ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಪ್ಪಂದ ಉಲ್ಲಂಘಿಸಿದ ರಿಲಯನ್ಸ್‌ ವಿರುದ್ಧ ಕ್ರಮ: ನೌಕಾದಳ ಮುಖ್ಯಸ್ಥ

|
Google Oneindia Kannada News

ನವದೆಹಲಿ, ಡಿಸೆಂಬರ್ 03: ಭಾರತೀಯ ನೌಕಾದಳಕ್ಕೆ ಕಡಲ ತಡಿಯ ಗಸ್ತು ವಾಹನ ನಿರ್ಮಿಸಿಕೊಡುವುದಾಗಿ ಹೇಳಿ ವಿಳಂಬ ಮಾಡಿರುವ ರಿಲಯನ್ಸ್‌ ನೇವಲ್ ಮತ್ತು ಎಂಜಿನಿಯರಿಂಗ್ ಸಂಸ್ಥೆ ಮೇಲೆ ನಿಯಮಬದ್ಧವಾಗಿ ಕ್ರಮ ಜರುಗಿಸಲಾಗುವುದು ಎಂದು ಭಾರತೀಯ ನೌಕಾದಳದ ಮುಖ್ಯಸ್ಥರು ಹೇಳಿದ್ದಾರೆ.

ಪರೀಕ್ಷೆ ಮುಗಿಸಿ ಸಾಗರಕ್ಕಿಳಿದ ಭಾರತದ ಅರಿಹಂತ್‌, ವೈರಿಗಳಿಗೆ ನಡುಕ ಪರೀಕ್ಷೆ ಮುಗಿಸಿ ಸಾಗರಕ್ಕಿಳಿದ ಭಾರತದ ಅರಿಹಂತ್‌, ವೈರಿಗಳಿಗೆ ನಡುಕ

ವಾರ್ಷಿಕ ನೌಕಾದಿವಸದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನೌಕಾದಳದ ಮುಖ್ಯಸ್ಥ ಸುನಿಲ್ ಲಂಬಾ, ಅನಿಲ್ ಅಂಬಾನಿ ಒಡೆತನದ ರಿಲಯನ್ಸ್‌ ಸಂಸ್ಥೆಯನ್ನೂ ಸಹ ಇತರ ಸಂಸ್ಥೆಗಳ ತೆರನಾಗಿಯೇ ವರ್ತಿಸಲಾಗುವುದು ತಡವಾಗಿ ಡೆಲಿವರಿ ನೀಡುತ್ತಿರುವುದಕ್ಕೆ ಅವರು ಶಿಕ್ಷೆ ಅನುಭವಿಸಬೇಕು ಎಂದಿದ್ದಾರೆ.

ಭಾರತದ ಕಡಲಿನ ಗಡಿಯಲ್ಲಿ ಹೈ ಅಲರ್ಟ್ : ಲಷ್ಕರ್ ದಾಳಿ ಶಂಕೆ ಭಾರತದ ಕಡಲಿನ ಗಡಿಯಲ್ಲಿ ಹೈ ಅಲರ್ಟ್ : ಲಷ್ಕರ್ ದಾಳಿ ಶಂಕೆ

ಒಪ್ಪಂದದ ಪ್ರಕಾರ ಹೇಳಿದ ಸಮಯಕ್ಕಿಂತ ತಡವಾಗಿ ಗಸ್ತು ಹಡಗುಗಳನ್ನು ನೀಡುತ್ತಿರುವ ಕಾರಣ ರಿಲಯನ್ಸ್‌ ನೇವಲ್ ಮತ್ತು ಎಂಜಿನಿಯರಿಂಗ್ ಸಂಸ್ಥೆಯು ನೀಡಿದ್ದ ಬ್ಯಾಂಕು ಖಾತರಿಯನ್ನು ನಗದು ಮಾಡಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.

reliance fail to deliver offshore patrol vessel intime to Navy

2500 ಕೋಟಿ ಮೌಲ್ಯದ ಕಡಲತಡಿಯ ಗಸ್ತು ಹಡಗುಗಳನ್ನು ನೌಕಾದಳಕ್ಕೆ ನೀಡುವ ಒಪ್ಪಂದ ಆಗಿರುವುದು 2011. ಆಗ ಈ ಒಪ್ಪಂದವು ಪಿಪಾವಾವ್ ಡಿಫೆನ್ಸ್‌ ಸಂಸ್ಥೆಯ ಜೊತೆ ಆಗಿತ್ತು. ನಂತರ ಆ ಸಂಸ್ಥೆಯನ್ನು ಅನಿಲ್ ಅಂಬಾನಿ ಅವರ ರಿಲಯನ್ಸ್‌ ಸ್ವಾಧೀನಪಡಿಸಿಕೊಂಡಿತು.

ಅಲೆಯ ಅಬ್ಬರಕ್ಕೆ ಸಿಕ್ಕರೂ ಬದುಕಿಬಂದ ಕಮಾಂಡರ್ ಅಭಿಲಾಶ್! ಅಲೆಯ ಅಬ್ಬರಕ್ಕೆ ಸಿಕ್ಕರೂ ಬದುಕಿಬಂದ ಕಮಾಂಡರ್ ಅಭಿಲಾಶ್!

2015 ರಲ್ಲಿ ಮೊದಲ ಹಡಗು ಡೆಲಿವರಿ ಕೊಡಬೇಕಿತ್ತು. ಆದರೆ ಎರಡು ಹಡಗುಗಳು ಕಳೆದ ವರ್ಷದ ಜುಲೈನಲ್ಲಿ ಎರಡು ಹಡಗುಗಳು ನೌಕಾದಳ ಸೇರಿದ್ದವು.

English summary
Reliance naval and engineering limited failed to deliver offshore patrol vessel to Indian Navy intime. Navy chief said that we will take action against the reliance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X