ಶ್ರೀದೇವಿ ಸಾವಿನ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ
ನವದೆಹಲಿ, ಮೇ 11: ಬಾಲಿವುಡ್ ನಟಿ ಶ್ರೀದೇವಿ ಅವರ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಯಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಫೆಬ್ರವರಿ 24 ರಂದು ದುಬೈನ ಹೊಟೆಲ್ ವೊಂದರಲ್ಲಿ ಸಾವಿಗೀಡಾದ ಶ್ರೀದೇವಿ ಅವರ ಹತ್ಯೆ ಅನುಮಾನಾಸ್ಪದವಾಗಿದ್ದು, ಈ ಕುರಿತು ತನಿಖೆ ನಡೆಯಬೇಕೆಂದು ಸುನಿಲ್ ಸಿಂಗ್ ಎಂಬುವವರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠ, ಅರ್ಜಿ ಯಾವುದೇ ರೀತಿಯಲ್ಲೂ ಸಮರ್ಪಕವಲ್ಲದ ಕಾರಣ ಅದನ್ನು ವಜಾಗೊಳಿಸಿದೆ.

ಶ್ರೀದೇವಿ ಹೆಸರಿನಲ್ಲಿದ್ದ 240 ಕೋಟಿ ರೂ. ವಿಮೆಯ ಕುರಿತು ಉಲ್ಲೇಖಿಸಿರುವ ಸಿಂಗ್ ಅವರ ಸಾವು ಸಹಜವಾದ್ದಲ್ಲ ಎಂಬ ಅನುಮಾನ ವ್ಯಕ್ತಪಡಿಸಿದ್ದರು.
ದುಬೈಯ ಹೊಟೇಲ್ ವೊಂದರಲ್ಲಿ ತಂಗಿದ್ದ 54 ವರ್ಷದ ಶ್ರೀದೇವಿ ಬಾತ್ ಟಬ್ಬಿನಲ್ಲಿ ಮುಳುಗಿ ಸಾವಿಗೀಡಾಗಿದ್ದರು. ಅವರು ಆಕಸ್ಮಿಕವಾಗಿ ಮುಳುಗಿ ಸಾವಿಗೀಡಾಗಿದ್ದರೆಂದು ಮರಣೋತ್ತರ ಪರೀಕ್ಷೆಯ ವರದಿಗಳೂ ಹೇಳಿದ್ದವು.












Click it and Unblock the Notifications