ಇಂದಿನಿಂದ 1000 ರು ನೋಟು ಬಳಕೆಯಿಲ್ಲ, 500ರು ಎಲ್ಲಿ ಬಳಸಬಹುದು?

Posted By:
Subscribe to Oneindia Kannada

ನವದೆಹಲಿ, ನವೆಂಬರ್ 25: ನ.25ರಿಂದ ದೇಶಾದ್ಯಂತ ರು 1000 ನೋಟುಗಳ ಚಲಾವಣೆ ಪೂರ್ಣವಾಗಿ ನಿಲ್ಲಿಸಲಾಗಿದೆ. ಹಾಗಾದರೆ ಹಣದ ವ್ಯವಹಾರಕ್ಕೆ ಏನು ಮಾಡಬೇಕು ಎಂಬ ಪ್ರಶ್ನೆ ಕಾಡದೇ ಇರದು. ಇದಕ್ಕೆ ಡಿ.15 ವರೆಗೆ ರು 500 ನೋಟಿನ ಚಲಾವಣೆ ಮುಂದುವರೆಸಲಾಗಿದೆ. ಹಾಗೆಯೇ ಹಣಕಾಸು ಸಚಿವಾಲಯ ಕೆಲವು ನಿರ್ದೇಶನಗಳನ್ನು ನೀಡಿದೆ.

ಈ ಬಗ್ಗೆ ಹಣಕಾಸು ಸಚಿವಾಲಯದಲ್ಲಿ ನಿರ್ಧಾರ ತೆಗೆದುಕೊಂಡಿದ್ದು, ಹಳೆಯ ನೋಟುಗಳಲ್ಲಿ ರು 1000 ನೋಟುಗಳನ್ನು ಪೂರ್ಣವಾಗಿ ನಿಷೇದಿಸಲಾಗಿದೆ. ಅಂದರೆ ಬ್ಯಾಂಕಿನಲ್ಲಿ ಬಿಟ್ಟು ಇನ್ನೆಲ್ಲಿಯೂ ಇದರ ಬಳಕೆ ಅಸಾಧ್ಯ. ಹಾಗೆಯೇ ಮೊಬೈಲ್ ರೀಚಾರ್ಜ್ ನಿಂದ ಹಿಡಿದು ರೇಷನ್ ಅಂಗಡಿಯ ವರೆಗೆ ಕೆಲವೊಂದು ನಿರ್ದೇಶನವನ್ನು ಹೇಳಿದೆ.

Rs 1000 notes can't be used now, Rs 500 will live on till Dec 15

ಕೇಂದ್ರ ಸರ್ಕಾರವು ನೋಟು ನಿಷೇಧದ ಬಗ್ಗೆ ಇಲ್ಲಿಯವರೆಗೆ ಕೆಲವು ಸಡಿಲಿಕೆಯನ್ನು ಮಾಡಿದ್ದು ಕೆಲವು ಅನಿವಾರ್ಯದ ಸಂದರ್ಭಲ್ಲಿ ನೋಟು ಚಲಾವಣೆ ಅನುಮತಿಯನ್ನು ನೀಡಿತ್ತು. ಅದರೆ ಶುಕ್ರವಾರದಿಂದ ಪೂರ್ಣವಾಗಿ ರು 1000 ನೋಟಿನ ಚಲಾವಣೆಯನ್ನು ನಿಲ್ಲಿಸಿದೆ.

ಬ್ಯಾಂಕುಗಳಲ್ಲಿ ಹಣದ ಬದಲಾವಣೆಗೆ ಇಷ್ಟು ದಿನ ಅವಕಾಶ ನೀಡಿತ್ತು ಆದರೆ ಹಣದ ಬದಲಾವಣೆಗಾಗಿ ಜನಸಂಖ್ಯೆ ಕಡಿಮೆಯಾಗಿರುವ ಕಾರಣ ಜನರು ತಮ್ಮ ಬಳಿ ಇರುವ ಹಳೇ ನೋಟುಗಳನ್ನು ಬ್ಯಾಂಕಿನಲ್ಲಿ ಡೆಪಾಸಿಟ್ ಮಾಡಲು ಮಾತ್ರ ಅವಕಾಶ ನೀಡಿದೆ.

