• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಯಲ್ಲಿ ಒಂದೇ ದಿನ 5475 ಕೊರೊನಾ ಸೋಂಕಿತರು ಪತ್ತೆ, 91 ಸಾವು

|

ನವದೆಹಲಿ, ನವೆಂಬರ್ 27: ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ಒಂದು ದಿನದಲ್ಲಿ 5475 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಆರ್‌ಟಿ-ಪಿಸಿಆರ್ ಪರೀಕ್ಷೆ 28 ಸಾವಿರದ ಗಡಿ ದಾಟಿದೆ. 91 ಮಂದಿ ಸಾವನ್ನಪ್ಪಿದ್ದು, ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 8811 ಇದೆ.

ದೆಹಲಿಯಲ್ಲಿ ಒಂದೇ ತಿಂಗಳಲ್ಲಿ 2300 ಮಂದಿ ಕೊರೊನಾ ಸೋಂಕಿಗೆ ಬಲಿ

ಪಾಸಿಟಿವಿಟಿ ಪ್ರಮಾಣ ಶೇ.8.65ರಷ್ಟಿದೆ, ಬುಧವಾರ 8.49ರಷ್ಟಿತ್ತು. ನಗರದಲ್ಲಿ 63,266 ಪರೀಕ್ಷೆ, ಅದರಲ್ಲಿ 28,897 ಆರ್‌ಟಿ ಪಿಸಿಆರ್ ಪರೀಕ್ಷೆ ನಡೆಸಲಾಗಿದೆ. 34,369 ರಾಪಿಡ್ ಅಂಟಿಜನ್ ಪರೀಕ್ಷೆ ನಡೆಸಲಾಗಿದೆ. ನವೆಂಬರ್ 18ರಂದು 131 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದರು.

5,51,262 ಕೊರೊನಾ ಸೋಂಕಿತರಿದ್ದಾರೆ. 5,03,717 ಮಂದಿ ಗುಣಮುಖರಾಗಿದ್ದಾರೆ. ದೆಹಲಿಯಲ್ಲಿ 38,734 ಸಕ್ರಿಯ ಪ್ರಕರಣಗಳಿವೆ. ದೆಹಲಿಯಲ್ಲಿ ಪ್ರತಿ ನಿಮಿಷಕ್ಕೆ ಓರ್ವ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಡುತ್ತಿದ್ದಾರೆ ಎನ್ನುವ ಆತಂಕಕಾರಿ ವಿಷಯ ತಿಳಿದುಬಂದಿದೆ.

ಕನಿಷ್ಠ ಐದು ಮಂದಿ ಪ್ರತಿ ಗಂಟೆಗೆ ಮೃತಪಡುತ್ತಿದ್ದಾರೆ.ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಮೃತಪಟ್ಟಿರುವ ಒಟ್ಟು ಸಂಖ್ಯೆಯ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ವಿಶ್ಲೇಷಣೆ ನಡೆಸಿದೆ.

ದೆಹಲಿಯಲ್ಲಿ ಕಳೆದ ಒಂದು ದಿನದಲ್ಲಿ 121 ಮಂದಿ ಮೃತಪಟ್ಟಿದ್ದಾರೆ. ಶನಿವಾರ 111 ಮಂದಿ ಮೃತಪಟ್ಟಿದ್ದರು. ಶುಕ್ರವಾರ 118, ನವೆಂಬರ್ 18 ರಂದು 131 ಮಂದಿ ಮೃತಪಟ್ಟಿದ್ದರು.

ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಾವಿಗಿರುವ ಮತ್ತೊಂದು ಕಾರಣದ ಬಗ್ಗೆ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಮಾತನಾಡಿದ್ದಾರೆ. ಈಗಾಗಲೇ ಕೊರೊನಾ ಸೋಂಕಿನ ಮೂರನೇ ಅಲೆಯಿಂದ ದೆಹಲಿ ತತ್ತರಿಸಿದೆ ಹೀಗಿರುವಾಗ ಕೊರೊನಾ ಸೋಂಕಿತರ ಸಾವಿಗೆ ತ್ಯಾಜ್ಯ ಸುಡುವಿಕೆಯೂ ಕಾರಣ ಎಂಬುದು ತಿಳಿದುಬಂದಿದೆ.

English summary
Delhi recorded 5,475 fresh COVID-19 cases in a day as the number of RT-PCR tests crossed the 28,000-mark, while 91 more fatalities pushed the city's death count to 8,811 today, authorities said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X