ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಟಿ ರಾಗಿಣಿ ಜಾಮೀನು ಅರ್ಜಿ ಮತ್ತೊಂದು ವಾರ ಮೂಂದೂಡಿದ ಸುಪ್ರೀಂಕೋರ್ಟ್

|
Google Oneindia Kannada News

ಬೆಂಗಳೂರು , ಜನವರಿ 08: ಜಾಮೀನು ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ನಟಿ ರಾಗಿಣಿ ದ್ವಿವೇದಿಗೆ ಮತ್ತೆ ಅದೃಷ್ಟ ಕೈಕೊಟ್ಟಿದೆ. ಜಾಮೀನು ನಿರಾಕರಿಸಿ ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿರುವ ರಾಗಿಣಿ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದಿನ ವಾರಕ್ಕೆ ಮುಂದೂಡಿದೆ. ಸ್ಯಾಂಡಲ್ ವುಡ್ ಪ್ರಕರಣದಲ್ಲಿ ಈಗಾಗಲೇ ಕೆಲ ಪ್ರಮುಖ ಅರೋಪಿಗಳು ಜಾಮೀ‌ನು ಪಡೆದಿದ್ದಾರೆ. ಹೀಗಾಗಿ ತನಗೂ ಜಾಮೀನು ಸಿಗಬಹುದು ಎಂದೇ ಭಾವಿಸಿದ್ದ ರಾಗಿಣಿ ಆಸೆ‌ ಕಮರಿದಂತಾಗಿದೆ. ಅನಾರೋಗ್ಯಕ್ಕೆ ಒಳಗಾಗಿದ್ದ ರಾಗಿಣಿ ಇತ್ತೀಚೆಗೆ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿ ಜೈಲಿಗೆ ತೆರಳಿದ್ದಳು.‌

ಜಸ್ಟೀಸ್ ಎಲ್. ನಾಗೇಶ್ವರ ರಾವ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ರಾಗಿಣಿ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿತು. ಜಾಮೀನು ಕೋರಿ ರಾಗಿಣಿ ಸಲ್ಲಿಸಿದ್ದ ಅರ್ಜಿ ಮುಂದಿನ ವಾರಕ್ಕೆ ಪೀಠ ಮುಂದೂಡಿತು.
ಸ್ಯಾಂಡಲ್ ವುಡ್ ಡ್ರಗ್ ಜಾಲ ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ರಾಗಿಣಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಮೆಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ತೀಂಕೋರ್ಟ್ ತೀರ್ಪನ್ನು ಜನವರಿ 08 ಕ್ಕೆ ಕಾಯ್ದಿರಿಸಿತ್ತು.‌

ಇದೀಗ ಮತ್ತೆ ಒಂದು ವಾರ ಕಾಲ ಅರ್ಜಿ‌ಮುಂದೂಡಿದ್ದು.‌ ರಾಗಿಣಿ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಬೇಕಿದೆ. ನಟಿ ರಾಗಿಣಿ ಡ್ರಗ್ ಸೇವನೆ ಹಾಗೂ ಜಾಲದ ಜತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಟಿಯರಾದ ರಾಗಿಣಿ, ಸಂಜನಾ ಬಂಧನಕ್ಕೆ ಒಳಗಾಗಿದ್ದರು. ಸುಳ್ಳು ಪ್ರಕರಣದಲ್ಲಿ ನನ್ನ ಸಿಲುಕಿಸಲಾಗಿದೆ ಎಂದು ರಾಗಿಣಿ ಪರ ವಕೀಲರು ವಾದ ಮಂಡಿಸಿದ್ದರು.

 SC adjourns hearing on actress Ragini Dwivedis bail plea

ಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತುಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತು

ರಾಗಿಣಿ ಬಂಧನಕ್ಕೆ ಒಳಗಾಗಿ 90 ದಿನ ಕಳೆದರೂ ಯಾವುದೇ ಮಾದಕ ವಸ್ತು ಸಿಕ್ಕಿಲ್ಲ.‌ಹೀಗಾಗಿ ಜಾಮೀನು ನೀಡುವಂತೆ ನ್ಯಾಯಾಲಯವನ್ನು ಕೋರಿದ್ದರು. ಇದೇ ಡ್ರಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ನಟಿ ಸಂಜನಾ ಗೆ ಅನಾರೋಗ್ಯದ ಆಧಾರದ ಮೇಲೆ ಷರತ್ತು ಬದ್ಧ ಜಾಮೀನು ನೀಡಿ ಹೈಕೋರ್ಟ್ ಆದೇಶ ನೀಡಿತ್ತು.

English summary
The supreme court on Friday adjourned the hearing to next week on a petition filed by actress Ragini, seeking bail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X