ಹಣಕಾಸು ಸಚಿವಾಲಯ ಇನ್ನು ಕೆಲವು ಮಹತ್ವ ನಿರ್ಧಾರಗಳನ್ನು ತೆಗೆದುಕೊಂಡಿದ್ದು ಅದರ ಅಂಶಗಳು ಮುಂದಿನಂತಿವೆ.

ನಿರ್ದೇಶನಗಳು:

  • ಎಲ್ಲೆಲ್ಲಿ ಸಾವಿರ ನೋಟುಗಳನ್ನು ತೆಗೆದುಕೊಳ್ಳುತ್ತಿದ್ದರೋ ಅಲ್ಲಿ ಇನ್ನು ಮುಂದೆ ಐನೂರು ರು ನೋಟುಗಳ ಚಲಾವಣೆ.
  • ಕೇಂದ್ರ ಸರ್ಕಾರದ ಶಾಲೆಗಳ ವಿಧ್ಯಾರ್ಥಿಗಳಿಗೆ ಶಾಲಾಶುಲ್ಕ ರು 2000 ದ ವರೆಗೆ ಮಿತಿಗೊಳಿಸಿದೆ. ಹಾಗೆಯೇ ಸರ್ಕಾರಿ, ಮುನ್ಸಿಪಾಲಿಟಿ ಶಾಲೆಯಲ್ಲಿಯೂ ತರುವಂತೆ ಮಾಡಿದೆ.
  • ಪ್ರೀಪೇಡ್ ಮೊಬೈಲ್ ಟಾಪ್ ಅಪ್ ಬಿಲ್ಲುಗಳನ್ನು ರು 500ಕ್ಕೆ ಮಿತಿಗೊಳಿಸಿದೆ.
  • ಒಂದು ಬಾರಿಗೆ ರು 5000 ಮಿತಿಯಲ್ಲಿ ಸಹಕಾರಿ ಅಂಗಡಿಗಳಲ್ಲಿ ವಸ್ತುಗಳನ್ನು ಕೊಳ್ಳಲು ಮಾತ್ರ ಅವಕಾಶ.
  • ಕರೆಂಟ್ ಮತ್ತು ನೀರಿನ ಉಳಿಕೆ ಬಾಕಿಯನ್ನು ಪಾವತಿಸಲು ಈಗಿರುವ ನಿಯಮಗಳನ್ನೇ ಮುಂದುವರೆಸುವುದು.
  • ಟ್ರಾನ್ಸ್ ಪೋರ್ಟ್, ಹೈವೆಗಳಲ್ಲಿ, ಟೋಲ್ ಗಳಲ್ಲಿ ಡಿ.2 ರವರೆಗೆ ಶುಲ್ಕ ಉಚಿತ ನಂತರ ಡಿ.15ರ ವರೆಗೆ ರು 500ರಲ್ಲಿಯೇ ಹಣ ಪಾವತಿಗೆ ಅವಕಾಶ.
  • ಒಂದು ವಾರಕ್ಕೆ ವಿದೇಶಿಗಳು ರು 5000 ಹಣವನ್ನು ಮಾತ್ರ ಬದಲಾಯಿಸಿಕೊಳ್ಳಲು ಅವಕಾಶ ಅದನ್ನು ಅವರ ಪಾಸ್ ಪೊರ್ಟಿನಲ್ಲಿ ಎಂಟ್ರಿ ಮಾಡಲಾಗುವುದು ಎಂದು ಆರ್ ಬಿಐ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Ministry of Finance today took decisions relating to the ban on old Rs 500 and Rs 100 currency notes. The MoS tweeted the details, among which the top-up limit of pre-paid mobile has been set at Rs 500 per top-up.
Please Wait while comments are loading...