭೆಯಲ್ಲಿ ಅಂಗೀಕಾರ

ರಾಜ್ಯ ವಿಧಾನಸಭೆಯಲ್ಲಿ ಒಟ್ಟು 224 ಕ್ಚೇತ್ರಗಳಿದ್ದು, 30 ಜಿಲ್ಲೆಗಳಲ್ಲಿ 51 ಮೀಸಲು ಕ್ಷೇತ್ರಗಳಾಗಿವೆ. ಅದರಲ್ಲಿ ಪರಿಶಿಷ್ಟ ಜಾತಿ-26, ಪರಿಶಿಷ್ಟ ಪಂಗಡ-15 ಕ್ಷೇತ್ರಗಳಾಗಿವೆ.

English summary
The Central Government Has Decided To Continue The Reservation For Scheduled Castes And Scheduled Tribes In The Lok Sabha And State Assemblies For Another 10 Years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X